AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pahelgam Terror Attack: ಮಾನವೀಯತೆ ಸತ್ತಾಗ ಮಾತ್ರ ಜನರನ್ನು ಅವರ ಪತ್ನಿ ಮತ್ತು ಮಕ್ಕಳ ಮುಂದೆ ಕೊಲ್ಲಲು ಸಾಧ್ಯ: ಸಿಟಿ ರವಿ

Pahelgam Terror Attack: ಮಾನವೀಯತೆ ಸತ್ತಾಗ ಮಾತ್ರ ಜನರನ್ನು ಅವರ ಪತ್ನಿ ಮತ್ತು ಮಕ್ಕಳ ಮುಂದೆ ಕೊಲ್ಲಲು ಸಾಧ್ಯ: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 23, 2025 | 5:17 PM

Pahelgam Terror Attack: ಭಾತೀಯರಿಗೆ ಈಗ ಘಜನಿ, ಖಿಲ್ಜಿ, ಘೋರಿ ಟಿಪ್ಪು ಸುಲ್ತಾನ್​ನಂಥ ರಾಜರು ನೆನಪಾಗುತ್ತಾರೆ, ತಮ್ಮ ಸಾಮ್ರಾಜ್ಯ ನಡೆಸುತ್ತಲೇ ಅವರು ಜನರಲ್ಲಿ ಭೀತಿ, ಆತಂಕ ಮೂಡಿಸಿ ಅವರನ್ನು ಮತಾಂತರಗೊಳಿಸುತ್ತಿದ್ದರು. ಈಗ ಜನರನ್ನು ಮತಾಂತರ ಮಾಡೋದು ಸಾಧ್ಯವಿಲ್ಲ ಅಂತ ಅವರಿಗೆ ಗೊತ್ತಾಗಿದೆ. ಹಾಗಾಗೇ, ಹೇಡಿಗಳ ರೀತಿ ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿ ಜನರನ್ನು ಕೊಲ್ಲುತ್ತಿದ್ದಾರೆ ಎಂದು ಸಿಟಿ ರವಿ ಹೇಳಿದರು.

ಬೆಂಗಳೂರು, ಏಪ್ರಿಲ್ 23: ನಗರದಲ್ಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ನಾಯಕ ಸಿಟಿ ರವಿ, ಇಸ್ಲಾಂ ಹೆಸರಲ್ಲಿ ಜಾಗತಿಕವಾಗಿ ಭಯೋತ್ಪಾದಕ ಚಟುವಟಿಕೆಗಳು ಯಾಕೆ ನಡೆಯುತ್ತಿವೆ ಅಂತ ಎಲ್ಲರಿಗೂ ಗೊತ್ತಿರುವ ವಿಷಯವೇ, ಪಹೆಲ್ಗಾಮ್ ನಲ್ಲಿ ಹಿಂದೂಗಳ ಮಾರಣಹೋಮ ನಡೆಸಿರುವ ಉಗ್ರರು, ತಾವು ಕೊಲ್ಲಲಿರುವವರನ್ನು ಯಾವ ಜಾತಿ, ಪ್ರಾಂತ್ಯ ಅಂತ ಕೇಳಿಲ್ಲ; ಅವರು ಕೇಳಿದ್ದು ಒಂದೇ-ನೀನು ಹಿಂದೂನೋ ಅಥವಾ ಮುಸ್ಲಿಂ? ಮುಸ್ಲಿಂ ಅಲ್ಲ ಎಂದವನನ್ನು ನಿರ್ದಯತೆಯಿಂದ ಅವನ ಪತ್ನಿ ಹಾಗೂ ಚಿಕ್ಕಮಕ್ಕಳ ಮುಂದೆಯೇ ಗುಂಡು ಹಾರಿಸಿ ಕೊಂದು ಹಾಕಿದ್ದಾರೆ ಎಂದು ಹೇಳಿದರು. ಮಾನವೀಯತೆ ಸತ್ತಾಗ ಮಾತ್ರ ಇಂಥ ಮಾರಣಹೋಮಗಳು ನಡೆಯುವುದು ಸಾಧ್ಯ ಎಂದು ರವಿ ಹೇಳಿದರು.

ಇದನ್ನೂ ಓದಿ:  Pahelgam Terrorist Attack; ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಯಿದೆ: ಸತೀಶ್ ಜಾರಕಿಹೊಳಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ