ಬೆಂಗಳೂರು: ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​​ ಹೊರ ಬಂದು ಅವಾಂತರ; ಬೆಳಿಗ್ಗೆಯಿಂದ 8 ವಾಹನಗಳು ಪಂಚರ್​

| Updated By: ವಿವೇಕ ಬಿರಾದಾರ

Updated on: Nov 22, 2022 | 3:14 PM

ಕೆ.ಆರ್​.ಮಾರ್ಕೆಟ್-ಮೈಸೂರು ರಸ್ತೆಗೆ ಸಂಪರ್ಕಿಸುವ ಬಾಲಗಂಗಾಧರನಾಥ ಸ್ವಾಮಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​ಗಳು ​ಹೊರಬಂದು ನಿತ್ಯ ವಾಹನಗಳು ಪಂಕ್ಚರ್​​ ಆಗುತ್ತಿವೆ.

ಬೆಂಗಳೂರಿನ ಕೆ.ಆರ್​.ಮಾರ್ಕೆಟ್-ಮೈಸೂರು ರಸ್ತೆಗೆ ಸಂಪರ್ಕಿಸುವ ಬಾಲಗಂಗಾಧರನಾಥ ಸ್ವಾಮಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​ಗಳು ​ಹೊರಬಂದು ನಿತ್ಯ ವಾಹನಗಳು ಪಂಕ್ಚರ್​​ ಆಗುತ್ತಿವೆ. ಇದರಿಂದ ವಾಹನ ಸವಾರರು ​ನಿತ್ಯ ಟ್ರಾಫಿಕ್ ಜಾಮ್​ ಕಿರಿಕಿರಿ ಅನುಭವಿಸುತ್ತಿದ್ದಾರೆ. ಫ್ಲೈಓವರ್​ನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದಿದ್ದರಿಂದ ಬೋಲ್ಟ್​​ಗಳು ಮೇಲೆ ಬಂದಿವೆ. ಬೆಳಗ್ಗೆಯಿಂದ ಬಸ್, ಲಾರಿಗಳು ಸೇರಿ ಸುಮಾರು 8 ವಾಹನಗಳ ಟೈರ್ ಪಂಚರ್​ ಆಗಿವೆ. ಸರಿಯಾಗಿ ಫ್ಲೈ ಓವರ್ ನಿರ್ವಹಣೆ ಮಾಡದ ಪಾಲಿಕೆ ವಿರುದ್ಧ ಚಾಲಕರು ಕಡಿಕಾರುತ್ತಿದ್ದಾರೆ. ವೇಗವಾಗಿ ಬಂದ ವಾಹನ ಪಲ್ಟಿ ಆದ್ರೆ ಯಾರು ಹೊಣೆ? ಸದ್ಯ ಬೋಲ್ಟ್ ಎದ್ದ ಜಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ಇದಕ್ಕೆ ಶ್ವಾಶ್ವತ ಪರಿಹಾರ ನೀಡಬೇಕೆಂದು ಚಾಲಕರು ಆಗ್ರಹಿಸುತ್ತಿದ್ದಾರೆ.

Published on: Nov 22, 2022 03:11 PM