Tecno Camon 30 5G: ಟೆಕ್ನೋ ಲೇಟೆಸ್ಟ್ ಸ್ಮಾರ್ಟ್ಫೋನ್ ದೇಶದಲ್ಲಿ ಬಿಡುಗಡೆ
ಸೂಪರ್ ಫೀಚರ್ಸ್ ಇರುವ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಟೆಕ್ನೋ, ಮತ್ತೊಂದು ಆಕರ್ಷಕ ಸ್ಮಾರ್ಟ್ಫೋನ್ ಪರಿಚಯಿಸಿದೆ. ದೇಶದಲ್ಲಿ ನೂತನವಾಗಿ ಟೆಕ್ನೋ ಕ್ಯಾಮನ್ 30 5G ಸರಣಿ ಸ್ಮಾರ್ಟ್ಫೋನ್ ರಿಲೀಸ್ ಆಗಿದೆ. ಇದರಲ್ಲಿ ಟೆಕ್ನೋ ಕ್ಯಾಮನ್ 30 5G ಮತ್ತು ಟೆಕ್ನೋ ಕ್ಯಾಮನ್ 30 ಪ್ರೀಮಿಯರ್ 5G ಎಂಬ ಎರಡು ಫೋನುಗಳಿವೆ.
ಬಜೆಟ್ ದರದ ಫೋನ್ಗಳಿಂದ ಆರಂಭಿಸಿ, ಸೂಪರ್ ಫೀಚರ್ಸ್ ಇರುವ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಟೆಕ್ನೋ, ಮತ್ತೊಂದು ಆಕರ್ಷಕ ಸ್ಮಾರ್ಟ್ಫೋನ್ ಪರಿಚಯಿಸಿದೆ. ದೇಶದಲ್ಲಿ ನೂತನವಾಗಿ ಟೆಕ್ನೋ ಕ್ಯಾಮನ್ 30 5G ಸರಣಿ ಸ್ಮಾರ್ಟ್ಫೋನ್ ರಿಲೀಸ್ ಆಗಿದೆ. ಇದರಲ್ಲಿ ಟೆಕ್ನೋ ಕ್ಯಾಮನ್ 30 5G ಮತ್ತು ಟೆಕ್ನೋ ಕ್ಯಾಮನ್ 30 ಪ್ರೀಮಿಯರ್ 5G ಎಂಬ ಎರಡು ಫೋನುಗಳಿವೆ. ಎರಡೂ ಹ್ಯಾಂಡ್‌ಸೆಟ್‌ಗಳು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿವೆ. ಈ ಸ್ಮಾರ್ಟ್ಫೋನ್ಗಳಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಗಳನ್ನು ನೀಡಿದ್ದು, ಆಂಡ್ರಾಯ್ಡ್ 14 ಔಟ್-ಆಫ್-ದಿ-ಬಾಕ್ಸ್ ಆಧಾರಿತ HiOS 14 ಮೂಲಕ ರನ್ ಆಗುತ್ತವೆ. ಪ್ರೀಮಿಯರ್ ಮಾದರಿಯು ಮೂರು 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಜೊತೆಗೆ ಬಲಿಷ್ಠವಾದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತವೆ. ಹೊಸ ಫೋನುಗಳ ಬೆಲೆ, ಫೀಚರ್ಸ್ ವಿವರ ಇಲ್ಲಿದೆ.
Latest Videos