ಬೈಕ್ಗಳ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು, ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆ
ಬೈಕ್ಗಳ ನಡುವೇ ಭೀಕರ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ (Madanayakanahalli) ಪೊಲೀಸ್ ಠಾಣ ವ್ಯಾಪ್ತಿಯ ಸಿದ್ದನಹೊಸಹಳ್ಳಿಯಲ್ಲಿ ನಡೆದಿದೆ. ಇನ್ನು ಈ ಅಪಘಾತದ(Accident) ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು, ನ.11: ಬೈಕ್ಗಳ ನಡುವೇ ಭೀಕರ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ (Madanayakanahalli) ಪೊಲೀಸ್ ಠಾಣ ವ್ಯಾಪ್ತಿಯ ಸಿದ್ದನಹೊಸಹಳ್ಳಿಯಲ್ಲಿ ನಡೆದಿದೆ. ಇನ್ನು ಈ ಅಪಘಾತದ(Accident) ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಲ್ಲಿ ಒಂದು ಬೈಕ್ ವೇಗವಾಗಿ ಬರುತ್ತದೆ, ಈ ವೇಳೆ ಎದುರುಗಡೆಯಿಂದ ಬರುವ ಟಿಟಿ ತಪ್ಪಿಸಲು ಹೋಗಿ ಪಕ್ಕದಲ್ಲಿ ಬರುತ್ತಿದ್ದ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕುಡಿತದ ಅಮಲಿನಲ್ಲಿದ್ದವನ ಅತೀಯಾಟಕ್ಕೆ ತಾನೂ ಸಾವನ್ನಪ್ಪಿದ್ದು, ರಾಜಸ್ಥಾನ ಮೂಲದ ಕೂಲಿ ಕಾರ್ಮಿಕನ ಪ್ರಾಣ ತೆಗೆದಿದ್ದಾನೆ. ಇಲ್ಲಿ ಸಾವನ್ನಪ್ಪಿರೋದು ಓರ್ವ ರಾಜಸ್ಥಾನ ಮೂಲದ ರಾಜೇಶ್ ಹಾಗೂ ಮತ್ತೊಬ್ಬ ಬೆಂಗಳೂರು ಉತ್ತರ ತಾಲೂಕು ಹೆಗ್ಗಡದೇವನಪುರ ನಿವಾಸಿ ಧನರಾಜ್ ಎಂದು ತಿಳಿದು ಬಂದಿದೆ. ಕೂಡಲೇ ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಪೊಲೀಸರು ಅಂಬ್ಯೂಲನ್ಸ್ ಮುಖಾಂತರವಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಮೃತ ದೇಹಗಳನ್ನು ಸಾಗಿಸಿದ್ದಾರೆ. ಮತ್ತಿಬ್ಬರು ಗಂಭೀರ ಗಾಯಗಳೊಂದಿಗೆ ಪಾರಾಗಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ