ಹರ್ಷನ ಎದುರು ರೆಡ್ಹ್ಯಾಂಡ್ ಆಗಿ ಸಿಕ್ಕಿ ಬೀಳ್ತಾಳೆ ಸಾನಿಯಾ? ಅಂದುಕೊಂಡಿದ್ದು ಕೊನೆಗೂ ಸಿಕ್ತು
ರತ್ನಮಾಲಾ ಕೋಮಾಗೆ ಹೋಗಿದ್ದಳೆ. ಆಸ್ತಿ ವಿಚಾರ, ಅಧಿಕಾರದ ವಿಚಾರದಲ್ಲಿ ಹರ್ಷ ಮಾತನಾಡಿದ್ದನ್ನು ಕೇಳಿ ರತ್ನಮಾಲಾಗೆ ಶಾಕ್ ಆಗಿದೆ. ಆತ ತಾನೇ ಮಾಲಾ ಸಂಸ್ಥೆಗೆ ಎಂ.ಡಿ. ಎಂದು ಘೋಷಿಸಿಕೊಂಡಿದ್ದಾನೆ. ಹರ್ಷನ ಆತುರದ ನಿರ್ಧಾರ ರತ್ನಮಾಲಾಗೆ ಶಾಕ್ ತರಿಸಿದೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಹರ್ಷ ಹಾಗೂ ಭುವಿ ಚಿಂತೆಗೆ ಒಳಗಾಗಿದ್ದಾರೆ. ರತ್ನಮಾಲಾಗೆ ತೀವ್ರವಾಗಿ ಅನಾರೋಗ್ಯ ಕಾಡಿದೆ. ಆಕೆ ಪ್ರಜ್ಞಾಹೀನಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಕೆ ಬದುಕೋದು ಅನುಮಾನ ಎನ್ನಲಾಗುತ್ತಿದೆ. ಇತ್ತ ಸಾನಿಯಾ ತನ್ನದೇ ಆಲೋಚನೆಯಲ್ಲಿದ್ದಾಳೆ. ಎಂ.ಡಿ. ಪಟ್ಟ ಹೋದ ಬೇಸರ ಆಕೆಯನ್ನು ಕಾಡುತ್ತಿದೆ.
‘ಕನ್ನಡತಿ’ ಧಾರಾವಾಹಿಯಲ್ಲಿ ಸಾನಿಯಾ ಮಾಡಿಕೊಂಡಿದ್ದ ಎಡವಟ್ಟಿನಿಂದ ಆಕೆ ತೊಂದರೆ ಅನುಭವಿಸುತ್ತಿದ್ದಾಳೆ. ರತ್ನಮಾಲಾಗೆ ಈ ಮೊದಲು ಆರೋಗ್ಯ ಕೆಟ್ಟಿತ್ತು. ಹೀಗಾಗಿ, ಆಕೆ ಅಮೆರಿಕಕ್ಕೆ ತೆರಳಿದ್ದಳು. ಅಮೆರಿಕ್ಕೆ ತೆರಳುವಾಗ ಆಕೆಯನ್ನು ಕೊಲ್ಲಲು ಸಾನಿಯಾ ಪ್ರಯತ್ನಿಸಿದ್ದಳು. ಇದನ್ನು ರತ್ನಮಾಲಾ ವಿಡಿಯೋ ಮಾಡಿ ಇಟ್ಟುಕೊಂಡಿದ್ದಳು. ಈ ವಿಡಿಯೋನ ಸಾನಿಯಾಗೆ ಕಳುಹಿಸಿದ್ದಳು ಕೂಡ. ವಿಡಿಯೋ ಇರುವ ಮೊಬೈಲ್ ಮೇಲೆ ಸಾನಿಯಾ ಕಣ್ಣಿಟ್ಟಿದ್ದಳು. ಇದೇ ಕಾರಣಕ್ಕೆ ಸೊಸೆ ಭುವಿಗೆ ಈ ಮೊಬೈಲ್ನ ರತ್ನಮಾಲಾ ಹಸ್ತಾಂತರ ಮಾಡಿದ್ದಳು. ಇದಾದ ಹಲವು ದಿನಗಳ ಬಳಿಕ ಮೊಬೈಲ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸಾನಿಯಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳೋದು ಬಹುತೇಕ ಖಚಿತವಾಗಿದೆ.
ರತ್ನಮಾಲಾ ಕೋಮಾಗೆ ಹೋಗಿದ್ದಾಳೆ. ಆಸ್ತಿ ವಿಚಾರ, ಅಧಿಕಾರದ ವಿಚಾರದಲ್ಲಿ ಹರ್ಷ ಮಾತನಾಡಿದ್ದನ್ನು ಕೇಳಿ ರತ್ನಮಾಲಾಗೆ ಶಾಕ್ ಆಗಿದೆ. ಆತ ತಾನೇ ಮಾಲಾ ಸಂಸ್ಥೆಗೆ ಎಂ.ಡಿ. ಎಂದು ಘೋಷಿಸಿಕೊಂಡಿದ್ದಾನೆ. ಹರ್ಷನ ಆತುರದ ನಿರ್ಧಾರ ರತ್ನಮಾಲಾಗೆ ಶಾಕ್ ತರಿಸಿದೆ. ಆಕೆ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾಳೆ. ಈ ವಿಚಾರ ಗೊತ್ತಿಲ್ಲದೆ ಮಾಲಾ ಶಿಕ್ಷಣ ಸಂಸ್ಥೆಗೆ ಹರ್ಷ ಎಂ.ಡಿ. ಆಗಿದ್ದಾನೆ. ಈ ವಿಚಾರ ಕೇಳಿಯೇ ರತ್ನಮಾಲಾ ಕೋಮಾ ಹೋಗಿದ್ದಳು.
ರತ್ನಮಾಲಾ ಕೋಮಾಗೆ ಹೋದ ವಿಚಾರ ಕೇಳಿ ಹರ್ಷನಿಗೆ ಶಾಕ್ ಆಗಿದೆ. ಆಕೆಗೆ ಒಮ್ಮೆ ಪ್ರಜ್ಞೆ ಬಂದಿತ್ತು. ಆದರೆ, ನರ್ಸ್ನ ಮೊಬೈಲ್ ನೋಡಿ ಮತ್ತೆ ಪ್ರಜ್ಞೆತಪ್ಪಿದ್ದಾಳೆ. ಮೊಬೈಲ್ ನೋಡಿ ರತ್ನಮಾಲಾ ಎಚ್ಚರ ತಪ್ಪುತ್ತಿದ್ದಾಳೆ ಎಂಬ ವಿಚಾರ ಹರ್ಷನಿಗೆ ಅನುಮಾನ ಮೂಡಿಸಿತ್ತು. ಮೊಬೈಲ್ನಲ್ಲಿ ಏನೋ ಇದೆ ಎಂಬುದು ಹರ್ಷನಿಗೆ ಗೊತ್ತಾಗಿತ್ತು. ಹೀಗಾಗಿ ರತ್ನಮಾಲಾ ಮೊಬೈಲ್ಗಾಗಿ ಹರ್ಷ ಹುಡುಕಾಡಿದ್ದಾನೆ.
ರತ್ನಮಾಲಾ ಮೊಬೈಲ್ ಬದಲಿಸಿದ ವಿಚಾರ ಭುವಿಗೆ ಮಾತ್ರ ಗೊತ್ತಿದೆ. ಆಕೆ ಮನೆಗೆ ಬಂದು ಮೊಬೈಲ್ ತೆಗೆದಿದ್ದಾಳೆ. ಅದೇ ಸಮಯಕ್ಕೆ ಬಂದ ಹರ್ಷ, ಪಾಸ್ವರ್ಡ್ಗಾಗಿ ಪ್ರಯತ್ನಿಸಿದ್ದಾನೆ. ಆದರೆ, ಯಾವ ಪಾಸ್ವರ್ಡ್ ಕೂಡ ವರ್ಕ್ ಆಗಿಲ್ಲ. ಈ ವೇಳೆ ಸಾನಿಯಾ ಬಿಸಿ ಬಾಂಡಲೆ ಮೇಲೆ ಕುಳಿತಂತೆ ಆಡಿದ್ದಾಳೆ.
ರೂಂನಲ್ಲಿ ಹುಡುಕಾಡಿದ ಸಾನಿಯಾ
ಭುವಿಯ ಬಳಿ ಮೊಬೈಲ್ ಇದೆ ಎಂಬ ವಿಚಾರವನ್ನು ಸಾನಿಯಾ ಮಾವ ಖಚಿತಪಡಿಸಿದ್ದ. ಇದೇ ಮಾಹಿತಿಯನ್ನು ಪಡೆದು ಸಾನಿಯಾ ಭುವಿಯ ರೂಂನಲ್ಲಿ ಹುಡುಕಾಡಿದ್ದಾಳೆ. ಆದರೆ, ಎಲ್ಲಿಯೂ ಆಕೆಗೆ ಮೊಬೈಲ್ ಸಿಕ್ಕಿಲ್ಲ. ಭುವಿ ರೂಂಗೆ ಇನ್ನೇನು ಎಂಟ್ರಿ ಪಡೆಯಬೇಕು ಎನ್ನುವಾಗಲೇ ಸಾನಿಯಾ ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ಮೊಬೈಲ್ನಲ್ಲಿ ಏನಿದೆ?
ಮೊಬೈಲ್ ಲಾಕ್ ಓಪನ್ ಆದರೆ ಸಾನಿಯಾ ಬದುಕು ಬಹುತೇಕ ಕೊನೆಯಾದಂತೆ. ಅದರಲ್ಲೂ ಹರ್ಷನ ಬಳಿ ಈ ಮೊಬೈಲ್ ಸಿಕ್ಕರಂತೂ ಸಾನಿಯಾಳನ್ನು ಆತ ಸಾಯಿಸಿದರೂ ಅಚ್ಚರಿ ಏನಿಲ್ಲ. ರತ್ನಮಾಲಾಳನ್ನು ಸಾನಿಯಾ ಕೊಲ್ಲಲು ಪ್ರಯತ್ನಿಸಿದ್ದಳು. ಇದರ ಸಂಪೂರ್ಣ ವಿಡಿಯೋ ಆ ಮೊಬೈಲ್ನಲ್ಲಿದೆ. ಹರ್ಷನ ವಿರುದ್ಧ ಕೇಸ್ ದಾಖಲಿಸಬೇಕು ಎಂಬ ಪ್ಲ್ಯಾನ್ನಲ್ಲಿ ಸಾನಿಯಾ ಇದ್ದಳು. ಆದರೆ, ಈಗ ವಿಡಿಯೋ ವಿಚಾರದಿಂದ ಸಾನಿಯಾಗೆ ಸಂಕಷ್ಟ ಎದುರಾಗಿದೆ. ಈ ವಿಡಿಯೋ ಇಟ್ಟುಕೊಂಡು ಸಾನಿಯಾಳನ್ನು ಅವರು ಜೈಲಿಗೆ ಕಳುಹಿಸಬಹುದು.
ಶ್ರೀಲಕ್ಷ್ಮಿ ಎಚ್.