AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಚಿತ್ರಕ್ಕೆ ಶೂಟಿಂಗ್ ಆರಂಭಿಸಿದ ನಟ ಅಲ್ಲು ಅರ್ಜುನ್; ಹೇಗಿದೆ ನೋಡಿ ಲುಕ್

ಕೆಲ ತಿಂಗಳ ಹಿಂದೆ ‘ಪುಷ್ಪ 2’ ಚಿತ್ರದ ಶೂಟಿಂಗ್​ಗೆ ಚಾಲನೆ ನೀಡಲಾಗಿತ್ತು. ಕೆಲ ದೃಶ್ಯಗಳ ಶೂಟಿಂಗ್ ಪೂರ್ಣಗೊಂಡಿತ್ತು. ಅಲ್ಲು ಅರ್ಜುನ್ ಅವರ ಭಾಗದ ಶೂಟಿಂಗ್ ಸರಿಯಾಗಿ ಆರಂಭ ಆಗಿರಲಿಲ್ಲ. ಈಗ ಅಲ್ಲು ಅರ್ಜುನ್ ಅವರು ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದ್ದಾರೆ.

‘ಪುಷ್ಪ 2’ ಚಿತ್ರಕ್ಕೆ ಶೂಟಿಂಗ್ ಆರಂಭಿಸಿದ ನಟ ಅಲ್ಲು ಅರ್ಜುನ್; ಹೇಗಿದೆ ನೋಡಿ ಲುಕ್
ಅಲ್ಲು ಅರ್ಜುನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 01, 2022 | 9:37 AM

ಅಲ್ಲು ಅರ್ಜುನ್ (Allu Arjun)  ನಟನೆಯ ‘ಪುಷ್ಪ 2’ ಚಿತ್ರದ ಬಗ್ಗೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಪುಷ್ಪ’ ಚಿತ್ರ (Pushpa Movie) ಹಿಟ್ ಆಗಿ ಒಂದು ವರ್ಷದ ಬಳಿಕ ಸೀಕ್ವೆಲ್​ಗೆ ಶೂಟಿಂಗ್ ಆರಂಭ ಆಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಇಟ್ಟುಕೊಂಡಿರುವ ನಿರೀಕ್ಷೆಯನ್ನು ಹುಸಿ ಮಾಡಬಾರದು ಎಂಬ ನಿಟ್ಟಿನಲ್ಲಿ ನಿರ್ದೇಶಕ ಸುಕುಮಾರ್ ಅವರು ಪ್ರಯತ್ನಿಸುತ್ತಿದ್ದಾರೆ. ಈಗ ‘ಪುಷ್ಪ 2’ ಸಿನಿಮಾಗೆ ಚಿತ್ರೀಕರಣ ಆರಂಭ ಆಗಿದೆ. ಅಲ್ಲು ಅರ್ಜುನ್ ಅವರ ಸ್ಟೈಲಿಶ್ ಲುಕ್ ಎಲ್ಲರ ಗಮನ ಸೆಳೆದಿದೆ.

2021ರ ಡಿಸೆಂಬರ್ ತಿಂಗಳಲ್ಲಿ ‘ಪುಷ್ಪ’ ಚಿತ್ರ ರಿಲೀಸ್ ಆಯಿತು. ರಕ್ತ ಚಂದನ ಮರಗಳ ಕಳ್ಳ ಸಾಗಣೆಯ ಕುರಿತು ಈ ಸಿನಿಮಾ ಇದೆ. ಓರ್ವ ದಿನಗೂಲಿ ವ್ಯಕ್ತಿ ಹೇಗೆ ರಕ್ತ ಚಂದನ ಕಳ್ಳ ಸಾಗಣೆಯ ದಂಧೆಯಲ್ಲಿ ಭಾಗಿಯಾಗಿ, ಅದಕ್ಕೆ ಅಧಿಪತಿ ಆಗುತ್ತಾನೆ ಎಂಬುದನ್ನು ತೋರಿಸಲಾಗಿದೆ. ಈಗ ಎರಡನೇ ಪಾರ್ಟ್​ನಲ್ಲಿ ಆತನ ಆಳ್ವಿಕೆ ಹೈಲೈಟ್ ಆಗಲಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗ ಸೆಟ್​ನ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
Image
‘ಕೆಜಿಎಫ್: ಚಾಪ್ಟರ್​​ 2’ ಸಿನಿಮಾ ಹಿಟ್​ ಆದ್ಮೇಲೆ ಶ್ರೀನಿಧಿ ಶೆಟ್ಟಿ ಕೇಳ್ತಿರುವ ಸಂಭಾವನೆ ಎಷ್ಟು ಕೋಟಿ?
Image
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

ಕೆಲ ತಿಂಗಳ ಹಿಂದೆ ‘ಪುಷ್ಪ 2’ ಚಿತ್ರದ ಶೂಟಿಂಗ್​ಗೆ ಚಾಲನೆ ನೀಡಲಾಗಿತ್ತು. ಕೆಲ ದೃಶ್ಯಗಳ ಶೂಟಿಂಗ್ ಪೂರ್ಣಗೊಂಡಿತ್ತು. ಅಲ್ಲು ಅರ್ಜುನ್ ಅವರ ಭಾಗದ ಶೂಟಿಂಗ್ ಸರಿಯಾಗಿ ಆರಂಭ ಆಗಿರಲಿಲ್ಲ. ಈಗ ಅಲ್ಲು ಅರ್ಜುನ್ ಅವರು ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದ್ದಾರೆ. ಈ ಕುರಿತು ಸಿನಿಮಾದ ಛಾಯಾಗ್ರಾಹಕ ಮಿರೊಸ್ಲಾವ್ ಕುಬಾ ಬ್ರೊಜೆಕ್ ಅವರು ಅಪ್​ಡೇಟ್ ನೀಡಿದ್ದಾರೆ. ಅಲ್ಲು ಅರ್ಜುನ್ ಜತೆ ನಿಂತಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ.

View this post on Instagram

A post shared by Kuba (@kubabrozek)

ಇದನ್ನೂ ಒದಿ: ಬಾಲಿವುಡ್​ನಲ್ಲಿ ನಡೆಯಲಿಲ್ಲ ರಶ್ಮಿಕಾ ಮಂದಣ್ಣ ಹವಾ? ಕೋಟಿ ಮುಟ್ಟಲೇ ಇಲ್ಲ ‘ಗುಡ್​ಬೈ’ ಕಲೆಕ್ಷನ್

ರಶ್ಮಿಕಾ ಮಂದಣ್ಣ ‘ಪುಷ್ಪ 2’ ಚಿತ್ರಕ್ಕೆ ನಾಯಕಿ ಆಗಿ ಮುಂದುವರಿಯಲಿದ್ದಾರೆ. ಅವರು ಮಾಡಿರುವ ಶ್ರೀವಲ್ಲಿ ಪಾತ್ರ ಸೀಕ್ವೆಲ್​​​ನಲ್ಲಿ ಬಹುಬೇಗ ಕೊನೆಯಾಗಲಿದೆ ಎಂಬ ವದಂತಿ ಹಬ್ಬಿತ್ತು. ಆದರೆ, ಇದನ್ನು ಚಿತ್ರತಂಡ ಅಲ್ಲ ಗಳೆದಿದೆ. ಈ ಸಿನಿಮಾ ‘ಕೆಜಿಎಫ್ 2’ ಮಾಡಿದ ದಾಖಲೆಗಳನ್ನು ಮುರಿಯಲಿದೆಯೇ ಎನ್ನುವ ಕುತೂಹಲ ಮೂಡಿದೆ. ಈ ಬಾರಿಯೂ ಸ್ಪೆಷಲ್ ಸಾಂಗ್ ಇರಲಿದ್ದು ಅದರಲ್ಲಿ ಯಾರು ಹೆಜ್ಜೆ ಹಾಕಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ.

Published On - 8:17 am, Tue, 1 November 22