Lakshana Serial: ಭೂಪತಿ ಮನೆ ಸೇರಿದ ಖುಷಿಯಲ್ಲಿ ತೇಲಾಡುತ್ತಿದ್ದಾಳೆ ಶ್ವೇತಾ
ಕೊನೆಗೂ ಭೂಪತಿ ಮನೆಗೆ ಬಂದಿದ್ದಾಳೆ ಶ್ವೇತಾ, ಈಗ ತಾನೆ ಬಂದಿರುವ ವೈಭೋಗದ ಜೀವನವನ್ನು ಕಂಡು ಸಂತೋಷವಾಗಿದ್ದಾಳೆ ಶ್ವೇತಾ. ಈಕೆ ಅಂದುಕೊಂಡಂತೆ ಎಲ್ಲವೂ ನಡೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷಣ ಧಾರವಾಹಿಯು ವಿಭಿನ್ನ ಕಥೆಗಳ ಮೂಲಕ ವೀಕ್ಷಕರ ಮನ ಗೆದ್ದಿದೆ. ಅಂತೂ ಇಂತೂ ನಕ್ಷತ್ರಳಿಗೆ ಚಾಲೆಂಜ್ ಮಾಡಿದ ಹಾಗೆ ಶ್ವೇತಾ ಭೂಪತಿಯ ಮನೆಗೆ ಬಂದಾಗಿದೆ. ಕಾಗೆ ಬಂಗಾರವನ್ನು ಶುದ್ಧ ಬಂಗಾರ ಎಂದುಕೊಂಡು ಸ್ವತಃ ಶಕುಂತಳಾದೇವಿಯೇ ಶ್ವೇತಾಳನ್ನು ಕೈ ಮುಗಿದು ಬೇಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ವೈಭೋಗದ ಜೀವನವನ್ನು ನೋಡದೆ ಅದೆಷ್ಟೋ ದಿನವಾಗಿದ್ದ ಶ್ವೇತಾಳಿಗೆ ಭೂಪತಿ ಮನೆ ಸೇರಿದಾಗ ಎಲ್ಲಿಲ್ಲದ ಸಂತೋಷ, ಇನ್ನಾದರೂ ಹೊಸ ಹೊಸ ಬ್ರಾಂಡೆಡ್ ಬಟ್ಟೆಗಳನ್ನು ತೊಡಬಹುದು, ವೈಭೋಗದ ಜೀವನವನ್ನು ನಡೆಸಬಹುದು, ಹಿಂದೆವಿದ್ದ ನನ್ನ ಲಕ್ಷ ರಿಯಸ್ ಲೈಫ್ ನನಗೆ ವಾಪಸ್ ಸಿಕ್ಕಿತಲ್ವಾ ಎನ್ನುವ ಖುಷಿಯಲ್ಲಿದ್ದಾಳೆ. ಭೂಪತಿ ಕೂಡಾ ಅವಳು ಮನೆಯಲ್ಲಿ ಇರುವುದಕ್ಕೆ ಯಾವುದೇ ಅಡ್ಡಿಯಿಲ್ಲ, ಸ್ವಲ್ಪ ದಿನ ಆಕೆ ನಮ್ಮ ಮನೆಯಲ್ಲಿಯೇ ಇರಲಿ ಎಂದು ಶಕುಂತಳಾದೇವಿ ಬಳಿ ಹೇಳುತ್ತಾನೆ.
ಭೂಪತಿಯ ಮನೆಯವರೆಲ್ಲರೂ ನಿಜವಾಗಿಯೂ ತುಕಾರಾಮ್ ಶ್ವೇತಾಳನ್ನು ಮನೆಯಿಂದ ಹೊರಗಡೆ ಹಾಕಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ನಕ್ಷತ್ರಳಿಗೆ ಆಕೆಯ ನರಿ ಬುದ್ಧಿ ಗೊತ್ತಿರುವ ಕಾರಣ ಎಲ್ಲೋ ಏನೋ ಯಡವಟ್ಟು ಆಗಿದೆ. ಅಪ್ಪ ತಾನಾಗಿಯೇ ಆಕೆಯನ್ನು ಮನೆಯಿಂದ ಹೊರ ಹಾಕಲು ಸಾಧ್ಯವೇ ಇಲ್ಲ ಎಂದು ಮನಸ್ಸಿನಲ್ಲೇ ಭಾವಿಸುತ್ತಾಳೆ. ನಕ್ಷತ್ರಳ ಊಹೆ ನಿಜ, ಯಾಕೆಂದ್ರೆ ತುಕಾರಾಮ್ ಬೇಕೆಂದು ಶ್ವೇತಾಳನ್ನು ಮನೆಯಿಂದ ಹೊರ ಹಾಕಿದ್ದಲ್ಲ. ಶ್ವೇತಾಳೇ ಒಂದು ಪ್ಲಾನ್ ಮಾಡಿ ಶಕುಂತಳಾದೇವಿ ನಮ್ಮ ಮನೆಗೆ ಬರುತ್ತಿದ್ದಂತೆ ನನ್ನನ್ನು ಹೊಡೆದು ಬಡಿದು ಮನೆಯಿಂದ ಹೊರ ಹಾಕಿ, ಯಾರ ಮಾತನ್ನು ಕೇಳಬೇಡಿ ಎಂದು ಹೇಳುತ್ತಾಳೆ. ನನಗೆ ಈ ಪುಟ್ಟ ಮನೆಯಲ್ಲಿರುವುದು ತುಂಬಾ ಕಷ್ಟ ಆಗುತ್ತದೆ. ಭೂಪತಿಯ ಮನೆ ಸೇರಿದರೆ ನನಗೂ ಲಾಭ, ನಿಮಗೂ ಲಾಭ. ಬೇಕಾದಗೆಲ್ಲಾ ನಿಮಗೆ ಹಣವನ್ನು ಕೊಡುತ್ತೇನೆ ಎಂದು ತುಕಾರಾಮ್‌ಗೆ ಹಣದ ಆಸೆಯನ್ನು ತೋರಿಸಿ ಅವಳ ಬೇಳೆಯನ್ನು ಬೇಯಿಸಿಕೊಳ್ಳಲು ತುಕರಾಮ್‌ನನ್ನು ದಾಳವಾಗಿ ಬಳಸುತ್ತಾಳೆ. ದುಡ್ಡಿನ ಆಸೆಗೆ ಶ್ವೇತಾ ಹೇಳಿದ ಹಾಗೆ ಆಕೆಯನ್ನು ಮನೆಯಿಂದ ಹೊರ ಹಾಕುತ್ತಾನೆ. ಎಲ್ಲವೂ ಶ್ವೇತಾಳ ಪ್ಲಾನ್ ಪ್ರಕಾರವೇ ನಡೆದಿದೆ.
ಇದನ್ನು ಓದಿ: ತಂದೆಯ ತಿರಸ್ಕಾರವೇ ಶ್ವೇತಾಳ ಪಾಲಿಗೆ ವರದಾನ
ಅಂದುಕೊಂಡಿದ್ದನ್ನು ಸಾಧಿಸಿದ ಅಲ್ಪ ಖುಷಿಯಲ್ಲಿ ತೇಳಾಡುತ್ತಿದ್ದಾಳೆ ಶ್ವೇತಾ. ಭೂಪತಿಯ ಮನೆಗೆ ಎಂಟ್ರಿ ಕೊಟ್ಟಾಗಿದೆ. ಇನ್ನು ಮುಂದೆ ಭೂಪತಿಯ ಜೀವನದಲ್ಲಿ ಎಂಟ್ರಿಕೊಟ್ಟು, ಭೂಪತಿಯ ಮನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಲೈಫ್ ಸೆಟಲ್ ಮಾಡಿಕೊಳ್ಳುವ ಹೊಂಚುಹಾಕುತ್ತಿದ್ದಾಳೆ ಶ್ವೇತಾ. ಮನೆ ಸೇರಿಕೊಂಡ ಹಾಗೆ ಭೂಪತಿಯ ಜೀವನಕ್ಕೆ ಕಾಲಿಡುವುದು ತುಂಬಾ ಕಷ್ಟದ ಮಾತೇ ಸರಿ. ಯಾಕೆಂದರೆ ನಕ್ಷತ್ರ ಇರುವವರೆಗೂ ಬಿಳಿ ಜಿರಳೆ ಶ್ವೇತಾ ಭೂಪತಿಯ ಜೀವನಕ್ಕೆ ಎಂಟ್ರಿಕೊಡಲು ಸಾಧ್ಯವಿಲ್ಲ.
ಮುಂದಿನ ಪ್ಲಾನ್ ಬಗ್ಗೆ ಮುಂದೆ ಯೋಚನೆ ಮಾಡಿದರಾಯಿತು ಎಂದು ಈಗ ತಾನೆ ಬಂದಿರುವ ವೈಭೋಗದ ಜೀವನವನ್ನು ಕಂಡು ಸಂತೋಷವಾಗಿದ್ದಾಳೆ ಶ್ವೇತಾ. ಈಕೆ ಅಂದುಕೊಂಡಂತೆ ಎಲ್ಲವೂ ನಡೆಯುತ್ತಾ, ಶಾಶ್ವತವಾಗಿ ಭೂಪತಿಯ ಮನೆಯಲ್ಲಿಯೇ ಉಳಿದುಬಿಡುತ್ತಾಳಾ ಎಂಬುವುದುನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ
Published On - 10:52 am, Fri, 28 October 22