AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಂತು ವೀಕೆಂಡ್; ಈ ವಾರ ಬಿಗ್ ಬಾಸ್​ಗೆ ಬರ್ತಾರಾ ಕಿಚ್ಚ ಸುದೀಪ್? ಇಲ್ಲಿದೆ ಮಾಹಿತಿ

ಸುದೀಪ್ ಅವರು ವಿದೇಶ ಪ್ರವಾಸದಲ್ಲಿದ್ದರು. ಪತ್ನಿ ಪ್ರಿಯಾ ಜತೆ ಆಸ್ಟ್ರೇಲಿಯಾಗೆ ತೆರಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಭಾರತ ಹಾಗೂ ಪಾಕಿಸ್ತಾನ್ ನಡುವಿನ ಟಿ-20 ವಿಶ್ವಕಪ್ ಪಂದ್ಯವನ್ನು ವೀಕ್ಷಿಸಿದ್ದರು.

ಮತ್ತೆ ಬಂತು ವೀಕೆಂಡ್; ಈ ವಾರ ಬಿಗ್ ಬಾಸ್​ಗೆ ಬರ್ತಾರಾ ಕಿಚ್ಚ ಸುದೀಪ್? ಇಲ್ಲಿದೆ ಮಾಹಿತಿ
TV9 Web
| Edited By: |

Updated on: Oct 29, 2022 | 2:58 PM

Share

ಕಿಚ್ಚ ಸುದೀಪ್ (Kichcha Sudeep) ಅವರು ನಟನೆಯ ಜತೆಗೆ ನಿರೂಪಣೆಯಲ್ಲೂ ತೊಡಗಿಕೊಂಡಿದ್ದಾರೆ. ‘ಬಿಗ್ ಬಾಸ್’ ಶೋನ ಅವರು ನಡೆಸಿಕೊಡುತ್ತಾರೆ. ಅವರು ಬಿಗ್​ ಬಾಸ್​ಗೆ ಗೈರಾಗಿದ್ದು ತುಂಬಾನೇ ಕಡಿಮೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಸುದೀಪ್ ಬಿಗ್ ಬಾಸ್ ವೀಕೆಂಡ್ ಎಪಿಸೋಡ್​ಗೆ ಬಂದಿಲ್ಲ. ಕಳೆದ ಸೀಸನ್​ನಲ್ಲಿ ಕೊವಿಡ್​ನಿಂದ ಕೆಲ ವಾರದ ಎಪಿಸೋಡ್​ಗೆ ಸುದೀಪ್ ಬಂದಿರಲಿಲ್ಲ. ಕಳೆದ ವಾರ ವಿದೇಶ ಪ್ರವಾಸದಲ್ಲಿ ಇದ್ದ ಕಾರಣ ಅವರು ಬಿಗ್ ಬಾಸ್​​ಗೆ ಗೈರಾಗಿದ್ದರು. ಈ ವಾರ ಸುದೀಪ್ ಬರ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ.

ಸುದೀಪ್ ನಿರೂಪಣೆ ನೋಡೋಕೆ ಫ್ಯಾನ್ಸ್​ಗೆ ಸಖತ್ ಇಷ್ಟ. ಬಿಗ್ ಬಾಸ್​ನಲ್ಲಿ ತಪ್ಪು ಮಾಡಿದ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಕೆಲವರು ಕಾಲೆಳೆಯುತ್ತಾರೆ. ಸಾಕಷ್ಟು ನಗಿಸುತ್ತಾರೆ. ಕಿಚ್ಚ ಸುದೀಪ್ ಅವರ ಖಡಕ್ ಮಾತಿನ ಜತೆ ಅವರ ಮಗುವಿನಂತಹ ಮನಸ್ಸು ಸಾಕಷ್ಟು ಇಷ್ಟವಾಗುತ್ತದೆ. ಅವರ ಡ್ರೆಸ್ಸಿಂಗ್ ಕೂಡ ಅನೇಕರಿಗೆ ಇಷ್ಟ. ಆದರೆ, ಕಳೆದವಾರ ಇವೆಲ್ಲವೂ ಮಿಸ್ ಆಗಿತ್ತು.

ಇದನ್ನೂ ಓದಿ
Image
ಬಿಗ್ ಬಾಸ್​ನಲ್ಲಿ ಭಾನುವಾರವೂ ಇಲ್ಲ ಕಿಚ್ಚ ಸುದೀಪ್​; ಈ ವಾರದ ಎಲಿಮಿನೇಷನ್ ಕಥೆ ಏನು?
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಸುದೀಪ್ ಅವರು ವಿದೇಶ ಪ್ರವಾಸದಲ್ಲಿದ್ದರು. ಪತ್ನಿ ಪ್ರಿಯಾ ಜತೆ ಆಸ್ಟ್ರೇಲಿಯಾಗೆ ತೆರಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಭಾರತ ಹಾಗೂ ಪಾಕಿಸ್ತಾನ್ ನಡುವಿನ ಟಿ-20 ವಿಶ್ವಕಪ್ ಪಂದ್ಯವನ್ನು ವೀಕ್ಷಿಸಿದ್ದರು. ಈಗ ಅವರು ವಿದೇಶದಿಂದ ಮರಳಿದ್ದಾರೆ. ಈ ವಾರ ಅವರು ವೀಕೆಂಡ್ ಎಪಿಸೋಡ್ ನಡೆಸಿಕೊಡುತ್ತಿದ್ದಾರೆ.

ಸುದೀಪ್ ಅವರು ಈ ವಾರ ವೀಕೆಂಡ್ ಎಪಿಸೋಡ್ ನಡೆಸಿಕೊಡಲಿದ್ದಾರೆ ಎಂಬುದನ್ನು ಅಧಿಕೃತ ಮಾಡಲು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಸುದೀಪ್ ಅವರ ಲುಕ್ ಎಲ್ಲರಿಗೂ ಇಷ್ಟವಾಗಿದೆ. ಅಷ್ಟೇ ಅಲ್ಲ ಸುದೀಪ್ ಬಂದವರೇ ಎಲ್ಲರನ್ನೂ ನಗಿಸುವ ಕೆಲಸ ಮಾಡಿದ್ದಾರೆ. ಸುದೀಪ್ ಅವರು ಮರಳಿದ್ದು ನೋಡಿ ವೀಕ್ಷಕರಿಗೆ ಹಾಗೂ ಮನೆಯ ಸ್ಪರ್ಧಿಗಳಿಗೆ ಖುಷಿಯಾಗಿದೆ.

ಇದನ್ನೂ ಓದಿ: ‘ಲೇ’ ಎಂಬ ಸಂಬೋಧನೆ; ಬಿಗ್ ಬಾಸ್ ಮನೆಯನ್ನು ರಣರಂಗ ಮಾಡಿದ ಸಂಬರ್ಗಿ-ರೂಪೇಶ್

ಈ ವಾರ ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ಅಮೂಲ್ಯ ಗೌಡ, ರಾಕೇಶ್ ಅಡಿಗ ಹಾಗೂ ಕಾವ್ಯಶ್ರೀ ಗೌಡ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಈ ಪೈಕಿ ಒಬ್ಬರು ಬಿಗ್ ಬಾಸ್ ಮನೆಯಿಂದ ಔಟ್ ಆಗಲಿದ್ದಾರೆ.