Video: ಕಾಂಗ್ರೆಸ್ ಶಾಸಕರ ಕಚೇರಿ ಆವರಣದಲ್ಲಿ ಎಮ್ಮೆಗಳನ್ನು ಕಟ್ಟಿದ ರೈತ ದಂಪತಿ
ಕಾಂಗ್ರೆಸ್ ಶಾಸಕರ ಕಚೇರಿ ಆವರಣದಲ್ಲಿ ರೈತರು ಎಮ್ಮೆಗಳನ್ನು ಕಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣ ದಂಪತಿ ಭೂಪಾಲಪಲ್ಲಿಯ ಕಾಂಗ್ರೆಸ್ ಶಾಸಕ ಗಂದ್ರ ಸತ್ಯನಾರಾಯಣ ಅವರ ಕಚೇರಿಯ ಆವರಣದಲ್ಲಿ ಎಮ್ಮೆಗಳನ್ನು ಕಟ್ಟಿದ್ದಾರೆ.ಅವರು ತಮ್ಮ ಮನೆಯ ಕೊಟ್ಟಿಗೆಯನ್ನು ಕೆಡವಲು ಅವರೇ ಕಾರಣ ಎಂದು ಆರೋಪಿಸಿದ್ದಾರೆ. ವೇಶಲ್ಲಪಲ್ಲಿ ಗ್ರಾಮದ ಕೂರಕುಲ ಒಡೆಲು ಮತ್ತು ಲಲಿತಾ ಎಂಬ ರೈತರಾದ ತಮ್ಮ ಎಮ್ಮೆಗಳ ಕೊಟ್ಟಿಗೆಯನ್ನು ಯಾವುದೇ ಮುನ್ಸೂಚನೆ ನೀಡದೆ ಕೆಡವಲಾಗಿದೆ ಎಂದು ಅವರು ಆರೋಪಿಸಿದರು.
ತೆಲಂಗಾಣ, ಆಗಸ್ಟ್ 01: ಕಾಂಗ್ರೆಸ್ ಶಾಸಕರ ಕಚೇರಿ ಆವರಣದಲ್ಲಿ ರೈತ ದಂಪತಿ ಎಮ್ಮೆಗಳನ್ನು ಕಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣ ದಂಪತಿ ಭೂಪಾಲಪಲ್ಲಿಯ ಕಾಂಗ್ರೆಸ್ ಶಾಸಕ ಗಂದ್ರ ಸತ್ಯನಾರಾಯಣ ಅವರ ಕಚೇರಿಯ ಆವರಣದಲ್ಲಿ ಎಮ್ಮೆಗಳನ್ನು ಕಟ್ಟಿದ್ದಾರೆ.ಅವರು ತಮ್ಮ ಮನೆಯ ಕೊಟ್ಟಿಗೆಯನ್ನು ಕೆಡವಲು ಅವರೇ ಕಾರಣ ಎಂದು ಆರೋಪಿಸಿದ್ದಾರೆ. ವೇಶಲ್ಲಪಲ್ಲಿ ಗ್ರಾಮದ ಕೂರಕುಲ ಒಡೆಲು ಮತ್ತು ಲಲಿತಾ ಎಂಬ ರೈತರು ತಮ್ಮ ಎಮ್ಮೆಗಳ ಕೊಟ್ಟಿಗೆಯನ್ನು ಯಾವುದೇ ಮುನ್ಸೂಚನೆ ನೀಡದೆ ಕೆಡವಲಾಗಿದೆ ಎಂದು ಅವರು ಆರೋಪಿಸಿದರು.
ಶಾಸಕರು ಹೇಳಿದ ಕಾರಣ ಸ್ಥಳೀಯ ಅಧಿಕಾರಿಗಳು ಕೆಡವಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಎಮ್ಮೆಗಳಿಗೆ ಆಶ್ರಯವಿಲ್ಲದ ಕಾರಣ ಇಲ್ಲಿ ಕಟ್ಟಿಹಾಕುವ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ. ಎಮ್ಮೆಗಳಿಗೆ ಹೊಸ ಶೆಡ್ ನಿರ್ಮಿಸುವವರೆಗೆ ಅವುಗಳನ್ನು ಇಲ್ಲಿಯೇ ಕಟ್ಟಿಹಾಕುತ್ತೇವೆ ಎಂದು ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

