ಪಹಲ್ಗಾಮ್ ಉಗ್ರರ ದಾಳಿಯಿಂದ ಗ್ರೇಟ್ ಎಸ್ಕೆಪ್ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 27 ಜನರು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ 13 ಜನರು ಕಾಶ್ಮೀರ ಪ್ರವಾಸದಲ್ಲಿದ್ದರು ಮತ್ತು ಅದೃಷ್ಟವಶಾತ್ ದಾಳಿಯಿಂದ ಪಾರಾಗಿದ್ದಾರೆ. ಕಿಶೋರ್, ಸೂರಜ್, ಗಿರೀಶ್ ಕಾಸಟ್ ಮತ್ತು ನಿತೀಶ್ ಬಂಗ್ ಕುಟುಂಬಗಳು ಈ ಅಪಾಯದಿಂದ ಪಾರಾಗಿರುವುದು ಅಚ್ಚರಿಯ ಸಂಗತಿ. ಅವರ ಅನುಭವ ಮತ್ತು ಪಾರಾಗುವಿಕೆಯ ಕಥೆಯನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
ಬಾಗಲಕೋಟೆ, ಏಪ್ರಿಲ್ 23: ಜಮ್ಮು-ಕಾಶ್ಮೀರದ (Jammu-Kashmir) ಪಹಲ್ಗಾಮ್‌ನಲ್ಲಿ ಬುಧವಾರ ಸಂಜೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ (Pahalgam Terror Attack) ನಡೆಸಿದ್ದಾರೆ. ಉಗ್ರರ ಗುಂಡಿಗೆ ಇಬ್ಬರು ಕನ್ನಡಿಗರು ಸೇರಿದಂತೆ 27 ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ 13 ಜನರು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದು, ಉಗ್ರರ ದಾಳಿಯಿಂದ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಕಿಶೋರ್ ಕಾಸಟ್, ಸೂರಜ್ ಕಾಸಟ್, ಗಿರೀಶ್ ಕಾಸಟ್, ನಿತೀಶ್ ಬಂಗ್ ನಾಲ್ಕು ಕುಟುಂಬ ಕಾಶ್ಮೀರ ಪ್ರವಾಸಕ್ಕೆ ತೆರಳಿದೆ. ಉಗ್ರರ ದಾಳಿಯಿಂದ ತಾವು ಹೇಗೆ ಪಾರಾದೇವು ಎಂದು ಆನಂದ ಕಾಸಟ್ ಟಿವಿ9ಗೆ ತಳಿಸಿದ್ದಾರೆ.
Latest Videos