‘ಕಾಂತಾರ’ ಚಿತ್ರದ ಕಲೆಕ್ಷನ್ ನೋಡಿ ಬಾಲಿವುಡ್ ಮಂದಿಯೇ ದಂಗು; ಈವರೆಗಿನ ಗಳಿಕೆ ಎಷ್ಟು?
ಶುಕ್ರವಾರ (ಅಕ್ಟೋಬರ್ 21) ಈ ಚಿತ್ರ 2.5 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶನಿವಾರ (ಅಕ್ಟೋಬರ್ 22) 2.55 ಕೋಟಿ ರೂಪಾಯಿ ಹಾಗೂ ಭಾನುವಾರ (ಅಕ್ಟೋಬರ್ 23) 2.65 ಕೋಟಿ ರೂಪಾಯಿ ಗಳಿಸಿದೆ.
‘ಕಾಂತಾರ’ ಸಿನಿಮಾ (Kantara Movie) ಸದ್ಯ ಬಂಗಾರದ ಬೆಳೆ ತೆಗೆಯುತ್ತಿದೆ. ಕನ್ನಡದಲ್ಲಿ ಅಬ್ಬರಿಸಿದ ಈ ಸಿನಿಮಾ ಈಗ ಬಾಲಿವುಡ್ನಲ್ಲಿ ಒಳ್ಳೆಯ ಕಮಾಯಿ ಮಾಡುತ್ತಿದೆ. ಚಿತ್ರದ ಕಲೆಕ್ಷನ್ ನೋಡಿ ಅನೇಕರು ಅಚ್ಚರಿ ಹೊರಹಾಕುತ್ತಿದ್ದಾರೆ. ಬಾಲಿವುಡ್ನಲ್ಲಿ ಈ ಚಿತ್ರ ಬಂಗಾರದ ಬೆಳೆ ತೆಗೆಯುತ್ತಿದೆ. ದೀಪಾವಳಿ ಆರಂಭ ಆಗಿದ್ದು, ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ಸೂಚನೆ ಸಿಕ್ಕಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟಾಗಲಿದೆ ಅನ್ನೋದು ಸದ್ಯದ ಕುತೂಹಲ. ಬಾಕ್ಸ್ ಆಫೀಸ್ನಲ್ಲಿ ಅಬ್ಬರ ಹೀಗೆ ಮುಂದುವರಿದರೆ ‘ಕೆಜಿಎಫ್ 1’ನ ಹಿಂದಿ ವರ್ಷನ್ಕಲೆಕ್ಷನ್ ಅನ್ನು ‘ಕಾಂತಾರ’ ಹಿಂದಿಕ್ಕಲಿದೆ.
‘ಕಾಂತಾರ’ ಸಿನಿಮಾ ಮೊದಲು ಕನ್ನಡದಲ್ಲಿ ರಿಲೀಸ್ ಆಗಿ ಅಬ್ಬರಿಸಿತು. ಕೆಲ ವಾರಗಳ ಬಳಿಕ ಈ ಸಿನಿಮಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಆಯಿತು. ಇದರಿಂದ ಚಿತ್ರದ ಗಳಿಕೆ ಹೆಚ್ಚುತ್ತಲೇ ಇದೆ. ಬಾಲಿವುಡ್ ಮಂದಿ ಈ ಚಿತ್ರವನ್ನು ಭರಪೂರವಾಗಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ, ದಿನಕಳೆದಂತೆ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಿದೆ.
ಶುಕ್ರವಾರ (ಅಕ್ಟೋಬರ್ 21) ಈ ಚಿತ್ರ 2.5 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶನಿವಾರ (ಅಕ್ಟೋಬರ್ 22) 2.55 ಕೋಟಿ ರೂಪಾಯಿ ಹಾಗೂ ಭಾನುವಾರ (ಅಕ್ಟೋಬರ್ 23) 2.65 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಸಿನಿಮಾದ (ಹಿಂದಿ ವರ್ಷನ್) ಒಟ್ಟೂ ಕಲೆಕ್ಷನ್ 22.25 ಕೋಟಿ ರೂಪಾಯಿ ಆಗಿದೆ. ಹಿಂದಿಯಲ್ಲಿ ಇಷ್ಟೊಂದು ಕಲೆಕ್ಷನ್ ಮಾಡಿದ ಮೂರನೇ ಕನ್ನಡ ಸಿನಿಮಾ ಎಂಬ ಖ್ಯಾತಿ ‘ಕಾಂತಾರ’ಕ್ಕೆ ಸಿಕ್ಕಿದೆ. ಈ ಮೊದಲು ‘ಕೆಜಿಎಫ್ 2’ (433 ಕೋಟಿ ರೂ.) ಹಾಗೂ ‘ಕೆಜಿಎಫ್’ (44 ಕೋಟಿ ರೂಪಾಯಿ) ಉತ್ತಮ ಗಳಿಕೆ ಮಾಡಿತ್ತು.
#Kantara *#Hindi version* packs a healthy total in Weekend 2… Biz was affected due to #INDvPAK match on [second] Sun… [Week 2] Fri 2.05 cr, Sat 2.55 cr, Sun 2.65 cr. Total: ₹ 22.25 cr. #India biz. Nett BOC. pic.twitter.com/XrjGQOiTxO
— taran adarsh (@taran_adarsh) October 24, 2022
ಇದನ್ನೂ ಓದಿ: ತಗ್ಗುವ ಮಾತೇ ಇಲ್ಲ; ಬಾಲಿವುಡ್ನಲ್ಲಿ ಅಬ್ಬರಿಸುತ್ತಿರುವ ‘ಕಾಂತಾರ’ 9 ದಿನಕ್ಕೆ ಮಾಡಿದ ಗಳಿಕೆ ಇಷ್ಟೊಂದಾ?
ದೀಪಾವಳಿ ಪ್ರಯುಕ್ತ ಈ ವಾರ ಸಾಲುಸಾಲು ರಜೆಗಳು ಇವೆ. ಹೀಗಾಗಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರುತ್ತಾರೆ. ಇದರಿಂದ ‘ಕಾಂತಾರ’ ಚಿತ್ರದ ಕಲೆಕ್ಷನ್ ಹೆಚ್ಚಲಿದೆ. ರಿಷಬ್ ಶೆಟ್ಟಿ ಅವರು ನಿರ್ದೇಶನದ ಜತೆಗೆ ನಟನೆಯನ್ನೂ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿ ಆಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.
Published On - 2:31 pm, Mon, 24 October 22