BBK9: ಪ್ರಶಾಂತ್​ ಸಂಬರ್ಗಿಗೆ ‘ಬೌ ಬೌ ಸ್ಟಾರ್​’ ಬಿರುದು; ಎಲಿಮಿನೇಷನ್​ಗೂ ಮುನ್ನ ಭರ್ಜರಿ ನಗು

Arun Sagar | Prashanth Sambargi: ಸೆಲೆಬ್ರಿಟಿಗಳಿಗೆ ಬಿರುದುಗಳನ್ನು ಕೊಡುವುದು ಸಹಜ. ಬಿಗ್​ ಬಾಸ್​ ಮನೆಯಲ್ಲಿ ಇರುವ ಸ್ಪರ್ಧಿಗಳು ಪರಸ್ಪರ ಬಿರುದು ಕೊಟ್ಟುಕೊಂಡರೆ ಹೇಗಿರುತ್ತದೆ?

BBK9: ಪ್ರಶಾಂತ್​ ಸಂಬರ್ಗಿಗೆ ‘ಬೌ ಬೌ ಸ್ಟಾರ್​’ ಬಿರುದು; ಎಲಿಮಿನೇಷನ್​ಗೂ ಮುನ್ನ ಭರ್ಜರಿ ನಗು
ಬಿಗ್ ಬಾಸ್ ಕನ್ನಡ ಸೀಸನ್ 9
Follow us
TV9 Web
| Updated By: ಮದನ್​ ಕುಮಾರ್​

Updated on:Oct 30, 2022 | 5:58 PM

ಬಿಗ್​ ಬಾಸ್​ (Bigg Boss) ಮನೆಯಲ್ಲಿ ಭಾವನೆಗಳ ಆಟ ನಡೆದೇ ಇರುತ್ತದೆ. ಒಮ್ಮೆ ಕೋಪ, ಇನ್ನೊಮ್ಮೆ ಪ್ರೀತಿ, ಮತ್ತೊಮ್ಮೆ ನಗು, ಮಗದೊಮ್ಮೆ ಅಳು, ಆಗಾಗ ಜಗಳ, ಅದರ ನಡುವೆಯೂ ಸಾಮರಸ್ಯ.. ಹೀಗೆ ಹಲವು ರೀತಿಯ ಭಾವನೆಗಳಿಗೆ ಈ ರಿಯಾಲಿಟಿ ಶೋ ಜಾಗ ಮಾಡಿಕೊಡುತ್ತದೆ. ಕಿಚ್ಚ ಸುದೀಪ್​ (Kichcha Sudeep) ಅವರು ಮೊದಲ ಸೀಸನ್​ನಿಂದ ಇಲ್ಲಿಯವರೆಗೆ ನಿರೂಪಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತ ಬಂದಿದ್ದಾರೆ. ವೈಯಕ್ತಿಕ ಕಾರಣದಿಂದ ಅವರು ಕಳೆದ ವಾರ ಬಿಗ್​ ಬಾಸ್​ ವೀಕೆಂಡ್​ ಎಪಿಸೋಡ್​ ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಆದರೆ ಈ ವಾರ ಮರಳಿ ಬಂದಿದ್ದಾರೆ. ಅವರಿಂದಾಗಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ (Bigg Boss Kannada Season 9) ಮೆರುಗು ಹೆಚ್ಚಿದೆ. ಈ ವಾರ ಎಲಿಮಿನೇಟ್​ ಆಗುವುದು ಯಾರು ಎಂಬುದು ತಿಳಿಸುವುದಕ್ಕೂ ಮುನ್ನ ಅವರು ಎಲ್ಲ ಸ್ಪರ್ಧಿಗಳನ್ನು ಭರ್ಜರಿಯಾಗಿ ನಗಿಸಿದ್ದಾರೆ.

ಕಿಚ್ಚ ಸುದೀಪ್​ ಅವರ ನಿರೂಪಣೆ ಎಂದರೆ ಅಭಿಮಾನಿಗಳಿಗೆ ಸಖತ್​ ಇಷ್ಟ. ಪ್ರತಿ ಸಂಚಿಕೆಯಲ್ಲೂ ತಮಾಷೆ ಮಾಡುತ್ತ ಅವರು ನಗು ಉಕ್ಕಿಸುತ್ತಾರೆ. ಯಾರಾದರೂ ತಪ್ಪು ಮಾಡಿದರೆ ಸರಿಯಾಗಿ ಕ್ಲಾಸ್​ ತೆಗೆದುಕೊಳ್ಳುತ್ತಾರೆ. ಇನ್ನು, ‘ಸೂಪರ್​ ಸಂಡೇ ವಿತ್​ ಸುದೀಪ’ ಸಂಚಿಕೆಯಲ್ಲಿ ಅವರು ಕೇಳುವ ‘ಎಸ್​ ಅಥವಾ ನೋ’ ಪ್ರಶ್ನೆಗಳು ಹೆಚ್ಚು ಮನರಂಜನೆ ನೀಡುತ್ತವೆ. ಅದೇ ರೀತಿ, ಎಲ್ಲ ಸ್ಪರ್ಧಿಗಳಿಂದಲೂ ಅವರು ಅಭಿಪ್ರಾಯಗಳನ್ನು ಕೇಳುತ್ತ ಇಡೀ ಸಂಚಿಕೆಯನ್ನು ಉಲ್ಲಾಸಮಯ ಆಗಿಸುತ್ತಾರೆ.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಸೆಲೆಬ್ರಿಟಿಗಳಿಗೆ ಬಿರುದುಗಳನ್ನು ಕೊಡುವುದು ಸಹಜ. ಬಿಗ್​ ಬಾಸ್​ ಮನೆಯಲ್ಲಿ ಇರುವ ಸ್ಪರ್ಧಿಗಳು ಪರಸ್ಪರ ಬಿರುದು ಕೊಟ್ಟುಕೊಂಡರೆ ಹೇಗಿರುತ್ತದೆ? ಸದಾ ಕಾಲ ಜಗಳಕ್ಕೆ ಮುಂದಾಗುವ ಪ್ರಶಾಂತ್​ ಸಂಬರ್ಗಿಗೆ ‘ಬೌ ಬೌ ಸ್ಟಾರ್​’ ಎಂದು ಅರುಣ್​ ಸಾಗರ್​ ಬಿರುದು ನೀಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಲರ್ಸ್​ ಕನ್ನಡ ವಾಹಿನಿ ಒಂದು ಪ್ರೋಮೋ ಹಂಚಿಕೊಂಡಿದೆ. ಭಾನುವಾರದ (ಅ.30) ಸಂಚಿಕೆಯಲ್ಲಿ ನಗುವಿನ ಹಬ್ಬ ಯಾವ ರೀತಿ ಇರಲಿದೆ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿ ಒದಗಿಸುತ್ತಿದೆ.

ಈ ವಾರ ರೂಪೇಶ್ ರಾಜಣ್ಣ, ರೂಪೇಶ್​ ಶೆಟ್ಟಿ, ನೇಹಾ ಗೌಡ, ​ಪ್ರಶಾಂತ್​ ಸಂಬರ್ಗಿ, ಅಮೂಲ್ಯ ಗೌಡ, ರಾಕೇಶ್​ ಅಡಿಗ ಹಾಗೂ ಕಾವ್ಯಶ್ರೀ ಗೌಡ ಅವರು ನಾಮಿನೇಟ್​ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಕಾವ್ಯಶ್ರೀ ಗೌಡ, ಆರ್ಯವರ್ಧನ್​ ಮತ್ತು ರಾಕೇಶ್​ ಅಡಿಗ ಸೇಫ್​ ಆದರು. ಸದ್ಯ ಇನ್ನುಳಿದವರ ಮೇಲೆ ಎಲಿಮಿನೇಷನ್​ ಕತ್ತಿ ತೂಗುತ್ತಿದೆ. ಆ ಪೈಕಿ ಯಾರು ಹೊರಹೋಗಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಎಲಿಮಿನೇಟ್​ ಆದವರ ಹೆಸರನ್ನು​ ಘೋಷಿಸುವುದಕ್ಕೂ ಮುನ್ನ ಬಿಗ್​ ಬಾಸ್​ ಮನೆಯಲ್ಲಿ ನಗುವಿನ ವಾತಾವರಣ ಮೂಡಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:58 pm, Sun, 30 October 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್