‘ಮಿಸ್ಟರ್ ಜಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ; ನಂದಿನಿ ಪಾತ್ರದ ಬಗ್ಗೆ ಮಾಹಿತಿ

Edited By:

Updated on: Nov 27, 2026 | 1:11 PM

ಸಿನಿಮಾಗಳ ಆಯ್ಕೆ ಕುರಿತು ಸ್ಪಷ್ಟನೆ ನೀಡಿರುವ ನಟಿ ತಪಸ್ವಿನಿ ಪೂಣಚ್ಚ, ಕಥೆ ಹಾಗೂ ಪಾತ್ರಗಳಿಗೆ ಪ್ರಾಮುಖ್ಯತೆ ನೀಡುತ್ತೇನೆ ಎಂದಿದ್ದಾರೆ. 60ಕ್ಕೂ ಹೆಚ್ಚು ಚಿತ್ರಗಳನ್ನು ನಿರಾಕರಿಸಿದ ಕುರಿತು ಮಾತನಾಡಿದ ಅವರು, ಮಿಸ್ಟರ್ ಜಾಕ್ ಚಿತ್ರದ ಮೂಲಕ ನಂದಿನಿಯಾಗಿ ಪ್ರೇಕ್ಷಕರನ್ನು ತಲುಪಲು ಸಿದ್ಧರಾಗಿದ್ದಾರೆ. ಕನ್ನಡವನ್ನು ಪ್ರತಿನಿಧಿಸುವ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ನಟಿ ತಪಸ್ವಿನಿ ಪೂಣಚ್ಚ ಅವರು ತಮ್ಮ ಸಿನಿಮಾ ಆಯ್ಕೆಗಳ ಬಗ್ಗೆ ಅಭಿಮಾನಿಗಳಲ್ಲಿ ಇರುವ ಕೆಲವು ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಹಿಂದೆ 60ಕ್ಕೂ ಹೆಚ್ಚು ಚಿತ್ರಗಳನ್ನು ನಿರಾಕರಿಸಿದ ಕುರಿತು ಮಾತನಾಡಿದ್ದ ಅವರು, ‘ನಾನು ಹೇಳಿದ್ದು ಆ ಇಂಟೆನ್ಶನ್‌ನಲ್ಲಿ ಅಲ್ಲ, ಏನೇ ಹೇಳಿದ್ರೂ ಪ್ರಾಬ್ಲಂ ಸರ್’ ಎಂದಿದ್ದಾರೆ.

ಪ್ರತಿ ಚಿತ್ರದಲ್ಲೂ ಪಾತ್ರದ ಗುಣಮಟ್ಟ ಮತ್ತು ಅದು ನೀಡುವ ಸಂದೇಶಕ್ಕೆ ತಾನು ಪ್ರಾಮುಖ್ಯತೆ ನೀಡುತ್ತೇನೆ ಎಂದು ತಪಸ್ವಿನಿ ಹೇಳಿದ್ದಾರೆ. ಕೇವಲ ಹಣಕ್ಕಾಗಿ ಅಥವಾ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ಮಾಡುವುದಕ್ಕಿಂತ ಉತ್ತಮ ಕಥಾಹಂದರ ಇರುವ, ಪ್ರೇಕ್ಷಕರನ್ನು ತಲುಪುವ ಒಂದು ಸಿನಿಮಾವನ್ನು ಮಾಡುವುದು ನನ್ನ ಆಶಯ ಎಂದಿದ್ದಾರೆ.

ಡಿಸೆಂಬರ್ 4ರಂದು ತೆರೆಕಾಣಲಿರುವ ಮಿಸ್ಟರ್ ಜಾಕ್ ಚಿತ್ರದಲ್ಲಿ ತಪಸ್ವಿನಿ ಪೂಣಚ್ಚ ನಂದಿನಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಮೂಲಕ ಪ್ರೇಕ್ಷಕರಿಗೆ ವಿಶೇಷ ಸಂದೇಶ ನೀಡುವ ಭರವಸೆ ನೀಡಿದ್ದಾರೆ. ‘ನಾನು ಸೌಂದರ್ಯದಿಂದ ನಿಮ್ಮನ್ನು ಗೆಲ್ಲಲು ಬಂದಿಲ್ಲ, ಡಿ-ಗ್ಲಾಮ್ ಲುಕ್‌ನಲ್ಲಿ ಆರ್ಥೋಡಾಕ್ಸ್ ಟೀಚರ್ ಪಾತ್ರ ನಿರ್ವಹಿಸಿದ್ದೇನೆ. ನಿಮ್ಮ ಸುತ್ತಮುತ್ತ ನಡೆಯುವ ಕಥೆಯಾಗಿರುವುದರಿಂದ ಇದು ಪ್ರೇಕ್ಷಕರಿಗೆ ಕನೆಕ್ಟ್ ಆಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More