ರಾಜಕೀಯ ಮೇಲಾಟ: ಎಂಟಿಬಿಗೆ ಟಾಂಗ್ ನೀಡಲು ಶರತ್​ನನ್ನು ಭುಜದ ಮೇಲೆ ನಿಲ್ಲಿಸಿಕೊಂಡ ಬೆಂಬಲಿಗರು!

ಹೊಸಕೋಟೆಯಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಚಿವ ಎಂಟಿಬಿ ಹಾಗೂ ಶಾಸಕ ಶರತ್ ಅವರನ್ನು ಬೆಂಬಲಿಗರು ಮೇಲೆತ್ತಿ ಜಯಕಾರ ಕೂಗಿದರು.

TV9kannada Web Team

| Edited By: Rakesh Nayak Manchi

Nov 22, 2022 | 6:37 PM

ದೇವನಹಳ್ಳಿ: ಸಚಿವ ಎಂಟಿಬಿ ನಾಗರಾಜ್ (MTB Nagaraj) ಮತ್ತು ಶಾಸಕ ಶರತ್ ಬಚ್ಚೇಗೌಡ (MLA Sharath Bache Gowda)​ ನಡುವೆ ಹಾಗೂ ಅವರ ಬೆಂಬಲಿಗರ ನಡುವೆ ಜಿದ್ದಾಜಿದ್ದಿ ನಡೆಯುತ್ತಲೇ ಇರುತ್ತದೆ. ಈ ಜಿದ್ದಾಜಿದ್ದಿ ಇಂದು ನಡೆದ ಶಂಕುಸ್ಥಾನಪನೆ (Foundation stone) ಕಾರ್ಯಕ್ರಮದಲ್ಲೂ ನಡೆಯಿತು. ಕೊಳತೂರು ಬಳಿ ತಾಯಿ, ಮಗು ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಶಾಸಕರ ಕಡೆಯವರಿಗೆ ಆಹ್ವಾನ ನೀಡಿಲ್ಲ ಎಂದು ಗದ್ದಲ ಏರ್ಪಟ್ಟಿತ್ತು. ಸಚಿವ ಎಂಟಿಬಿ, ಶಾಸಕ ಶರತ್​ ಬೆಂಬಲಿಗರಿಂದ ಪರಸ್ಪರ ಘೋಷಣೆಗಳು ನಡೆಯಿತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ತಮ್ಮ ನಾಯಕರನ್ನ ಮೇಲೆತ್ತಿ ಜೈಕಾರ ಕೂಗಲು ಆರಂಭಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್ ಅವರನ್ನ ಭುಜದ ಮೇಲೆ‌ ಕೂರಿಸಿಕೊಂಡು ಬಿಜೆಪಿ ಕಾರ್ಯಕರ್ತರ ಸಂಭ್ರಮಿಸಿದರು. ಇವರಿಗೆ ಟಾಂಗ್ ಕೊಡುವ ನಿಟ್ಟಿನಲ್ಲಿ ಶರತ್ ಬೆಂಬಲಿಗರು ಶರತ್ ಅವರನ್ನು ಮೇಲಕ್ಕೆತ್ತಿ ಜೈಕಾರ ಘೋಷಣೆಗಳನ್ನು ಕೂಗಿದರು. ಎರಡು‌‌ ಕಡೆಯವರ ಜಿದ್ದಾಜಿದ್ದಿ ಕಂಡು ನೆರೆದಿದ್ದ ಜನರಿಗೆ ಬಿಟ್ಟಿ ಮನಃರಂಜನೆಯೂ ಸಿಕ್ಕಿತು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada