‘ಕೊಲ್ಲಬೇಕು ಅಂದಾಗ ಆಗಿಲ್ಲ, ಈಗ ಅವರು ಉಳಿಯೋದು ಡೌಟ್’; ಮೊಸಳೆ ಕಣ್ಣೀರು ಹಾಕಿದ ಸಾನಿಯಾ
ರತ್ನಮಾಲಾಳನ್ನು ಕೊಲ್ಲಲು ಸಾನಿಯಾ ಪ್ರಯತ್ನ ಮಾಡಿದ್ದಳು. ಇದನ್ನು ರತ್ನಮಾಲಾ ವಿಡಿಯೋ ಮಾಡಿ ಇಟ್ಟುಕೊಂಡಿದ್ದಾಳೆ. ಈ ವಿಡಿಯೋ ಮೊಬೈಲ್ನಲ್ಲಿ ಹಾಗೆಯೇ ಇದೆ. ಈ ಭಯ ಸಾನಿಯಾಗೆ ಇದೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು
ಶೈಲಿ: ಫ್ಯಾಮಿಲಿ ಡ್ರಾಮಾ. ರತ್ನಮಾಲಾ ಮಾಲಾ ಸಂಸ್ಥೆಯ ಒಡತಿ. ಆಕೆಯ ಆಸ್ತಿ ಹೊಡೆಯಬೇಕು ಎಂದು ಹಿರಿ ಸೊಸೆ ಸಾನಿಯಾ ಕಣ್ಣು ಹಾಕಿದ್ದಾಳೆ. ಆದರೆ, ಈ ಆಸ್ತಿಯನ್ನು ಆಕೆ ಬರೆದಿದ್ದು ಭುವಿಗೆ. ಮಗ ಹರ್ಷ ಹಾಗೂ ಸೊಸೆ ಎಂದರೆ ರತ್ನಮಾಲಾಗೆ ಅಚ್ಚುಮೆಚ್ಚು.
‘ಕನ್ನಡತಿ’ (Kannadathi) ಧಾರಾವಾಹಿಯಲ್ಲಿ ರತ್ನಮಾಲಾ ಪಾತ್ರ ಸಾಕಷ್ಟು ಹೈಲೈಟ್ ಆಗಿತ್ತು. ಆಕೆ ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟ ಆಗಿದೆ. ಎಂತಹ ಸಂದರ್ಭದಲ್ಲೂ ಆಕೆ ಕೂಲ್ ಆಗಿಯೇ ರಿಯಾಕ್ಟ್ ಮಾಡುತ್ತಿದ್ದಳು. ಆದರೆ, ಈಗ ಈ ಪಾತ್ರ ಕೊನೆ ಆಗಲಿದೆಯೇ ಎಂಬ ಪ್ರಶ್ನೆ ವೀಕ್ಷಕರಲ್ಲಿ ಕಾಡುತ್ತಿದೆ. ಸದ್ಯ ರತ್ನಮಾಲಾ ಕೋಮಾದಲ್ಲಿ ಇದ್ದಾಳೆ. ಕಳೆದ ಎರಡು ಮೂರು ಬಾರಿ ಆಕೆ ಇದೇ ರೀತಿ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆದರೆ, ಬದುಕಿ ಬಂದಿದ್ದಳು. ಆದರೆ, ಈ ಬಾರಿ ಆಕೆ ಬದುಕೋದು ಅನುಮಾನ ಎನ್ನಲಾಗುತ್ತಿದೆ. ಈ ಬಗ್ಗೆ ಸಾನಿಯಾ ಮರುಕ ವ್ಯಕ್ತಪಡಿಸಿದ್ದಾಳೆ. ಆಕೆ ಕಣ್ಣೀರು ಹಾಕಿದ್ದಾಳೆ. ವಿಚಿತ್ರ ಎಂದರೆ ಕಣ್ಣೀರು ಹಾಕಿದ ಕೆಲವೇ ನಿಮಿಷಗಳಲ್ಲಿ ಆಕೆ ಮತ್ತೆ ಸಂಚು ಶುರು ಮಾಡಿದ್ದಾಳೆ.
ಸಾನಿಯಾ ಸಂಚು ಮಾಡೋಕೆ ಎತ್ತಿದ ಕೈ. ಆಕೆ ಮಾಡುವ ಸಂಚಿಗೆ ಅನೇಕರು ಬಲಿ ಆಗಿದ್ದಾರೆ. ಆದರೆ, ಇತ್ತೀಚೆಗೆ ಹರ್ಷನೇ ಸಾನಿಯಾ ವಿರುದ್ಧ ಪ್ಲ್ಯಾನ್ ಮಾಡಿದ್ದ. ಆಕೆಯನ್ನು ಏಕಾಏಕಿ ಮಾಲಾ ಸಂಸ್ಥೆಯ ಎಂಡಿ ಸ್ಥಾನದಿಂದ ತೆಗೆದು ಹಾಕಿದ್ದ. ತನಗೆ ರತ್ನಮಾಲಾ ಮಾತ್ರ ಸಹಾಯ ಮಾಡೋಕೆ ಸಾಧ್ಯ ಎಂದು ಸಾನಿಯಾ ಅಂದುಕೊಂಡಿದ್ದಳು. ಆದರೆ, ಅವಳ ಲೆಕ್ಕಾಚಾರ ಉಲ್ಟಾ ಆಗಿತ್ತು. ಈಗ ರತ್ನಮಾಲಾ ಕೋಮಾಗೆ ಹೋಗಿರುವುದರಿಂದ ಸಾನಿಯಾ ಚಿಂತೆ ಹೆಚ್ಚಿದೆ.
ರತ್ನಮಾಲಾಗೆ ಮರೆವಿನ ಕಾಯಿಲೆ ಶುರುವಾಗಿದೆ. ಇದು ಕೊನೆಯ ಹಂತದಲ್ಲಿದೆ. ಯಾವಾಗ ಏನು ಬೇಕಾದರೂ ಆಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು. ಹಾಗೆಯೇ ಆಗಿದೆ. ಆಕೆ ಪ್ರಜ್ಞೆ ತಪ್ಪಿದ್ದಾಳೆ. ಇದರಿಂದ ಸಾನಿಯಾಗೆ ಬೇಸರ ಕಾಡುತ್ತಿದೆ. ರತ್ನಮಾಲಾ ಮೃತಪಟ್ಟರೆ ತನ್ನ ಪಾಲಿಗೆ ಯಾರೂ ಇರುವುದಿಲ್ಲ ಎಂಬ ಭಯ ಆಕೆಯನ್ನು ಬಲವಾಗಿ ಕಾಡುತ್ತಿದೆ. ಈ ಕಾರಣಕ್ಕೆ ಸಾನಿಯಾ ಕಣ್ಣೀರು ಹಾಕಿದ್ದಾಳೆ.
ಹರ್ಷನ ವಿರುದ್ಧ ದೂರು ನೀಡೋಕೆ ಪೊಲೀಸ್ ಠಾಣೆಗೆ ಆಕೆ ತೆರಳುವವಳಿದ್ದಳು. ಅದೇ ಸಮಯಕ್ಕೆ ಆಕೆಯ ಗಂಡ ಆದಿ ಕಾಲ್ ಮಾಡಿದ್ದಾನೆ. ‘ದೊಡ್ಡಮ್ಮ ಕೋಮಾಗೆ ಹೋಗಿದ್ದಾಳೆ. ಈಗಲೇ ಆಸ್ಪತ್ರೆಗೆ ಬಾ’ ಎಂದು ಹೇಳಿದ್ದಾನೆ. ಇದನ್ನು ಕೇಳುತ್ತಲೇ ಸಾನಿಯಾಗೆ ದುಃಖ ಉಮ್ಮಳಿಸಿ ಬಂದಿದೆ. ಈ ವಿಚಾರದ ಬಗ್ಗೆ ಅಲ್ಲಿಯೇ ಇದ್ದ ವರುಧಿನಿ ಜತೆ ಮಾತನಾಡಿದ್ದಾಳೆ ಸಾನಿಯಾ.
‘ನಾನು ಕೊಲ್ಲೋಕೆ ಪ್ರಯತ್ನಿಸಿದೆ. ಆದರೆ, ಆಗ ಸಾಯಲಿಲ್ಲ. ಈಗ ಆಕೆಯನ್ನು ಉಳಿಸಿಕೊಳ್ಳಬೇಕು ಎಂದರೂ ಸಾಧ್ಯವಾಗುತ್ತಿಲ್ಲ. ನಾನು ಒಂಟಿ ಎನಿಸುತ್ತಿದೆ. ಇಡೀ ಮನೆ ನನ್ನ ವಿರುದ್ಧ ನಿಂತಾಗ ಅತ್ತೆ ನನ್ನ ಪರವಾಗಿ ನಿಂತಳು. ನನಗೆ ಅಧಿಕಾರಿ ನೀಡಿದಳು’ ಎಂದು ಸಾನಿಯಾ ಕಣ್ಣೀರು ಹಾಕಿದ್ದಾಳೆ. ಸಾನಿಯಾ ಕಣ್ಣೀರು ಹಾಕಿದ್ದನ್ನು ನೋಡಿ ವರುಧಿನಿಗೆ ಅಚ್ಚರಿ ಆಗಿದೆ. ಇದೇ ಸಂದರ್ಭದಲ್ಲಿ ಹರ್ಷನನ್ನು ಅರೆಸ್ಟ್ ಮಾಡಿಸುವ ವಿಚಾರ ನೆನಪಿಗೆ ಸಾನಿಯಾಗೆ ಬಂದಿದೆ. ಮತ್ತೆ ಬಣ್ಣ ಬದಲಾಯಿಸಿದ್ದಾಳೆ.
‘ಹರ್ಷ ಈಗ ಆಸ್ಪತ್ರೆಯಲ್ಲಿ ಇದ್ದಾನೆ. ಆತನನ್ನು ಈಗ ಅರೆಸ್ಟ್ ಮಾಡಿಸಬೇಕಿದೆ. ಹರ್ಷ ಜೈಲಿನಲ್ಲಿ, ಆತನ ಅಮ್ಮ ಆಸ್ಪತ್ರೆಯಲ್ಲಿ. ಹರ್ಷ ವಿಲವಿಲ ಒದ್ದಾಡುತ್ತಾನೆ’ ಎಂದು ಸಾನಿಯಾಗೆ ಅನಿಸಿದೆ. ಕ್ಷಣಮಾತ್ರದಲ್ಲಿ ಸಾನಿಯಾ ಬದಲಾಗಿದ್ದು ನೋಡಿ ವರುಧಿನಿಗೆ ಶಾಕ್ ಆಗಿದೆ.
ರತ್ನಮಾಲಾಳನ್ನು ಕೊಲ್ಲಲು ಸಾನಿಯಾ ಪ್ರಯತ್ನ ಮಾಡಿದ್ದಳು. ಇದನ್ನು ರತ್ನಮಾಲಾ ವಿಡಿಯೋ ಮಾಡಿ ಇಟ್ಟುಕೊಂಡಿದ್ದಾಳೆ. ಈ ವಿಡಿಯೋ ಮೊಬೈಲ್ನಲ್ಲಿ ಹಾಗೆಯೇ ಇದೆ. ಈ ಭಯ ಸಾನಿಯಾಗೆ ಇದೆ. ಆ ವಿಡಿಯೋ ಹುಡುಕಾಟದಲ್ಲಿ ಆಕೆ ಇದ್ದಾಳೆ.
ಶ್ರೀಲಕ್ಷ್ಮಿ ಎಚ್.