ಕನ್ನಡ ರಾಜ್ಯೋತ್ಸವದ ದಿನವೇ ಬಿಗ್ ಬಾಸ್ ಮನೆಯಿಂದ ಹೊರಟ ರೂಪೇಶ್ ರಾಜಣ್ಣ

ಫೇವರಿಸಂ ವಿಚಾರಕ್ಕೆ ರೂಪೇಶ್ ರಾಜಣ್ಣ ಹಾಗೂ ಅನುಪಮಾ ಗೌಡ ಮಧ್ಯೆ ಮಾತಿನ ಫೈಟ್ ನಡೆಯುತ್ತಲೇ ಇತ್ತು. ಅನುಪಮಾ ಅವರು ಮಲತಾಯಿಧೋರಣೆ ಮಾಡುತ್ತಾರೆ ಎಂದು ಆರೋಪಿಸಿ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಿಂದ ಹೊರಡೋಕೆ ರೆಡಿ ಆಗಿದ್ದಾರೆ.

ಕನ್ನಡ ರಾಜ್ಯೋತ್ಸವದ ದಿನವೇ ಬಿಗ್ ಬಾಸ್ ಮನೆಯಿಂದ ಹೊರಟ ರೂಪೇಶ್ ರಾಜಣ್ಣ
ರೂಪೇಶ್ ರಾಜಣ್ಣ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 01, 2022 | 9:22 AM

ರೂಪೇಶ್ ರಾಜಣ್ಣ (Roopesh Rajanna) ಅವರು ಬಿಗ್ ಬಾಸ್​ನಿಂದ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾರೆ. ಸದಾ ಏರು ಧ್ವನಿಯಲ್ಲೇ ಮಾತನಾಡುತ್ತಾ ಅವರು ಗಮನ ಸೆಳೆಯುತ್ತಿದ್ದಾರೆ. ಅವರು ಟೆಂಪರ್ ಕಳೆದುಕೊಂಡಿದ್ದರಿಂದ ಬಿಗ್ ಬಾಸ್​ ಮನೆಯಲ್ಲಿ ಘನಘೋರ ಜಗಳಗಳು ನಡೆದ ಉದಾಹರಣೆ ಇದೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ಮಧ್ಯೆ ದೊಡ್ಡ ಜಗಳಗಳು ಆಗಾಗ ನಡೆಯುತ್ತಲೇ ಇರುತ್ತವೆ. ಕನ್ನಡ ರಾಜ್ಯೋತ್ಸವದ (Kannada Rajyotsava) ಸಂದರ್ಭದಲ್ಲಿ ರೂಪೇಶ್​ ರಾಜಣ್ಣ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಕೂಗಾಟ ಚೀರಾಟದಿಂದ ಮನೆಯ ಶಾಂತಿ ಮತ್ತೆ ಕದಡಿದೆ.

ಕ್ಯಾಪ್ಟನ್ಸಿ ಟಾಸ್ಕ್​ ಆಯ್ಕೆಗೆ ಪ್ರತಿ ವಾರ ನಾನಾ ಸ್ಪರ್ಧೆಗಳನ್ನು ನೀಡುತ್ತಾರೆ. ಈ ಟಾಸ್ಕ್​​ಗಳಲ್ಲಿ ಗೆದ್ದವರು ಕ್ಯಾಪ್ಟನ್ಸಿ ಟಾಸ್ಕ್ ಆಡಲು ಆಯ್ಕೆ ಆಗುತ್ತಾರೆ. ಈ ವಾರವೂ ವಿವಿಧ ಟಾಸ್ಕ್ ನೀಡಲಾಗಿದೆ. ಅನುಪಮಾ ಗೌಡ ಅವರು ಕ್ಯಾಪ್ಟನ್ ಆಗಿರುವುದರಿಂದ ಟಾಸ್ಕ್​ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಬಜರ್ ಒಂದನ್ನು ಇರಿಸಲಾಗಿದೆ. ಈ ಬಜರ್​ನ ಮೊದಲು ಯಾರು ಒತ್ತುತ್ತಾರೋ ಅವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗುತ್ತಾರೆ.

ಇದನ್ನೂ ಓದಿ
Image
ಸಾನ್ಯಾ ಐಯ್ಯರ್-ಪ್ರಶಾಂತ್ ಸಂಬರ್ಗಿ ಪ್ಲ್ಯಾನ್​ಗೆ ಬಕ್ರಾ ಆದ ರೂಪೇಶ್ ರಾಜಣ್ಣ
Image
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
Image
BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ
Image
Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ

ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಅವರು ಕೆಲವೇ ಸೆಕೆಂಡ್​ಗಳ ಅಂತರದಲ್ಲಿ ಬಜರ್ ಒತ್ತಿದ್ದರಿಂದ ಯಾರು ಮೊದಲು ಬಜರ್ ಒತ್ತಿದರು ಎಂಬ ಗೊಂದಲ ಮೂಡಿತು. ಅನುಪಮಾ ಅವರು ಪ್ರಶಾಂತ್ ಪರವಾಗಿ ತೀರ್ಪು ನೀಡಿದರು. ಇದರಿಂದ ರೂಪೇಶ್ ರಾಜಣ್ಣಗೆ ಸಿಟ್ಟು ಬಂದಿದೆ. ಅನುಪಮಾ ಅವರು ಫೇವರಿಸಂ ಮಾಡುತ್ತಿದ್ದಾರೆ ಎಂಬ ಶಬ್ದ ಬಳಕೆ ಮಾಡಿದ್ದಾರೆ. ಇದರಿಂದ ಅನುಪಮಾಗೆ ಬೇಸರ ಆಗಿದೆ.

ಫೇವರಿಸಂ ವಿಚಾರಕ್ಕೆ ರೂಪೇಶ್ ರಾಜಣ್ಣ ಹಾಗೂ ಅನುಪಮಾ ಗೌಡ ಮಧ್ಯೆ ಮಾತಿನ ಫೈಟ್ ನಡೆಯುತ್ತಲೇ ಇತ್ತು. ಅನುಪಮಾ ಅವರು ಮಲತಾಯಿಧೋರಣೆ ಮಾಡುತ್ತಾರೆ ಎಂದು ಆರೋಪಿಸಿ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಿಂದ ಹೊರಡೋಕೆ ರೆಡಿ ಆಗಿದ್ದಾರೆ. ಬ್ಯಾಗ್​ ಹಿಡಿದು ಬಂದ ಅವರು ‘ಬಿಗ್ ಬಾಸ್ ಬಾಗಿಲು ತೆಗೆಯಿರಿ ನಾನು ಮನೆಯಿಂದ ಹೊರ ಹೋಗ್ತೀನಿ’ ಎಂದಿದ್ದಾರೆ. ಈ ವೇಳೆ ರೂಪೇಶ್ ಅವರನ್ನು ಮನೆ ಮಂದಿ ತಡೆಯಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ವೀಕೆಂಡ್ ಎಪಿಸೋಡ್​ನ ಒಂದು ವಾರ ಮಿಸ್ ಮಾಡಿದ್ರೇನಂತೆ? ಬಡ್ಡಿ ಸಮೇತ ವಾಪಸ್ ಕೊಟ್ಟ ಕಿಚ್ಚ ಸುದೀಪ್

ಬಿಗ್ ಬಾಸ್ ಮನೆಯ ಒಳಗೆ ಸ್ಪರ್ಧಿಗಳು ಹೋದ ನಂತರದಲ್ಲಿ ದೊಡ್ಮನೆ ನಿಯಮಗಳನ್ನು ಒಪ್ಪಿಕೊಂಡು ಆಡಬೇಕು. ವೀಕೆಂಡ್ ಎಲಿಮಿನೇಷನ್ ಸಂದರ್ಭ ಬಿಟ್ಟರೆ ಮತ್ತೆ ಯಾವ ಸಂದರ್ಭದಲ್ಲೂ ದೊಡ್ಮನೆ ಗೇಟ್ ತೆಗೆಯುವುದಿಲ್ಲ. ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಕನ್ಫೆಷನ್ ರೂಂ ಮೂಲಕ ಸ್ಪರ್ಧಿಗಳನ್ನು ಕಳುಹಿಸಲಾಗುತ್ತದೆ. ಹೀಗಾಗಿ, ಬಿಗ್ ಬಾಸ್ ರೂಪೇಶ್ ರಾಜಣ್ಣಗೆ ಯಾವುದೇ ಕಾರಣಕ್ಕೂ ಬಾಗಿಲು ತೆಗೆಯುವುದಿಲ್ಲ. ಇಂದು (ನವೆಂಬರ್ 1) ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

Published On - 9:21 am, Tue, 1 November 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್