ಪ್ರವಾದಿ ಮೊಹಮ್ಮದ್ ಕುರಿತು ವಾಟ್ಸ್ಯಾಪ್ನಲ್ಲಿ ಅವಹೇಳನಕಾರಿ ಪೋಸ್ಟ್, ಬಸವಕಲ್ಯಾಣ ಪ್ರಕ್ಷುಬ್ದ
ಪೊಲೀಸರು ಮಾಳಗೆಯನ್ನು ಬಂಧಿಸಿದ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತಾದರೂ ಪಟ್ಟಣದಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
Basavakalyan: ಪ್ರವಾದಿ ಮೊಹಮ್ಮದ್ (Prophet Mohammad) ಅವರನ್ನು ಕುರಿತು ಬಿಜೆಪಿ ವಕ್ತಾರರು ಅವಹೇಳನಕಾರಿಯಾಗಿ ಮಾತಾಡಿದ ಬಳಿಕ ದೇಶದಾದ್ಯಂತ ಪ್ರತಿಭಟನೆಗಳು ಆರಂಭಗೊಂಡವು ಮತ್ತು ಪಕ್ಷವು ಅವರಿಬ್ಬರನ್ನು ಉಚ್ಚಾಟಿಸಿತು. ಹಾಗಾಗಿ, ಪ್ರತಿಭಟನೆಗಳ ತೀವ್ರತೆಯೂ ಕಡಿಮೆಯಾಯಿತು. ಆದರೆ, ಸೋಮವಾರ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ರಾಜಕುಮಾರ ಮಾಳಗೆ (Rajkumar Malge) ಹೆಸರಿನ ವ್ಯಕ್ತಿ ಪ್ರವಾದಿ ಅವರ ಬಗ್ಗೆ ವಾಟ್ಸ್ಯಾಪ್ ನಲ್ಲಿ ಕೆಟ್ಟದ್ದಾಗಿ ಪೋಸ್ಟ್ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ನೂರಾರು ಮುಸಲ್ಮಾನರು (Muslims) ಮಾಳಗೆ ವಿರುದ್ಧ ಕ್ರಮ ಅಗ್ರಹಿಸಿ ಪೊಲೀಸ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಮಾಳಗೆಯನ್ನು ಬಂಧಿಸಿದ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತಾದರೂ ಪಟ್ಟಣದಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.