‘ಲೇ’ ಎಂಬ ಸಂಬೋಧನೆ; ಬಿಗ್ ಬಾಸ್ ಮನೆಯನ್ನು ರಣರಂಗ ಮಾಡಿದ ಸಂಬರ್ಗಿ-ರೂಪೇಶ್

ರೂಪೇಶ್ ರಾಜಣ್ಣಗೆ ಪ್ರ್ಯಾಂಕ್ ಮಾಡುತ್ತಾ ಪ್ರಶಾಂತ್ ಟೈಮ್​ಪಾಸ್ ಮಾಡಿದ್ದರು. ಈ ಕಾರಣಕ್ಕೆ ಪ್ರಶಾಂತ್ ಸಂಬರ್ಗಿ ಅವರು ರೂಪೇಶ್ ರಾಜಣ್ಣ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಸಿಕೊಂಡಿದ್ದರು. ಇಬ್ಬರ ಮಧ್ಯೆ ಮತ್ತೆ ಕಿತ್ತಾಟ ನಡೆದಿದೆ.

‘ಲೇ’ ಎಂಬ ಸಂಬೋಧನೆ; ಬಿಗ್ ಬಾಸ್ ಮನೆಯನ್ನು ರಣರಂಗ ಮಾಡಿದ ಸಂಬರ್ಗಿ-ರೂಪೇಶ್
ಅರುಣ್​-ಪ್ರಶಾಂತ್-ರೂಪೇಶ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 25, 2022 | 9:59 PM

ಬಿಗ್ ಬಾಸ್ (Bigg Boss) ಮನೆಯಲ್ಲಿ ಜಗಳಗಳು ನಡೆಯೋದು ಕಾಮನ್. ಈ ಸೀಸನ್​ನಲ್ಲೂ ಕಿತ್ತಾಟ-ಕೂಗಾಟ ಮುಂದುವರಿದಿದೆ. ಕಳೆದ ಸೀಸನ್​ನಲ್ಲಿ ಏರು ಧ್ವನಿಯಲ್ಲಿ ಮಾತನಾಡಿ ಗಮನ ಸೆಳೆದಿದ್ದ ಪ್ರಶಾಂತ್ ಸಂಬರ್ಗಿ (Prashanth Sambargi) ಅವರು ಈ ಸೀಸನ್​ಗೆ ಮತ್ತೆ ಬಂದಿದ್ದಾರೆ. ಅವರು ಈ ಸೀಸನ್​ನಲ್ಲೂ ತಮ್ಮ ಹಳೆಯತನವನ್ನೇ ಮುಂದುವರಿಸಿದ್ದಾರೆ. ಈ ವಾರ ಬಿಗ್ ಬಾಸ್ ಮನೆ ರಣರಂಗವಾಗಿದೆ. ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ನಡುವೆ ಕಿತ್ತಾಟ ಶುರುವಾಗಿದೆ. ‘ಲೇ’ ಸಂಬೋಧನೆಯಿಂದ ಇಬ್ಬರ ನಡುವಿನ ಜಗಳ ಮತ್ತಷ್ಟು ಕಾವೇರಿದೆ.

‘ಬಿಗ್ ಬಾಸ್’ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಮಧ್ಯೆ ಕಿತ್ತಾಟ ನಡೆಯುತ್ತಲೇ ಇತ್ತು. ಆದರೆ, ಕಳೆದವಾರದಿಂದ ಇವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿತ್ತು. ರೂಪೇಶ್ ರಾಜಣ್ಣಗೆ ಪ್ರ್ಯಾಂಕ್ ಮಾಡುತ್ತಾ ಪ್ರಶಾಂತ್ ಟೈಮ್​ಪಾಸ್ ಮಾಡಿದ್ದರು. ಈ ಕಾರಣಕ್ಕೆ ಪ್ರಶಾಂತ್ ಸಂಬರ್ಗಿ ಅವರು ರೂಪೇಶ್ ರಾಜಣ್ಣ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಸಿಕೊಂಡಿದ್ದರು. ಆದರೆ, ಈಗ ಸೆಪ್ಟೆಂಬರ್ 25ರ ಎಪಿಸೋಡ್​ನಲ್ಲಿ ಇಬ್ಬರ ಮಧ್ಯೆ ಮತ್ತೆ ಕಿತ್ತಾಟ ನಡೆದಿದೆ.

ಕ್ಯಾಪ್ಟನ್ಸಿ ಪಾಯಿಂಟ್ಸ್ ಬೇಕಾ, ಉಡುಗೊರೆ ಬೇಕಾ ಎಂಬುದು ಪ್ರಶ್ನೆ ಆಗಿತ್ತು. ಈ ವಿಚಾರದಿಂದ ಶುರುವಾದ ಜಗಳ ಬೇರೆ ಮಟ್ಟಕ್ಕೆ ತಲುಪಿತು. ಆರಂಭದಲ್ಲಿ ಅರುಣ್ ಸಾಗರ್ ಹಾಗೂ ರೂಪೇಶ್ ರಾಜಣ್ಣ ಅವರು ಕಿತ್ತಾಡಿಕೊಳ್ಳುತ್ತಿದ್ದರು. ‘ರೂಪೇಶ್ ಅವರಿಗೆ ದುರಾಸೆ ಇದೆ’ ಎಂಬ ಮಾತನ್ನು ಹೇಳಿದರು ಅರುಣ್​. ಪ್ರಶಾಂತ್ ಸಂಬರ್ಗಿ ಹಾಗೂ ಅರುಣ್ ಸಾಗರ್ ಗೆಳೆಯರು. ಹೀಗಾಗಿ, ಅರುಣ್ ಸಾಗರ್ ಪರ ಪ್ರಶಾಂತ್ ಬ್ಯಾಟ್ ಬೀಸಿದರು. ಇದರಿಂದ ರೂಪೇಶ್ ರಾಜಣ್ಣ ಸಿಟ್ಟಾದರು.

ಇದನ್ನೂ ಓದಿ
Image
ಬಿಗ್ ಬಾಸ್​ನಲ್ಲಿ ಭಾನುವಾರವೂ ಇಲ್ಲ ಕಿಚ್ಚ ಸುದೀಪ್​; ಈ ವಾರದ ಎಲಿಮಿನೇಷನ್ ಕಥೆ ಏನು?
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

‘ಲೇ’ ಎಂಬ ಶಬ್ದ ಬಳಕೆಯನ್ನು ಪ್ರಶಾಂತ್ ಮಾಡಿದರು. ಇದರಿಂದ ರೂಪೇಶ್ ರಾಜಣ್ಣ ಅವರು ಇನ್ನಷ್ಟು ಕೋಪಗೊಂಡರು. ಇಬ್ಬರೂ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋದರು. ಅಲ್ಲಿಯೇ ಇದ್ದ ರೂಪೇಶ್ ಶೆಟ್ಟಿ ಹಾಗೂ ಉಳಿದವರು ಇವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು.

ಇದನ್ನೂ ಓದಿ:  ಬಿಗ್ ಬಾಸ್ ಮನೆಯಿಂದ ಮಯೂರಿ ಎಲಿಮಿನೇಟ್​; ನಟಿ ಹೊರಹೋಗಲು ಇದುವೇ ಕಾರಣ 

ಬಿಗ್ ಬಾಸ್ ಮನೆಯಲ್ಲಿ ಚಿಕ್ಕ ಚಿಕ್ಕ ವಿಚಾರಕ್ಕೆ ದೊಡ್ಡ ದೊಡ್ಡ ಜಗಳಗಳು ನಡೆದಿದ್ದು ಇದೆ. ಕಳೆದ ಸೀಸನ್​ನಲ್ಲಿ ಪ್ರಶಾಂತ್ ಸಂಬರ್ಗಿ-ಅರವಿಂದ್ ಕೆ.ಪಿ ಹಾಗೂ ಪ್ರಶಾಂತ್ ಸಂಬರ್ಗಿ-ಮಂಜು ಪಾವಗಡ ಮಧ್ಯೆ ಸಾಕಷ್ಟು ಕಿತ್ತಾಟ ನಡೆದಿತ್ತು. ಕೆಲವೊಂದು ಬಾರಿ ಜಗಳ ಗಡಿ ದಾಟಿತ್ತು.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ