ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ

Updated on: Sep 11, 2026 | 9:02 PM

ಅಗ್ನಿ ಪರೀಕ್ಷೆ ಮೂಲಕ ‘ಬಿಗ್​ ಬಾಸ್ ಕನ್ನಡ 13’ ಶೋಗೆ 4 ಸ್ಪರ್ಧಿಗಳು ಬಂದಿದ್ದಾರೆ. ಅವರ ಬಗ್ಗೆ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಮಾತನಾಡಿದ್ದಾರೆ. ಕಾಮನರ್ ಆಗಿ ಬಂದಿರುವ ಮಂಜ ಮೊದಲ ವಾರವೇ ಭಾರಿ ಸದ್ದು ಮಾಡಿದ್ದಾರೆ. ಆದರೆ 1 ವಾರ ಕಳೆಯುವುದರೊಳಗೆ ಅವರು ಕಾಮಿಡಿ ಪೀಸ್ ಆಗುತ್ತಾರೆ ಎಂಬುದು ತಾಂಡವ್ ಅಭಿಪ್ರಾಯ.

ಅಗ್ನಿ ಪರೀಕ್ಷೆ ಮೂಲಕ ‘ಬಿಗ್​ ಬಾಸ್ ಕನ್ನಡ ಸೀಸನ್ 13’ ಶೋಗೆ ನಾಲ್ಕು ಸ್ಪರ್ಧಿಗಳು ಬಂದಿದ್ದಾರೆ. ಅವರ ಬಗ್ಗೆ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಅವರು ಮಾತನಾಡಿಕೊಂಡಿದ್ದಾರೆ. ಕಾಮನರ್ ಆಗಿ ಬಂದಿರುವ ಮಂಜ ಮೊದಲ ವಾರವೇ ಭಾರಿ ಸದ್ದು ಮಾಡಿದ್ದಾರೆ. ಆದರೆ ಒಂದು ವಾರ ಕಳೆಯುವುದರೊಳಗೆ ಅವರು ಕಾಮಿಡಿ ಪೀಸ್ ಆಗುತ್ತಾರೆ ಎಂಬುದು ತಾಂಡವ್ ರಾಮ್ ಅಭಿಪ್ರಾಯ. ಆ ಬಗ್ಗೆ ಅವರು ಗಗನ್ ಚಿನ್ನಪ್ಪ ಜೊತೆ ಚರ್ಚೆ ಮಾಡಿದ್ದಾರೆ. ‘ಈ ಶೋಗೆ ಅವನು ಬಂದಿದ್ದು ಒಳ್ಳೆಯದೇ ಆಯಿತು. ಅವನನ್ನು ಕೆಣಕಿ ಮಜಾ ಮಾಡಬಹುದು. ಅವನ ಡೈಲಾಗ್ ಖಾಲಿ ಆಯಿತು. ಇನ್ನೊಂದು ವಾರದಲ್ಲಿ ಅವನು ಚಿಂದಿ, ಚಿತ್ರನ್ನ ಕಾಮಿಡಿ ಪೀಸ್ ಆಗ್ತಾನೆ’ ಎಂದು ತಾಂಡವ್ ರಾಮ್ ಅವರು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ನಡೆಸಿಕೊಡಲಿರುವ ವಾರಾಂತ್ಯದ ಸಂಚಿಕೆ ನೋಡಲು ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More