ಮೊಣಕಾಲ್ಮೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಮತ್ತು ಶಾಸಕನ ನಡುವೆ ಮಾತಿನ ಜಟಾಪಟಿ!
ಅವರ ನಡುವೆ ಮಾತು ನಡೆಯುತ್ತಿದ್ದರೆ, ಶಾಸಕನ ಚೇಲಾಗಳು ವೈದ್ಯರ ಮೈಮುಟ್ಟಿ ಮಾತಾಡತೊಗುತ್ತಾರೆ. ಇದರಿಂದ ಕರ್ತವ್ಯನಿರತ ವೈದ್ಯಾಧಿಕಾರಿಗೆ ಸಹಜವಾಗೇ ಸಿಟ್ಟು ಬರುತ್ತದೆ. ನನ್ನ ಮೇಲೆ ದೌರ್ಜನ್ಯ ನಡೆಸಲು ಬಂದಿದ್ದೀರಾ? ಎಂದು ಕೇಳಿದಾಗ ಶಾಸಕ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಲಾರಂಭಿಸುತ್ತಾರೆ!
ಚಿತ್ರದುರ್ಗ: ಶಾಸಕರು ಕರ್ತವ್ಯನಿರತ ಸರ್ಕಾರಿ ನೌಕರರ (government servants’ on duty) ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುವುದು ಮತ್ತ್ತು ಧಮ್ಕಿ ಹಾಕುವುದು ಕ್ರಮೇಣ ಸಾಮಾನ್ಯವಾಗುತ್ತಿದೆ. ಎರಡು ಮೂರು ದಿನಗಳಿಂದ ನಾವು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ (Harish Poonja) ಪ್ರಕರಣವನ್ನು ವರದಿ ಮಾಡುತ್ತಿದ್ದೇವೆ. ಇವತ್ತು ಬೆಳಗ್ಗೆ ಮೊಣಕಾಲ್ಮೂರು ಸರ್ಕಾರೀ ಆಸ್ಪತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ಎನ್ ವೈ ಗೋಪಾಲಕೃಷ್ಣ (NY Goplakrishna) ಮತ್ತು ಅಲ್ಲಿನ ವೈದ್ಯಾಧಿಕಾರಿ ಡಾ ಸುಧೀಂದ್ರಬಾಬು ನಡುವೆ ಅಸ್ಪತ್ರೆಯ ದುಸ್ಥಿತಿಗೆ ಸಂಬಂಧಿಸಿದಂತೆ ಜಟಾಪಟಿ ನಡೆದಿದೆ. ಅಸಲಿಗೆ ಅಸ್ಪತ್ರೆಯಲ್ಲಿ ಮೋಂಬತ್ತಿ ಬೆಳಕಲ್ಲಿ ಚಿಕಿತ್ಸೆ ನೀಡಿದ ವಿಡಿಯೋವೊಂದು ವೈರಲ್ ಅಗಿದ್ದು ಅದನ್ನು ವಿಚಾರಿಸಲು ಶಾಸಕ ತಮ್ಮ ಬೆಂಬಲಿಗರೊಂದಿಗೆ ಬಂದಿದ್ದಾರೆ. ಆ ವಿಡಿಯೋ ತನಗೂ ಸಂಬಂಧವಿಲ್ಲ ಎಂದು ಡಾಕ್ಟರ್ ಹೇಳುತ್ತಿದ್ದರೆ, ಶಾಸಕ, ನೀವು ವಿಡಿಯೋನಲ್ಲಿ ಕಾಣಿಸುತ್ತೀರಿ ಅನ್ನುತ್ತಾರೆ. ಅವರ ನಡುವೆ ಮಾತು ನಡೆಯುತ್ತಿದ್ದರೆ, ಶಾಸಕನ ಚೇಲಾಗಳು ವೈದ್ಯರ ಮೈಮುಟ್ಟಿ ಮಾತಾಡತೊಗುತ್ತಾರೆ. ಇದರಿಂದ ಕರ್ತವ್ಯನಿರತ ವೈದ್ಯಾಧಿಕಾರಿಗೆ ಸಹಜವಾಗೇ ಸಿಟ್ಟು ಬರುತ್ತದೆ. ನನ್ನ ಮೇಲೆ ದೌರ್ಜನ್ಯ ನಡೆಸಲು ಬಂದಿದ್ದೀರಾ? ಎಂದು ಕೇಳಿದಾಗ ಶಾಸಕ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಲಾರಂಭಿಸುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Harish Poonja: ಹೈಡ್ರಾಮಾಕ್ಕೆ ತೆರೆ: ಬಂಧಿಸದೆ ವಾಪಸಾದ ಪೊಲೀಸರು, ಹರೀಶ್ ಪೂಂಜಾ ಹೇಳಿದ್ದಿಷ್ಟು