ಬಿಗ್ ಬಾಸ್​ನಲ್ಲಿ ವೀಕೆಂಡ್ ಎಪಿಸೋಡ್​ನ ಒಂದು ವಾರ ಮಿಸ್ ಮಾಡಿದ್ರೇನಂತೆ? ಬಡ್ಡಿ ಸಮೇತ ವಾಪಸ್ ಕೊಟ್ಟ ಕಿಚ್ಚ ಸುದೀಪ್

ಆ ಟಾಸ್ಕ್​ನ​ ವಿಚಾರಕ್ಕೆ ಸುದೀಪ್ ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡೋಕೆ ಹೋದರು ದೀಪಿಕಾ. ಇದಕ್ಕೆ ಸುದೀಪ್ ಕೂಲ್ ಆಗಿ ಕ್ಲಾಸ್ ತೆಗೆದುಕೊಂಡರು. ‘

ಬಿಗ್ ಬಾಸ್​ನಲ್ಲಿ ವೀಕೆಂಡ್ ಎಪಿಸೋಡ್​ನ ಒಂದು ವಾರ ಮಿಸ್ ಮಾಡಿದ್ರೇನಂತೆ? ಬಡ್ಡಿ ಸಮೇತ ವಾಪಸ್ ಕೊಟ್ಟ ಕಿಚ್ಚ ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 29, 2022 | 10:12 PM

ಕಿಚ್ಚ ಸುದೀಪ್ (Kichcha Sudeep) ಅವರು ಕಳೆದ ವಾರ ಬಿಗ್ ಬಾಸ್​ಗೆ (Bigg Boss) ಬಂದಿರಲಿಲ್ಲ. ವಿದೇಶ ಪ್ರವಾಸದಲ್ಲಿದ್ದರಿಂದ ವೀಕೆಂಡ್ ಎಪಿಸೋಡ್​ನ ಮಿಸ್ ಮಾಡಿಕೊಂಡಿದ್ದರು. ಹೀಗಾಗಿ ಆ ವಾರ ಮಾಡಿದ ತಪ್ಪುಗಳೆಲ್ಲ ಮಾಫಿ ಆಯಿತು ಎಂದು ಸ್ಪರ್ಧಿಗಳು ಭಾವಿಸಿದ್ದರು. ಆದರೆ, ಆ ರೀತಿ ಇಲ್ಲ. ಕಿಚ್ಚ ಸುದೀಪ್ ಅವರು ಶನಿವಾರದ (ಅಕ್ಟೋಬರ್ 29) ಎಪಿಸೋಡ್​ನಲ್ಲಿ ಹಳೆಯ ತಪ್ಪುಗಳನ್ನು ಎತ್ತಿ ಹೇಳಿ ಬಡ್ಡಿ ಸಮೇತ ನೀಡಿದ್ದಾರೆ. ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡ ರೀತಿ ವೀಕ್ಷಕರಿಗೆ ಇಷ್ಟವಾಗಿದೆ.

ಸುದೀಪ್ ಅವರು ಕಳೆದ ವಾರ ಪತ್ನಿ ಪ್ರಿಯಾ ಜತೆ ವಿದೇಶ ಪ್ರವಾಸದಲ್ಲಿದ್ದರು. ಈ ಕಾರಣಕ್ಕೆ ವೀಕೆಂಡ್​ ಎಪಿಸೋಡ್ ಮಿಸ್ ಮಾಡಿಕೊಂಡಿದ್ದರು. ಸುದೀಪ್ ಹಾಗೂ ಪ್ರಿಯಾ ಭಾರತ ಹಾಗೂ ಪಾಕ್ ನಡುವಿನ ಟಿ-20 ಪಂದ್ಯ ವೀಕ್ಷಿಸಿದ್ದ ಫೋಟೋ ವೈರಲ್ ಆಗಿತ್ತು. ಈ ವಾರ ಅವರು ಮರಳಿ ಬಿಗ್ ಬಾಸ್​ಗೆ ಬಂದಿದ್ದಾರೆ. ಹೊಸ ಜೋಶ್​ನಲ್ಲಿ ಬಿಗ್ ಬಾಸ್​ ನಡೆಸಿಕೊಟ್ಟಿದ್ದಾರೆ.

ದೀಪಿಕಾ ದಾಸ್​ಗೆ ಕ್ಲಾಸ್

ಕಳೆದ ವಾರ ದೀಪಿಕಾ ದಾಸ್ ಕ್ಯಾಪ್ಟನ್ ಆಗಿದ್ದರು. ಆ ವಾರ ಎರಡು ತಂಡಗಳಲ್ಲಿ ಸ್ಪರ್ಧೆ ನಡೆದಿತ್ತು. ರೂಪೇಶ್ ರಾಜಣ್ಣ ಒಂದು ತಂಡಕ್ಕೆ ನಾಯಕನಾದರೆ, ಪ್ರಶಾಂತ್ ಸಂಬರ್ಗಿ ಮತ್ತೊಂದು ಟೀಂನ ನಾಯಕತ್ವ ವಹಿಸಿದ್ದರು. ಗೇಮ್ ನಡೆಯುವ ವೇಳೆ ದೀಪಿಕಾ ಭೇದ ಮಾಡಿದ್ದಾರೆ ಎಂದಿದ್ದರು. ಆದರೆ, ಇದನ್ನು ದೀಪಿಕಾ ಒಪ್ಪಿಕೊಂಡಿರಲಿಲ್ಲ. ಸುದೀಪ್ ಅವರು ಈ ವಿಚಾರದಲ್ಲಿ ದೀಪಿಕಾಗೆ ತಿದ್ದಿದ್ದಾರೆ.

ಆ ಟಾಸ್ಕ್​ನ​ ವಿಚಾರಕ್ಕೆ ಸುದೀಪ್ ಹೇಳಿದ ಮಾತಿಗೆ ಸ್ಪಷ್ಟನೆ ನೀಡೋಕೆ ಹೋದರು ದೀಪಿಕಾ. ಇದಕ್ಕೆ ಸುದೀಪ್ ಕೂಲ್ ಆಗಿ ಕ್ಲಾಸ್ ತೆಗೆದುಕೊಂಡರು. ‘ನಿಮ್ಮಿಂದ ಕೆಲವರಿಗೆ ಪರೋಕ್ಷವಾಗಿ ಫೇವರಿಸಂ ಆಗಿದೆ’ ಎಂಬುದನ್ನು ಸುದೀಪ್ ಒತ್ತಿ ಹೇಳಿದರು.

ಉಳಿದವರಿಗೂ ಕ್ಲಾಸ್

ಈ ವಾರ ಸಾನ್ಯಾ ಕ್ಯಾಪ್ಟನ್ ಆಗಿದ್ದರು. ಅವರ ಕ್ಯಾಪ್ಟನ್ಸಿ ಸಂಪೂರ್ಣ ವಿಫಲವಾಗಿದೆ ಎಂದು ಮನೆ ಮಂದಿ ಅಭಿಪ್ರಾಯ ಹೊರಹಾಕಿದ್ದಾರೆ. ಸಾನ್ಯಾ ಅವರಿಂದ ಅನೇಕರಿಗೆ ಮೋಸ ಆಗಿದೆ ಎಂಬ ಅಭಿಪ್ರಾಯ ಇತ್ತು. ‘ಕಿಡಿ ಇಲ್ಲದೆ ಬೆಂಕಿ ಹತ್ತಲ್ಲ. ಒಂದು ಟೋನ್​ನಿಂದ ಎಲ್ಲರನ್ನೂ ಟ್ರಿಗರ್ ಮಾಡಿದ್ದೀರಿ. ನಿಮ್ಮಿಂದ ಆಗಿರುವ ತಪ್ಪು ಅದು. ಈ ದೀಪಾವಳಿ ಬೇಕಿತ್ತಾ? ತಪ್ಪು ನಿಮ್ಮದೆ’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ: ಮತ್ತೆ ಬಂತು ವೀಕೆಂಡ್; ಈ ವಾರ ಬಿಗ್ ಬಾಸ್​ಗೆ ಬರ್ತಾರಾ ಕಿಚ್ಚ ಸುದೀಪ್? ಇಲ್ಲಿದೆ ಮಾಹಿತಿ

‘ಅರುಣ್ ಸಾಗರ್ ಅವರೇ ಹೇಳಿದ್ಮೇಲೆ ಸ್ಟ್ಯಾಂಡ್ ತಗೋಳಿ. ಸ್ಟ್ಯಾಂಡ್ ತೆಗೆದುಕೊಳ್ಳುವುದನ್ನು ಮಾತ್ರ ಹೇಳಿ. ಕೂಗಾಟ ಆದ್ಮೇಲೆ ತಿಳಿಗೊಳಿಸೋಕೆ ಹೋದ್ರಿ. ಆದರೆ ಯಾವ ರೀತಿಯಲ್ಲಿ ತಿಳಿಸಿಗೊಳಿಸಿದ್ರಿ ಅನ್ನೋದು ಪ್ರಶ್ನೆ. ಸಾನ್ಯಾ ಮಾಡಿದಷ್ಟೇ ತಪ್ಪು ಇತರರದ್ದೂ ಇದೆ’ ಎಂದರು ಸುದೀಪ್.

Published On - 10:02 pm, Sat, 29 October 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ