ಸಂಜುವಿನ ಅನುಕಂಪಕ್ಕೆ ಸಿಟ್ಟಾದ ಅನು; ಕಣ್ಣೀರಿಟ್ಟವಳಿಗೆ ಬಂತು ಆರ್ಯವರ್ಧನ್ನ ನೆನಪು
ಪದೇಪದೇ ಆರ್ಯವರ್ಧನ್ನ ನೆನಪಿಸುವ ಕೆಲಸವನ್ನು ಅನುಗೆ ಸಂಜು ಮಾಡಿಸುತ್ತಿದ್ದಾನೆ. ಈ ವಿಚಾರದಲ್ಲಿ ಆಕೆಗೆ ಬೇಸರವಿದೆ. ಸಂಜುವಿನಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಆಕೆ ನಿರ್ಧರಿಸಿದ್ದಾಳೆ. ಆದರೆ ಅವಳಿಂದ ಇದು ಸಾಧ್ಯವಾಗುತ್ತಿಲ್ಲ.
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ಸಮಯ: ರಾತ್ರಿ 8.30
ರಾಜ ನಂದಿನಿ ವಿಲಾಸಕ್ಕೆ ಹೊಸ ಆರ್ಯವರ್ಧನ್ ಬಂದಿದ್ದಾನೆ. ಆತನನ್ನು ಸಂಜು ಆಗಿ ಪರಿಚಯಿಸಲಾಗಿದೆ. ಆತ ನಡೆದುಕೊಳ್ಳುವ ರೀತಿ ಎಲ್ಲರಿಗೂ ಆರ್ಯವರ್ಧನ್ನ ನೆನಪಿಸುತ್ತಿದೆ. ಅನು ಕೂಡ ಇದಕ್ಕೆ ಹೊರತಾಗಿಲ್ಲ. ಹಂತ ಹಂತದಲ್ಲೂ ಆರ್ಯವರ್ಧನ್ ಆಕೆಗೆ ನೆನಪಾಗುತ್ತಿದ್ದಾನೆ. ಇದಕ್ಕೆ ಕಾರಣ ಸಂಜು. ಆತನ ಪ್ರತಿ ಹೆಜ್ಜೆ ಆಕೆಗೆ ಪತಿಯನ್ನು ನೆನಪಿಸುತ್ತಿದೆ. ಸಂಜುವಿನ ಅನುಕಂಪಕ್ಕೆ ಆಕೆ ಕಣ್ಣೀರು ಹಾಕಿದ್ದಾಳೆ.
ಅನುಗೆ ವಿಧವೆ ಎಂಬ ಟೀಕೆ
ಆರ್ಯವರ್ಧನ್ ಸತ್ತಿದ್ದಾನೆ ಎಂದು ಎಲ್ಲರೂ ಭಾವಿಸಿದ್ದಾರೆ. ಅನುಗೆ ಆರ್ಯ ಇಲ್ಲ ಎಂಬುದನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಆತ ಇಲ್ಲದೆ ಆಕೆ ಚಿತ್ರಹಿಂಸೆ ಅನುಭವಿಸುತ್ತಿದ್ದಾಳೆ. ಇವುಗಳ ಮಧ್ಯೆ ಅಕ್ಕಪಕ್ಕದ ಮನೆಯವರು ಅನುನ ವಿಧವೆ ಎಂದು ಟೀಕೆ ಮಾಡುತ್ತಿದ್ದಾರೆ. ಇದರಿಂದ ಅನು ದುಃಖಿತಳಾಗಿದ್ದಾಳೆ.
ಅನುನ ಗೆಳತಿ ಮನೆಗೆ ಗಂಡಿನ ಕಡೆಯವರು ಬರುವವರಿದ್ದರು. ಈ ಸಂದರ್ಭದಲ್ಲಿ ಅನು ಕೂಡ ಇರಬೇಕು ಎಂದುಕೊಂಡಿದ್ದಳು. ಆದರೆ, ಇದಕ್ಕೆ ಗೆಳತಿಯ ತಾಯಿ ಅಪಸ್ವರ ತೆಗೆದಿದ್ದಾಳೆ. ‘ಶುಭಕಾರ್ಯಕ್ಕೆ ಗಂಡ ಸತ್ತವರು ಇರಬಾರದು ಎಂಬುದು ಗೊತ್ತಿಲ್ಲವೇನಮ್ಮ ಅನು’ ಎಂದು ಪ್ರಶ್ನೆ ಮಾಡಿದ್ದಾಳೆ ಆಕೆ. ಇದನ್ನು ಕೇಳಿ ಅನುಗೆ ದುಃಖ ಆಗಿದೆ. ಬೇಸರ ತಡೆಯಲಾರದೆ ಕಚೇರಿಗೆ ಬಂದಿದ್ದಾಳೆ.
ಇತ್ತ, ಯಾಕೆ ಅನು ಇನ್ನೂ ಕಚೇರಿಗೆ ಬಂದಿಲ್ಲ ಎಂಬ ಚಿಂತೆ ಸಂಜುಗೆ ಕಾಡಿದೆ. ತಾನೇ ಆಕೆಗೆ ಕರೆ ಮಾಡಬೇಕು ಎಂದುಕೊಂಡಿದ್ದ. ಆದರೆ, ಅದು ಸಾಧ್ಯವಾಗಿಲ್ಲ. ಸ್ವಲ್ಪ ಸಮಯ ಬಿಟ್ಟು ಅನು ಬಂದಿದ್ದಾಳೆ. ಆಗ ಸಂಜುಗೆ ಖುಷಿ ಆಗಿದೆ. ಆತನ ಪ್ರಶ್ನೆಯಿಂದ ಅನು ಸಿಟ್ಟಾಗಿದ್ದಾಳೆ.
ಕಣ್ಣೀರು ಹಾಕಿದ ಅನು
ಅನು ಬಂದ ನಂತರ ಆಕೆಯ ಚೇಂಬರ್ಗೆ ಸಂಜು ಹೋಗಿದ್ದಾನೆ. ವಿಧವೆ ಎಂದು ಟೀಕೆ ಮಾಡಿದ ವಿಚಾರದಲ್ಲಿ ಅನು ಬೇಸರಗೊಂಡಿದ್ದಳು. ಆಕೆಯ ಮುಖ ನೋಡಿದ ಕೂಡಲೇ ಏನೋ ಆಗಿದೆ ಎಂಬ ಅನುಮಾನ ಸಂಜುಗೆ ಮೂಡಿದೆ. ಹೀಗಾಗಿ, ಆತ ಆಕೆಯ ಬಳಿ ಪ್ರಶ್ನೆ ಮಾಡಿದ್ದಾನೆ.
‘ಅನು ಅವ್ರೆ ನಿಮಗೆ ಏನೋ ಆಗಿದೆ. ನಿಮ್ಮ ಮೂಡ್ ಸರಿ ಇಲ್ಲ ಅನಿಸುತ್ತಿದೆ’ ಎಂದು ಪದೇ ಪದೇ ಹೇಳಿದ್ದಾನೆ ಸಂಜು. ಇದಕ್ಕೆ ಸಿಟ್ಟಾದ ಅನು, ಸಂಜುಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಇದರಿಂದ ಸಂಜುಗೆ ಬೇಸರವಾಗಿದೆ. ಸಂಜು ತೋರಿಸುವ ಅನುಕಂಪ ಹಾಗೂ ಹಳೆಯ ಘಟನೆಗಳು ಆಕೆಗೆ ದುಃಖ ತಂದಿದೆ. ಆಕೆ ಕಣ್ಣೀರು ಹಾಕಲು ಶುರು ಮಾಡಿದ್ದಾಳೆ. ಈ ವೇಳೆ ಸಂಜು ಕರ್ಚೀಪ್ ನೀಡಿದ್ದಾನೆ. ಆರ್ಯವರ್ಧನ್ ಕೂಡ ಇದೇ ರೀತಿಯಲ್ಲಿ ಕರ್ಚೀಪ್ ನೀಡುತ್ತಿದ್ದ. ಇದನ್ನು ನೋಡಿ ಆಕೆಗೆ ಹಳೆಯ ಘಟನೆ ನೆನಪಾಗಿದೆ.
ಪದೇಪದೇ ಆರ್ಯವರ್ಧನ್ನ ನೆನಪಿಸುವ ಕೆಲಸವನ್ನು ಆಕೆಗೆ ಸಂಜು ಮಾಡಿಸುತ್ತಿದ್ದಾನೆ. ಈ ವಿಚಾರದಲ್ಲಿ ಆಕೆಗೆ ಬೇಸರವಿದೆ. ಸಂಜುವಿನಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಆಕೆ ನಿರ್ಧರಿಸಿದ್ದಾಳೆ. ಆದರೆ ಅವಳಿಂದ ಇದು ಸಾಧ್ಯವಾಗುತ್ತಿಲ್ಲ.
ಆರಾಧನಾ ಬಗ್ಗೆ ಕಾಡಿದೆ ಚಿಂತೆ
ವಿಶ್ವನ ಹೆಂಡತಿ ಹೆಸರು ಆರಾಧನಾ. ವಿಶ್ವ ಮೃತಪಟ್ಟಿದ್ದಾನೆ. ಆತನ ಹೆಸರಲ್ಲಿ ಆರ್ಯವರ್ಧನ್ ರಾಜ ನಂದಿನಿ ವಿಲಾಸಕ್ಕೆ ಬಂದಿದ್ದಾನೆ. ಈ ಕಾರಣಕ್ಕೆ ಆತನಿಗೆ ಪತ್ನಿ ಆರಾಧನಾ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾಳೆ. ನಿರಂತರವಾಗಿ ಈ ವಿಚಾರವಾಗಿ ಆತನಿಗೆ ಈ ಬಗ್ಗೆ ಕೇಳುತ್ತಿರುವುದರಿಂದ ಚಿಂತೆ ಶುರುವಾಗಿದೆ. ಮುಂದೇನು ಮಾಡಬೇಕು ಎಂಬ ವಿಚಾರ ಆತನಿಗೆ ತಿಳಿಯುತ್ತಿಲ್ಲ.