ಬಿಗ್ ಬಾಸ್​ನಲ್ಲಿ ಭಾನುವಾರವೂ ಇಲ್ಲ ಕಿಚ್ಚ ಸುದೀಪ್​; ಈ ವಾರದ ಎಲಿಮಿನೇಷನ್ ಕಥೆ ಏನು?

ಸುದೀಪ್ ವಿದೇಶದಲ್ಲೇ ಇದ್ದಾರೆ. ಈ ಕಾರಣಕ್ಕೆ ಅವರು ಈ ವಾರ ಬಿಗ್ ಬಾಸ್​ ನಡೆಸಿಕೊಡೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತಿ ಶುಕ್ರವಾರ ನಡೆಯುತ್ತಿದ್ದ ಕಳಪೆ, ಉತ್ತಮ ಪ್ರಕ್ರಿಯೆ ಶನಿವಾರ ನಡೆದಿದೆ.

ಬಿಗ್ ಬಾಸ್​ನಲ್ಲಿ ಭಾನುವಾರವೂ ಇಲ್ಲ ಕಿಚ್ಚ ಸುದೀಪ್​; ಈ ವಾರದ ಎಲಿಮಿನೇಷನ್ ಕಥೆ ಏನು?
ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 23, 2022 | 4:10 PM

ಕಿಚ್ಚ ಸುದೀಪ್ (Kichcha Sudeep) ಅವರ ನಿರೂಪಣೆ ಕಣ್ತುಂಬಿಕೊಳ್ಳಲೆಂದೇ ‘ಬಿಗ್ ಬಾಸ್​’ ನೋಡುವವರು ಅನೇಕರಿದ್ದಾರೆ. ಅವರಿಗೆ ಈ ವಾರ ನಿರಾಸೆ ಉಂಟಾಗಿದೆ. ಕಿಚ್ಚ ಸುದೀಪ್ ಅವರು ಶನಿವಾರದ ಎಪಿಸೋಡ್​ಗೆ ಗೈರಾಗಿದ್ದರು. ಅದೇ ರೀತಿ ಭಾನುವಾರದ ಎಪಿಸೋಡ್​ನಲ್ಲೂ ಸುದೀಪ್ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕೆ ಎಲಿಮಿನೇಷನ್​ಗೆ ಕಲರ್ಸ್​ ಕನ್ನಡ (Colors Kannada) ವಾಹಿನಿಯವರು ಹಳೆಯ ತಂತ್ರವನ್ನು ಬಳಕೆ ಮಾಡಿಕೊಂಡಿದ್ದಾರೆ. ವೀಕೆಂಡ್​ನಲ್ಲಿ ಸುದೀಪ್ ಇಲ್ಲದೆ ಬಿಗ್ ಬಾಸ್ ನೋಡೋದು ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಪತ್ನಿ ಪ್ರಿಯಾ ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಇದಕ್ಕಾಗಿ ಅವರು ವಿದೇಶಕ್ಕೆ ತೆರಳಿದ್ದಾರೆ. ಸದ್ಯ ಸುದೀಪ್ ವಿದೇಶದಲ್ಲೇ ಇದ್ದಾರೆ. ಈ ಕಾರಣಕ್ಕೆ ಅವರು ಈ ವಾರ ಬಿಗ್ ಬಾಸ್​ ನಡೆಸಿಕೊಡೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತಿ ಶುಕ್ರವಾರ ನಡೆಯುತ್ತಿದ್ದ ಕಳಪೆ, ಉತ್ತಮ ಪ್ರಕ್ರಿಯೆ ಶನಿವಾರ ನಡೆದಿದೆ. ಭಾನುವಾರದ ಎಲಿಮಿನೇಷನ್ ಪ್ರಕ್ರಿಯೆಗೆ ಹಳೆಯ ಮೆಥಡ್ ಬಳಕೆ ಮಾಡಲಾಗಿದೆ.

ಇದನ್ನೂ ಓದಿ
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

ಕಳೆದ ವರ್ಷ ಬಿಗ್ ಬಾಸ್ ನಡೆಯುತ್ತಿರುವಾಗಲೇ ಕೊವಿಡ್ ಕಾಣಿಸಿಕೊಂಡಿತ್ತು. ಈ ವೇಳೆ ಸುದೀಪ್​ಗೂ ಕೊರೊನಾ ಅಂಟಿತ್ತು. ಹೀಗಾಗಿ ಅವರು ಕೆಲ ವಾರ ಬಿಗ್ ಬಾಸ್​ ನಿರೂಪಣೆಗೆ ಬಂದಿರಲಿಲ್ಲ. ಆಗ ವಿವಿಧ ರೀತಿಯ ಟಾಸ್ಕ್​ಗಳನ್ನು ನೀಡಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಗಿತ್ತು. ಈ ಬಾರಿಯೂ ಅದೇ ರೀತಿ ಮಾಡಲು ನಿರ್ಧರಿಸಲಾಗಿದೆ. ಈ ವಾರ ನಾಮಿನೇಷನ್​​ಗೆ ಒಳಗಾದವರಿಗೆ ವಿವಿಧ ರೀತಿಯ ಟಾಸ್ಕ್​ ನೀಡಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಈ ಕುರಿತು ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಮೂಲಕ ಸುದೀಪ್ ಈ ವಾರವೂ ಬರೋದಿಲ್ಲ ಎಂಬುದು ಖಚಿತವಾಗಿದೆ.

ಇದನ್ನೂ ಓದಿ: BBK9: ಮ್ಯಾಚ್​ ಫಿಕ್ಸಿಂಗ್​ ಆರೋಪದ ಮರು ವಾರವೇ ಬಿಗ್ ಬಾಸ್​ ಶೋಗೆ ಸುದೀಪ್​ ಗೈರು; ಮುನಿಸಿಕೊಂಡ್ರಾ ಕಿಚ್ಚ?

ಈ ವಾರ ಮಯೂರಿ, ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರ್ಗಿ, ಕಾವ್ಯಶ್ರೀ ಗೌಡ, ನೇಹಾ ಗೌಡ, ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ ಹಾಗೂ ದಿವ್ಯಾ ಉರುಡುಗ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಈ ಪೈಕಿ ಯಾರು ಹೊರಹೋಗುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ