Lakshana Serial: ನಕ್ಷತ್ರಳ ಪಾಲಿಗೆ ಬಂದೊದಗಿದೆ ಇನ್ನೊಂದು ಕಂಟಕ: ಭೂಪತಿ ಇನ್ನು ಮುಂದೆ ನನ್ನವನ್ನು ಅಂತಿದ್ದಾಳೆ ವೈಷ್ಣವಿ

ಆಗಲೇ ಶಕುಂತಳಾದೇವಿ ನಿನಗೆ ಗೊತ್ತಿರಬಹುದು ಅಲ್ವಾ ಮೌರ್ಯ ಜೈಲಿನಲ್ಲಿ ಇದ್ದಾನೆ ಅಂತಾ ಎಂದು ಹೇಳುತ್ತಾರೆ. ಮನೆಯವರೆಲ್ಲರೂ ವೈಷ್ಣವಿ ಮೌರ್ಯನ ಪ್ರೇಯಸಿ ಅಂತಾನೆ ಅಂದುಕೊಡಿದ್ದರು. ಆದರೆ ವೈಷ್ಣವಿ ಬಂದಿರೊದು ಮೌರ್ಯನಿಗಾಗಿ ಅಲ್ಲ. ಬದಲಾಗಿ ಭೂಪತಿಗೊಸ್ಕರ.

Lakshana Serial: ನಕ್ಷತ್ರಳ ಪಾಲಿಗೆ ಬಂದೊದಗಿದೆ ಇನ್ನೊಂದು ಕಂಟಕ: ಭೂಪತಿ ಇನ್ನು ಮುಂದೆ ನನ್ನವನ್ನು ಅಂತಿದ್ದಾಳೆ ವೈಷ್ಣವಿ
lakshana
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 01, 2022 | 11:23 AM

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷಣ ಧಾರವಾಹಿಯು ವಿಭಿನ್ನ ಕಥೆಗಳ ಮೂಲಕ ವೀಕ್ಷಕರ ಮನ ಗೆದ್ದಿದೆ. ನಕ್ಷತ್ರ ನೆಮ್ಮದಿಯಿಂದ ಜೀವನ ನಡೆಸಲು ಯಾರು ಬಿಡಲ್ಲ ಅಂತಾ ಕಾಣುತ್ತೆ. ಮೊದಲು ವಠಾರದಲ್ಲಿರಯವಾಗ ತುಕರಾಮ್‌ನಿಂದ ಹೀಯಾಳಿಕೆಯ ಮಾತು, ಮದುವೆ ಆದ ಮೇಲೆ ಮೌರ್ಯನಿಂದ ಪ್ರಾಣಕ್ಕೆ ಕುತ್ತು, ಆ ತೊಂದರೆ ಮುಗಿಯುವಷ್ಟರಲ್ಲೇ ಕುತಂತ್ರಿ ಶ್ವೇತಾ ಭೂಪತಿಯ ಮನೆ ಸೇರಿದ್ದಾಳೆ. ಅವಳನ್ನು ಹೇಗಾದರೂ ಮನೆಯಿಂದ ಹೊರ ಹಾಕಬೇಕೆಂದು ಚಿಂತಿಸುತ್ತಿರುವ ನಕ್ಷತ್ರಳ ಪಾಲಿಗೆ ಇನ್ನೊಂದು ಸಮಸ್ಯೆ ಬಂದು ಎದುರಾಗಿದೆ. ಆ ಸಮಸ್ಯೆನೇ ವೈಷ್ಣವಿ. ಶಕುಂತಳಾದೇವಿ ಹಾಗೂ ನಕ್ಷತ್ರ ಮಾತನಾಡುತ್ತಿದ್ದಂತಹ ಸಂದರ್ಭದಲ್ಲಿ ಮನೆಯ ಬಾಗಿಲ ಬಳಿ ಬಂದು ನಿಂತ ವೈಷ್ಣವಿಯನ್ನು ನೋಡಿದ ನಕ್ಷತ್ರ ಅವಳ ಬಳಿ ಬಂದು ನೀವು ವೈಷ್ಣವಿ ಅಲ್ವಾ ಎಂದು ನಗು ಮುಖದಿಂದಲೇ ಕೇಳುತ್ತಾಳೆ. ಆಗ ವೈಷ್ಣವಿ ನೀನು ಭೂಪತಿಯ ಹೆಂಡತಿ ನಕ್ಷತ್ರ ಅಲ್ವಾ ನಂಗೆ ಗೊತ್ತು. ನೋಡು ಮುಂದಿನ ಬಾರಿ ಬರುವಾಗ ಹೊಸಲಿನಲ್ಲಿ ಸೇರು ಒದ್ದು ಒಳಗಡೆ ಬರುತ್ತೇನೆ ಎಂದು ಹೇಳಿ ಮನೆಯ ಒಳಗೆ ಬರುತ್ತಾಳೆ. ಈಕೆಯ ಮಾತನ್ನು ಕೇಳಿ ಮನೆಯವರಿಗೆ ಕಸಿವಿಸಿ ಭಾವನೆ ಉಂಟಾಗುತ್ತದೆ.

ಆಗಲೇ ಶಕುಂತಳಾದೇವಿ ನಿನಗೆ ಗೊತ್ತಿರಬಹುದು ಅಲ್ವಾ ಮೌರ್ಯ ಜೈಲಿನಲ್ಲಿ ಇದ್ದಾನೆ ಅಂತಾ ಎಂದು ಹೇಳುತ್ತಾರೆ. ಮನೆಯವರೆಲ್ಲರೂ ವೈಷ್ಣವಿ ಮೌರ್ಯನ ಪ್ರೇಯಸಿ ಅಂತಾನೆ ಅಂದುಕೊಡಿದ್ದರು. ಆದರೆ ವೈಷ್ಣವಿ ಬಂದಿರೊದು ಮೌರ್ಯನಿಗಾಗಿ ಅಲ್ಲ. ಬದಲಾಗಿ ಭೂಪತಿಗೊಸ್ಕರ. ಈ ವಿಷಯವನ್ನು ಯಾವುದೇ ನಂಬಿಕೆಯಿಲ್ಲದೆ ನಾನು ನಿಮ್ಮ ಮೂರನೆಯ ಮಗ ಭೂಪತಿಯನ್ನು ಪ್ರೀತಿಸುತ್ತಿರುವುದು ಅವನಿಗಾಗಿಯೇ ಬಂದಿರುವುದು ಎಂದು ಹೇಳುತ್ತಾಳೆ ವೈಷ್ಣವಿ.

ವೈಷ್ಣವಿಯ ಮಾತು ಕೇಳಿ ಮನೆಯವರೆಲ್ಲರೂ ಗಾಬರಿಯಾಗುತ್ತಾರೆ. ನಕ್ಷತ್ರಳಿಗಂತೂ ಕೋಪ ನೆತ್ತಿಗೆ ಏರಿ ಬಿಟ್ಟಿತ್ತು. ಭೂಪತಿಗೆ ಮದುವೆಯಾಗಿದೆ, ಅವನ ಹೆಂಡತಿ ನಾನಿಲ್ಲಿ ಇರುವಾಗ ಅದು ಹೇಗೆ ನೀವು ಭೂಪತಿಯನ್ನು ಪ್ರೀತಿಸುತ್ತೇನೆ ಅಂತಾ ಹೇಳ್ತಿರಾ ಎಂದು ನಕ್ಷತ್ರ ವೈಷ್ಣವಿಗೆ ಪ್ರಶ್ನೆ ಮಾಡುತ್ತಾಳೆ. ನೋಡು ನಕ್ಷತ್ರ ನಿನ್ನನ್ನು ಮನೆಯಿಂದ ಓಡಿಸಿ ಭೂಪತಿಯನ್ನು ನನ್ನವನ್ನಾಗಿಸುತ್ತೇನೆ. ಇನ್ನು ಮುಂದೆ ಭೂಪತಿಯ ಹೆಂಡತಿ ನಾನು ಎಂದು ವೈಷ್ಣವಿ ಹೇಳಿದಾಗ ಕೋಪಗೊಂಡ ಶಕುಂತಳಾದೇವಿ ನನ್ನ ಮಗನ ಬಗ್ಗೆ ಏನೇನು ಹೇಳಬೇಡ, ಅವನು ಏನೆಂಬುದು ನಮಗೆ ಗೊತ್ತಿದೆ.

ಇದನ್ನು ಓದಿ: ಭೂಪತಿ ಮನೆ ಸೇರಿದ ಖುಷಿಯಲ್ಲಿ ತೇಲಾಡುತ್ತಿದ್ದಾಳೆ ಶ್ವೇತಾ

ನಿನಗೆ ಈ ಸೊಸೈಟಿಯಲ್ಲಿ ಒಂದು ಗೌರವದ ಸ್ಥಾನಮಾನ ಇದೆ ಅದನ್ನು ಕಳೆದುಕೊಳ್ಳಬೇಡ ಎಂದು ಹೇಳುತ್ತಾರೆ. ನನಗೆ ಮದುವೆಗೂ ಮುಂಚೆಯೇ ಭೂಪತಿ ಮಾತು ಕೊಟ್ಟಿದ್ದಾನೆ ಅತ್ತೆ, ನನ್ನನ್ನು ಮದುವೆ ಆಗುತ್ತೇನೆ ಅಂತಾ ಅದಕ್ಕೇನೆ ನಾನು ಬಂದಿರುವುದು, ಬೇಕಾದರೆ ಭೂಪತಿಯ ಬಳಿಯೇ ಕೇಳಿ ಸತ್ಯ ಗೊತ್ತಾಗುತ್ತೆ ಎಂದು ವೈಷ್ಣವಿ ಹೇಳುತ್ತಾಳೆ. ಈ ಎಲ್ಲ ಗೊಂದಲದ ಮಧ್ಯೆ ನಕ್ಷತ್ರ ಭೂಪತಿಯನ್ನು ಕರೆದುಕೊಂಡು ಬರಲು ಹೋಗುತ್ತಾಳೆ. ಆ ಸಂದರ್ಭದಲ್ಲಿ ಅಲ್ಲೇ ನಿಂತಿದ್ದ ಶ್ವೇತಾ ಮನಸ್ಸಿನಲ್ಲೇ ಗೊಣಗುತ್ತಾ ಆ ನಕ್ಷತ್ರ ಒಬ್ಬಳನ್ನು ಮನೆಯಿಂದ ಹೊರಗಡೆ ಹಾಕಿದರೆ ಸಾಕು ಅಂತಾ ನಾನಿದ್ರೆ ಇವಳು ಯಾರೋ ಇನ್ನೊಬ್ಬಳು ಬಂದಿದ್ದಾಳೆ. ಎಂದು ಬೈಕೊಳ್ಳುತ್ತಾಳೆ. ನಮ್ಮ ಭೂಪತಿ ಹೇಗೆ ಅಂತಾ ನಮಗೆ ಗೊತ್ತು ನೀವು ಹೇಳಿದ್ದನ್ನೆಲ್ಲಾ ನಂಬುವುದಿಲ್ಲ ಎಂದು ಕೋಪದಲ್ಲಿ ಶ್ವೇತಾ ಹೇಳುತ್ತಾಳೆ. ಆಕೆಯ ಮಾತನ್ನು ಕೇಳಿ ನಗುತ್ತಾ ಈ ವಿಷಯದಲ್ಲಿ ನಕ್ಷತ್ರ ನನ್ನನ್ನು ಪ್ರಶ್ನೆ ಮಾಡುವುದರಲ್ಲಿ ಒಂದು ಅರ್ಥ ಇದೆ. ನೀನು ಯಾರು ಇದನ್ನೆಲ್ಲಾ ಕೇಳಲು ಎಂದು ವೈಷ್ಣವಿ ಹೇಳುವಷ್ಟರಲ್ಲಿ ಭೂಪತಿ ಬರುತ್ತಾನೆ. ವೈಷು ನೀನೇನು ಇಲ್ಲಿ ಎಂದು ಭೂಪತಿ ಹೇಳಿದ ಒಂದು ಮಾತಿಗೆ ಮನೆಯವರೆಲ್ಲರೂ ಕಣ್ಣು ಬಾಯಿ ಬಿಟ್ಟು ನೋಡುತ್ತಾರೆ. ನಗುತ್ತಲೇ ನನಗೆ ಪ್ರಾಮಿಸ್ ಮಾಡಿದ್ದೀಯಾ ತಾನೆ, ಅದನ್ನು ಮನೆಯವರಿಗೆ ಹೇಳು ಎಂದು ವೈಷ್ಣವಿ ಭೂಪತಿಗೆ ಹೇಳುತ್ತಾಳೆ. ವೈಷ್ಣವಿ ನಿಜವಾಗಿಯೂ ಭೂಪತಿಯನ್ನು ಪ್ರೀತಿಸುತ್ತಿದ್ದಾಳಾ ಅಥವಾ ಇದೊಂದು ಪ್ರಾಂಕ್ ಆಗಿರಬಹುದಾ ಎಂಬುದನ್ನು ಮುಂದೆ ನೋಡಬೇಕಾಗಿದೆ.

ಮಧುಶ್ರೀ

Published On - 11:22 am, Tue, 1 November 22

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ