Neha Gowda: ಬಿಗ್ ಬಾಸ್ ಶೋನಿಂದ ಹೊರಬಿದ್ದ ನೇಹಾ ಗೌಡ; 5ನೇ ವಾರಕ್ಕೆ ಜರ್ನಿ ಮುಕ್ತಾಯ
Bigg Boss Elimination: ಒಟ್ಟು 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಆ ಪೈಕಿ 5ನೇ ವಾರದಲ್ಲಿ ನೇಹಾ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. ಟ್ರೋಫಿ ಗೆಲ್ಲುಬೇಕು ಎಂಬ ಅವರ ಕನಸು ಅಂತ್ಯವಾಗಿದೆ.
ಕನ್ನಡದಲ್ಲಿ ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮಕ್ಕೆ ದೊಡ್ಡ ಪ್ರೇಕ್ಷಕರ ವರ್ಗ ಇದೆ. ಕಿಚ್ಚ ಸುದೀಪ್ ಅವರ ಆಕರ್ಷಕ ನಿರೂಪಣೆಯಲ್ಲಿ ಈ ಶೋ ಉತ್ತಮವಾಗಿ ಮೂಡಿಬರುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ ಕಾರ್ಯಕ್ರಮದಲ್ಲಿ ಐದನೇ ವಾರದ ಎಲಿಮಿನೇಷನ್ (Bigg Boss Elimination) ಪ್ರಕ್ರಿಯೆ ಮುಗಿದಿದೆ. ಈ ವಾರ ನೇಹಾ ಗೌಡ (Neha Gowda) ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ. ಉತ್ತಮ ಫ್ಯಾನ್ ಫಾಲೋಯಿಂಗ್ ಇದ್ದರೂ ಕೂಡ ಅವರು 6ನೇ ವಾರಕ್ಕೆ ಎಂಟ್ರಿ ಪಡೆಯುವಲ್ಲಿ ವಿಫಲರಾಗಿದ್ದಾರೆ. ಟ್ರೋಫಿ ಗೆಲ್ಲಬೇಕು ಎಂಬ ಆಸೆ ಇಟ್ಟುಕೊಂಡು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಿದ್ದ ಅವರ ಆಟ 5ನೇ ವಾರಕ್ಕೆ ಅಂತ್ಯವಾಗಿದೆ.
ಈ ವಾರ ರೂಪೇಶ್ ರಾಜಣ್ಣ, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ನೇಹಾ ಗೌಡ, ಪ್ರಶಾಂತ್ ಸಂಬರ್ಗಿ, ಅಮೂಲ್ಯ ಗೌಡ, ರಾಕೇಶ್ ಅಡಿಗ, ಆರ್ಯವರ್ಧನ್ ಹಾಗೂ ಕಾವ್ಯಶ್ರೀ ಗೌಡ ಅವರು ನಾಮಿನೇಟ್ ಆಗಿದ್ದರು. ಶನಿವಾರದ (ಅ.29) ಸಂಚಿಕೆಯಲ್ಲಿ ಕಾವ್ಯಶ್ರೀ ಗೌಡ, ಆರ್ಯವರ್ಧನ್ ಮತ್ತು ರಾಕೇಶ್ ಅಡಿಗ ಸೇಫ್ ಆದರು. ಇನ್ನುಳಿದ ಆರು ಸ್ಪರ್ಧಿಗಳ ಮೇಲೆ ಎಲಿಮಿನೇಷನ್ ಕತ್ತಿ ತೂಗುತ್ತಿತ್ತು. ಅಂತಿಮವಾಗಿ ನೇಹಾ ಗೌಡ ಅವರ ಬಿಗ್ ಬಾಸ್ ಜರ್ನಿ ಮುಕ್ತಾಯ ಆಗಿದೆ.
ಪ್ರತಿ ಎಲಿಮಿನೇಷನ್ ನಡೆದ ನಂತರವೂ ಬಿಗ್ ಬಾಸ್ ಮನೆಯಲ್ಲಿ ಪೈಪೋಟಿ ಹೆಚ್ಚುತ್ತದೆ. ಈಗ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಕಡಿಮೆ ಸ್ಪರ್ಧಿಗಳು ಇರುವಾಗ ಹಣಾಹಣಿಯ ಕಾವು ಜೋರಾಗುತ್ತದೆ. ಬೇರೆ ಬೇರೆ ವ್ಯಕ್ತಿತ್ವದ ಜನರ ನಡುವೆ ಆಟ ಮುಂದುವರಿದಿದೆ. ಈ ಬಾರಿಯ ಬಿಗ್ ಬಾಸ್ ಸ್ವಲ್ಪ ಡಿಫರೆಂಟ್ ಆಗಿದೆ. ಇದೇ ಮೊದಲ ಬಾರಿಗೆ ‘ನವೀನರು’ ಮತ್ತು ‘ಪ್ರವೀಣರು’ ದೊಡ್ಮನೆ ಸೇರಿದ್ದಾರೆ. ಹಳೇ ಸ್ಪರ್ಧಿಗಳು ಪ್ರವೀಣರು. ಹೊಸ ಸ್ಪರ್ಧಿಗಳು ನವೀನರು. ಈ ಸೀಸನ್ನಲ್ಲಿ ಯಾರಿಗೆ ಟ್ರೋಫಿ ಸಿಗಬಹುದು ಎಂಬ ಬಗ್ಗೆ ವೀಕ್ಷಕರ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಯಾರಿಗೂ ಸಿಗಲಿಲ್ಲ ಕಿಚ್ಚನ ಚಪ್ಪಾಳೆ:
ಪ್ರತಿ ವಾರ ಚೆನ್ನಾಗಿ ಆಡಿದ ಓರ್ವ ಸ್ಪರ್ಧಿಗೆ ಕಿಚ್ಚ ಸುದೀಪ್ ಅವರು ಮೆಚ್ಚುಗೆ ನೀಡುತ್ತಾರೆ. ‘ಕಿಚ್ಚನ ಚಪ್ಪಾಳೆ’ ಪಡೆಯುವುದು ಸ್ಪರ್ಧಿಗಳ ಪಾಲಿಗೆ ಹೆಮ್ಮೆಯ ವಿಚಾರ. ಆದರೆ 5ನೇ ವಾರ ಯಾರೂ ಕೂಡ ಚೆನ್ನಾಗಿ ಆಡಿಲ್ಲ ಎಂಬ ಕಾರಣಕ್ಕೆ ಸುದೀಪ್ ಅವರು ಯಾರಿಗೂ ಮೆಚ್ಚುಗೆ ನೀಡಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:34 pm, Sun, 30 October 22