ಗಲಭೆಕೋರ ಬಂಧಿತ ಸೈಮುದ್ದೀನ್ಗೆ ವಿದೇಶಗಳಿಂದ ಹರಿದು ಬರ್ತಿತ್ತು ಕೋಟ್ಯಾಂತರ ಹಣ!?
[lazy-load-videos-and-sticky-control id=”YyurfxiRttg”] ಬೆಂಗಳೂರು:ಡಿ.ಜೆ ಹಳ್ಳಿ ಹಾಗೂ ಕೆ.ಜಿಹಳ್ಳಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನೂರಾರು ಗಲಭೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಪ್ರಮುಖ ಆರೋಪಿ ಎನ್ನಲಾದ ಸಯ್ಯದ್ ಸಮೀಮುದ್ದೀನ್ನನ್ನು ಸಿಸಿಬಿ ಅಧಿಕಾರಿಗಳು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಮಡಿಕೇರಿ ಮೂಲದವನಾದ ಬಂಧಿತ ಆರೋಪಿ ಸಯ್ಯದ್ ಸಮೀಮುದ್ದೀನ್ ಬೆಂಗಳೂರಿನಲ್ಲಿ ದೊಡ್ಡ ನೆಟ್ವರ್ಕ್ ಹೊಂದಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಿಂದ ತೀವ್ರ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಭಯಾನಕ ಸತ್ಯ ತಿಳಿದುಬರುತ್ತಿದೆ. ಬೆಂಗಳೂರಿನಲ್ಲಿ ತನ್ನ ಹೆಂಡತಿ ಸಮ್ರೂಮ್ ಹೆಸರಲ್ಲಿ NGO ಸಂಸ್ಥೆ ನಡೆಸುತ್ತಿರುವ ಸಯ್ಯದ್ […]
[lazy-load-videos-and-sticky-control id=”YyurfxiRttg”]
ಬೆಂಗಳೂರು:ಡಿ.ಜೆ ಹಳ್ಳಿ ಹಾಗೂ ಕೆ.ಜಿಹಳ್ಳಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನೂರಾರು ಗಲಭೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಪ್ರಮುಖ ಆರೋಪಿ ಎನ್ನಲಾದ ಸಯ್ಯದ್ ಸಮೀಮುದ್ದೀನ್ನನ್ನು ಸಿಸಿಬಿ ಅಧಿಕಾರಿಗಳು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.
ಮಡಿಕೇರಿ ಮೂಲದವನಾದ ಬಂಧಿತ ಆರೋಪಿ ಸಯ್ಯದ್ ಸಮೀಮುದ್ದೀನ್ ಬೆಂಗಳೂರಿನಲ್ಲಿ ದೊಡ್ಡ ನೆಟ್ವರ್ಕ್ ಹೊಂದಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಿಂದ ತೀವ್ರ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಭಯಾನಕ ಸತ್ಯ ತಿಳಿದುಬರುತ್ತಿದೆ.
ಬೆಂಗಳೂರಿನಲ್ಲಿ ತನ್ನ ಹೆಂಡತಿ ಸಮ್ರೂಮ್ ಹೆಸರಲ್ಲಿ NGO ಸಂಸ್ಥೆ ನಡೆಸುತ್ತಿರುವ ಸಯ್ಯದ್ ಸಮೀಮುದ್ದೀನ್, RSS ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳೊಂದಿಗೆ ನಿತ್ಯ ಸಂಪರ್ಕದಲ್ಲಿದ್ದ ಎನ್ನಲಾಗಿದೆ. NGO ಸಂಸ್ಥೆ ಹೊಂದಿರುವ ಸಯ್ಯದ್ ಸಮೀಮುದ್ದೀನ್ಗೆ ವಿದೇಶಗಳಿಂದ ಕೋಟ್ಯಂತರ ರೂಪಾಯಿ ಅನುದಾನ ಹಣ ಹರಿದು ಬಂದಿರುವುದು ಬೆಳಕಿಗೆ ಬಂದಿದೆ.
ಈ ಹಣದ ಮೂಲವನ್ನು ಸಿಸಿಬಿ ಪೊಲೀಸರು ಹುಡುಕುತ್ತಿದ್ದಾರೆ. ಉಗ್ರ ಸಂಘಟನೆಯ ಮುಖಂಡರೊಂದಿಗೆ ಆರೋಪಿ ಸಯ್ಯದ್ ಸಮೀಮುದ್ದೀನ್ಗೆ ಲಿಂಕ್ ಇದೆ ಎನ್ನಲಾಗಿದ್ದು, ಡಿ.ಜೆ ಹಳ್ಳಿ ಹಾಗೂ ಕೆ.ಜಿಹಳ್ಳಿ ಹಿಂಸಾಚಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸಯ್ಯದ್ ಸಮೀಮುದ್ದೀನ್ ಮಾಡಿದ್ದನಾ? ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
Published On - 11:51 am, Wed, 19 August 20