Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ರಿಲೀಸ್ ವಿಚಾರದಲ್ಲಿ ‘ಕೆಜಿಎಫ್ 2’ ಹಾದಿಯನ್ನೇ ಅನುಸರಿಸಿದ ನಿರ್ದೇಶಕ ಸುಕುಮಾರ್?

ಮೂಲಗಳ ಪ್ರಕಾರ 2024ರ ಏಪ್ರಿಲ್​ನಲ್ಲಿ ‘ಪುಷ್ಪ 2’ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡಕ್ಕೆ ಇದೆ. ಅಂದರೆ ‘ಪುಷ್ಪ’ ಚಿತ್ರ ರಿಲೀಸ್ ಆಗಿ ಸುಮಾರು ಮೂರು ವರ್ಷಗಳ ಬಳಿಕ ಸೀಕ್ವೆಲ್ ರಿಲೀಸ್ ಆಗಲಿದೆ.

‘ಪುಷ್ಪ 2’ ರಿಲೀಸ್ ವಿಚಾರದಲ್ಲಿ ‘ಕೆಜಿಎಫ್ 2’ ಹಾದಿಯನ್ನೇ ಅನುಸರಿಸಿದ ನಿರ್ದೇಶಕ ಸುಕುಮಾರ್?
ಯಶ್-ಅಲ್ಲು ಅರ್ಜುನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 14, 2022 | 5:54 PM

‘ಕೆಜಿಎಫ್ 2’ (KGF Chapter 2)ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಆ ನಿರೀಕ್ಷೆ ಹುಸಿ ಆಗಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಸಿನಿಮಾ ತಂಡಕ್ಕೆ ಒಂದಷ್ಟು ವಿಚಾರ ಸಹಕಾರಿ ಆಗಿತ್ತು . ಈಗ ‘ಪುಷ್ಪ 2’ (Pushpa 2) ತಂಡ ಕೂಡ ಇದೇ ಹಾದಿಯಲ್ಲಿ ಹೋಗುವ ಸೂಚನೆ ನೀಡಿದೆ. ಹೊಂಬಾಳೆ ಫಿಲ್ಮ್ಸ್ಹಾದಿಯಲ್ಲಿ ಹೋಗಲು ಸುಕುಮಾರ್ ಹೇಗೆ ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

‘ಕೆಜಿಎಫ್’ ಸಿನಿಮಾ ತೆರೆಗೆ ಬಂದಿದ್ದು 2018ರ ಡಿಸೆಂಬರ್​ನಲ್ಲಿ. ಈ ಚಿತ್ರ ಯಶಸ್ಸು ಕಂಡಿತು. ಇದಾದ ನಾಲ್ಕು ವರ್ಷಗಳ ಬಳಿಕ ‘ಕೆಜಿಎಫ್ 2’ ರಿಲೀಸ್ ಆಯಿತು. ಸೀಕ್ವೆಲ್ ವಿಳಂಬ ಆಗಲು ಕೊವಿಡ್ ಕೂಡ ಕಾರಣ ಆಗಿತ್ತು. ಆದರೆ, ಇದು ಚಿತ್ರತಂಡಕ್ಕೆ ವರದಾನವಾಗಿತ್ತು. ನಾಲ್ಕು ವರ್ಷಗಳ ಅವಧಿಯಲ್ಲಿ ಚಿತ್ರಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿತ್ತು. ಈಗ ‘ಪುಷ್ಪ 2’ ತಂಡ ಕೂಡ ಸಿನಿಮಾದ ಕೆಲಸವನ್ನು ವಿಳಂಬ ಮಾಡುತ್ತಿದೆ. ಈ ಮೂಲಕ ‘ಕೆಜಿಎಫ್ 2’ ತಂತ್ರದ ಮೊರೆ ಹೋಗಿದೆ.

ಮೂಲಗಳ ಪ್ರಕಾರ 2024ರ ಏಪ್ರಿಲ್​ನಲ್ಲಿ ‘ಪುಷ್ಪ 2’ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡಕ್ಕೆ ಇದೆ. ಅಂದರೆ ‘ಪುಷ್ಪ’ ಚಿತ್ರ ರಿಲೀಸ್ ಆಗಿ ಸುಮಾರು ಮೂರು ವರ್ಷಗಳ ಬಳಿಕ ಸೀಕ್ವೆಲ್ ರಿಲೀಸ್ ಆಗಲಿದೆ. ಈ ಮೂಲಕ ‘ಕೆಜಿಎಫ್ 2’ ತಂತ್ರವನ್ನೇ ಸುಕುಮಾರ್ ಆ್ಯಂಡ್ ಟೀಂ ಪಾಲಿಸುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
Image
‘ಕೆಜಿಎಫ್: ಚಾಪ್ಟರ್​​ 2’ ಸಿನಿಮಾ ಹಿಟ್​ ಆದ್ಮೇಲೆ ಶ್ರೀನಿಧಿ ಶೆಟ್ಟಿ ಕೇಳ್ತಿರುವ ಸಂಭಾವನೆ ಎಷ್ಟು ಕೋಟಿ?
Image
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಆರಂಭದಲ್ಲೇ ‘ಪುಷ್ಪ 2’ ಶೂಟಿಂಗ್ ಆರಂಭ ಆಗಬೇಕಿತ್ತು. ಆದರೆ, ಅನಗತ್ಯವಾಗಿ ಚಿತ್ರದ ಶೂಟಿಂಗ್ ವಿಳಂಬವಾಗಿದೆ. ಸದ್ಯ ಕೆಲವೇ ಕೆಲವು ದೃಶ್ಯಗಳ ಶೂಟ್ ಮಾಡಲಾಗಿದೆ. ಡಿಸೆಂಬರ್​​ನಿಂದ ಪೂರ್ಣ ಪ್ರಮಾಣದಲ್ಲಿ ಶೂಟಿಂಗ್ ಆರಂಭ ಆಗಲಿದೆ. ಹಲವು ತಿಂಗಳು ಚಿತ್ರದ ಶೂಟಿಂಗ್ ನಡೆಯಲಿದೆ. ಆ ಬಳಿಕವಷ್ಟೇ ಪೋಸ್ಟ್ ಪ್ರೊಡಕ್ಷನ್ ಆರಂಭ ಆಗಲಿದೆ.

ಇದನ್ನೂ ಓದಿ: ‘ಪುಷ್ಪ 2’ ಚಿತ್ರಕ್ಕೆ ಶೂಟಿಂಗ್ ಆರಂಭಿಸಿದ ನಟ ಅಲ್ಲು ಅರ್ಜುನ್; ಹೇಗಿದೆ ನೋಡಿ ಲುಕ್

ಕಾಕತಾಳೀಯ ಎಂಬಂತೆ ‘ಕೆಜಿಎಫ್’ ರಿಲೀಸ್ ಆಗಿದ್ದು ಡಿಸೆಂಬರ್​​ನಲ್ಲಿ (2018). ‘ಪುಷ್ಪ’ ಬಿಡುಗಡೆ ಆಗಿದ್ದೂ ಡಿಸೆಂಬರ್​ನಲ್ಲಿ (2021). ‘ಕೆಜಿಎಫ್ 2’ ರಿಲೀಸ್ ಆಗಿದ್ದು ಏಪ್ರಿಲ್​ನಲ್ಲಿ (2022). ‘ಪುಷ್ಪ 2’ ಟೀಂ ಕೂಡ ಸಿನಿಮಾನ ಏಪ್ರಿಲ್​ನಲ್ಲೇ ರಿಲೀಸ್ ಮಾಡಬಹುದು ಎನ್ನಲಾಗುತ್ತಿದೆ. ‘ಪುಷ್ಪ 2’ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

Published On - 5:51 pm, Mon, 14 November 22