ಹನುಮನ ದರ್ಶನಕ್ಕೋಸ್ಕರ ಅಂಜನಾದ್ರಿ ಬೆಟ್ಟಕ್ಕೆ ಹೋಗುವ ಭಕ್ತರಿಗೆ ಇಂದಿನಿಂದ ಸಮಯ ನಿಗದಿ

ಹನುಮನ ದರ್ಶನಕ್ಕೋಸ್ಕರ ಅಂಜನಾದ್ರಿ ಬೆಟ್ಟಕ್ಕೆ ಹೋಗುವ ಭಕ್ತರಿಗೆ ಇಂದಿನಿಂದ ಸಮಯ ನಿಗದಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 30, 2022 | 10:49 AM

ಆಗಸ್ಟ್ 30ರಿಂದ ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರಗೆ ಮಾತ್ರ ಭಕ್ತರು ಅಂಜನಾದ್ರಿ ಬೆಟ್ಟ ಹತ್ತಿ ಹನುಮನ ದರ್ಶನ ಪಡೆಯಬಹುದಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣಕ್ಕೆ ಹತ್ತಿರುವಿರುವ ಅಂಜನಾದ್ರಿ ಬೆಟ್ಟದಲ್ಲಿ (Anjanadri Betta) ಚಿರತೆಗಳ (leopard) ವಿಷಯವನ್ನು ನಾವು ಹಲವಾರು ಬಾರಿ ನಿಮ್ಮ ಗಮನಕ್ಕೆ ತಂದಿದ್ದೇವೆ. ತೀರ ಇತ್ತೀಚಿಗೆ ಅಂದರೆ ಆಗಸ್ಟ್ 12 ರಂದು ಬೆಟ್ಟದ ಮೇಲೆ ಪಾದಗಟ್ಟೆ ಬಳಿ ಚಿರತೆ ಕಾಣಿಸಿಕೊಂಡಿತ್ತು. ಈ ಹಿನೆಲೆಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ (devotees) ಸಮಯವನ್ನು ನಿಗದಿಗೊಳಿಸಿದ್ದಾರೆ. ಇಂದಿನಿಂದ ಅಂದರೆ ಆಗಸ್ಟ್ 30ರಿಂದ ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರಗೆ ಮಾತ್ರ ಭಕ್ತರು ಅಂಜನಾದ್ರಿ ಬೆಟ್ಟ ಹತ್ತಿ ಹನುಮನ ದರ್ಶನ ಪಡೆಯಬಹುದಾಗಿದೆ.