ತಗ್ಗುವ ಮಾತೇ ಇಲ್ಲ; ಬಾಲಿವುಡ್ನಲ್ಲಿ ಅಬ್ಬರಿಸುತ್ತಿರುವ ‘ಕಾಂತಾರ’ 9 ದಿನಕ್ಕೆ ಮಾಡಿದ ಗಳಿಕೆ ಇಷ್ಟೊಂದಾ?
‘ಕಾಂತಾರ’ ಸಿನಿಮಾ ತೆರೆಗೆ ಬಂದು ಒಂದು ತಿಗಳಾಗುತ್ತಾ ಬಂದಿದೆ. ಆದಾಗ್ಯೂ ಕನ್ನಡದ ಮಂದಿ ಚಿತ್ರವನ್ನು ಕಣ್ತುಂಬಿಕೊಳ್ಳೋದನ್ನು ನಿಲ್ಲಿಸಿಲ್ಲ. ಅನೇಕರು ಮರಳಿ ಮರಳಿ ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ.
‘ಕಾಂತಾರ’ ಸಿನಿಮಾ (Kantara Movie) ನೋಡಿದವರೆಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ಗೆ ಎಲ್ಲರೂ ಫಿದಾ ಆಗಿದ್ದಾರೆ. ರಿಷಬ್ ಶೆಟ್ಟಿ ಎನರ್ಜಿ ಕಂಡು ಕಣ್ಣರಳಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಅಬ್ಬರಿಸಿದ ‘ಕಾಂತಾರ’ ಈಗ ಬಾಲಿವುಡ್ನಲ್ಲಿ ತನ್ನ ಅಬ್ಬರ ಮುಂದುವರಿಸಿದೆ. ಈ ಚಿತ್ರದ ಕಲೆಕ್ಷನ್ ತಗ್ಗುವ ಸೂಚನೆಯೇ ಸಿಗುತ್ತಿಲ್ಲ. 9 ದಿನಕ್ಕೆ ಈ ಚಿತ್ರ ಬರೋಬ್ಬರಿ 19 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ದೊಡ್ಡ ದೊಡ್ಡ ಬಾಲಿವುಡ್ ಚಿತ್ರಗಳ ಎದುರು ಈ ಸಿನಿಮಾ ಗೆದ್ದು ಬೀಗಿದೆ.
‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ರಿಲೀಸ್ ಆಯಿತು. ಈ ಸಿನಿಮಾನ ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡೋದು ಚಿತ್ರ ತಂಡದ ಆಲೋಚನೆ ಆಗಿತ್ತು. ಕನ್ನಡದಲ್ಲಿ ಸಿಕ್ಕ ಪ್ರತಿಕ್ರಿಯೆ ನೋಡಿ ಪರಭಾಷೆಯವರಿಗೂ ಕುತೂಹಲ ಮೂಡಿತು. ಹೀಗಾಗಿ, ಅವರು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಆಸಕ್ತಿ ತೋರಿದರು. ಈ ಕಾರಣಕ್ಕೆ ಈ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಮಾಡಲಾಯಿತು. ಈಗ ಸಿನಿಮಾ ಬಂಗಾರದ ಬೆಳೆ ತೆಗೆಯುತ್ತಿದೆ.
ಹಿಂದಿಯಲ್ಲಿ ಈ ಚಿತ್ರ ರಿಲೀಸ್ ಆಗಿ 9 ದಿನ ಕಳೆದಿದೆ. ಈ ಅವಧಿಯಲ್ಲಿ ಬರೋಬ್ಬರಿ 19.60 ಕೋಟಿ ರೂಪಾಯಿ ಗಳಿಸಿ ಬೀಗಿದೆ. ಶನಿವಾರ (ಅಕ್ಟೋಬರ್ 22) ಈ ಸಿನಿಮಾ 2.55 ಕೋಟಿ ರೂ. ಬಾಚಿಕೊಂಡಿದೆ. ಈಗಲೂ ಹಲವು ಕಡೆಗಳಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ದೀಪಾವಳಿ ಹಬ್ಬ ಬಂದಿದೆ. ಈ ಸಂದರ್ಭದಲ್ಲಿ ಸಾಲು ಸಾಲು ರಜೆಗಳಿವೆ. ಇದು ಚಿತ್ರಕ್ಕೆ ವರದಾನವಾಗಲಿದೆ.
#Kantara *#Hindi version* is truly unstoppable… Biz jumps again on [second] Sat… Expect growth on Day 10 [Sun], although biz *might* get affected due to #INDvPAK cricket match… [Week 2] Fri 2.05 cr, Sat 2.55 cr. Total: ₹ 19.60 cr. #India biz. Nett BOC. pic.twitter.com/Xpi16hJXgl
— taran adarsh (@taran_adarsh) October 23, 2022
ಕನ್ನಡದಲ್ಲಿ ಈಗಲೂ ಹೌಸ್ಫುಲ್!
‘ಕಾಂತಾರ’ ಸಿನಿಮಾ ತೆರೆಗೆ ಬಂದು ಒಂದು ತಿಂಗಳಾಗುತ್ತಾ ಬಂದಿದೆ. ಆದಾಗ್ಯೂ ಕನ್ನಡದ ಮಂದಿ ಚಿತ್ರವನ್ನು ಕಣ್ತುಂಬಿಕೊಳ್ಳೋದನ್ನು ನಿಲ್ಲಿಸಿಲ್ಲ. ಅನೇಕರು ಮರಳಿ ಮರಳಿ ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. ಈ ಕಾರಣಕ್ಕೆ ವೀಕೆಂಡ್ನಲ್ಲಿ ಬಹುತೇಕ ಶೋಗಳು ಸೋಲ್ಡ್ ಔಟ್ ಆಗಿವೆ. ಚಿತ್ರದ ಕಲೆಕ್ಷನ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಹಬ್ಬದ ಸಂದರ್ಭದಲ್ಲಿ ಸಿನಿಮಾ ಮತ್ತಷ್ಟು ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ.
Published On - 3:00 pm, Sun, 23 October 22