‘ಕೆಜಿಎಫ್’ ತಾತ ಈಗ ಕಾಶ್ಮೀರಿ ಪಂಡಿತ; ಈ ವಯಸ್ಸಲ್ಲೂ ಕಾಡಲ್ಲಿ ಓಡಿದ ಕೃಷ್ಣ

‘ಕೆಜಿಎಫ್’ ತಾತ ಈಗ ಕಾಶ್ಮೀರಿ ಪಂಡಿತ; ಈ ವಯಸ್ಸಲ್ಲೂ ಕಾಡಲ್ಲಿ ಓಡಿದ ಕೃಷ್ಣ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 23, 2022 | 9:46 AM

ಕೃಷ್ಣ ಅವರು ‘ಕೆಜಿಎಫ್’ ಸರಣಿಯಲ್ಲಿ ಮಾಡಿದ ಅಂಧ ತಾತನ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ‘ಕೆಜಿಎಫ್’ ಬಳಿಕ ಅವರಿಗೆ ಹಲವು ಆಫರ್​ಗಳು ಬಂದಿವೆ.

ಹಲವು ಪಾತ್ರಗಳು ಕೆಲವೇ ನಿಮಿಷ ತೆರೆಮೇಲೆ ಬಂದರೂ ಅವು ನೀಡುವ ಪರಿಣಾಮ ತುಂಬಾನೇ ದೊಡ್ಡದು. ಇದಕ್ಕೆ ‘ಕೆಜಿಎಫ್​’ (KGF) ತಾತ ಕೃಷ್ಣ (KGF Krishna) ಉತ್ತಮ ಉದಾಹರಣೆ. ಅವರು ‘ಕೆಜಿಎಫ್’ ಸರಣಿಯಲ್ಲಿ ಮಾಡಿದ ಅಂಧ ತಾತನ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ‘ಕೆಜಿಎಫ್’ ಬಳಿಕ ಅವರಿಗೆ ಹಲವು ಆಫರ್​ಗಳು ಬಂದಿವೆ. ಈಗ ಅವರು ‘ವಿಧಿ 370’ ಚಿತ್ರದಲ್ಲಿ ಕಾಶ್ಮೀರಿ ಪಂಡಿತನ ಪಾತ್ರ ಮಾಡುತ್ತಿದ್ದಾರೆ. ಶ್ರುತಿ, ಶಶಿಕುಮಾರ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.