AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu: ರಿಷಿಗೆ ಶಾಕ್ ನೀಡಿದ ತಂದೆಯ ರಾಜಿನಾಮೆ ನಿರ್ಧಾರ; ಮಹೇಂದ್ರನ ಮುಂದಿನ ನಿಲುವೇನು?

Honganasu Serial Update: ಜಗತಿ ತನ್ನ ಮುಂದಿನ ನಿರ್ಧಾರದ ಬಗ್ಗೆ ಪತಿ ಮತ್ತು ವಸುಗೆ ವಿವರಿಸಿದಳು. ಜಗತಿಯ ಪ್ಲಾನ್ ಇಬ್ಬರಿಗೂ ಕಷ್ಟ ಎನಿಸಿದ್ರೂ ಒಪ್ಪಿಕೊಂಡರು.

Honganasu: ರಿಷಿಗೆ ಶಾಕ್ ನೀಡಿದ ತಂದೆಯ ರಾಜಿನಾಮೆ ನಿರ್ಧಾರ; ಮಹೇಂದ್ರನ ಮುಂದಿನ ನಿಲುವೇನು?
ಹೊಂಗನಸು ಸೀರಿಯಲ್​
TV9 Web
| Edited By: |

Updated on:Nov 01, 2022 | 8:25 PM

Share

ತಾಯಿ ಮೇಲಿನ ಕೋಪಕ್ಕೆ ರಿಷಿ ತನ್ನ ಕಾಲೇಜಿಗೆ ದೊಡ್ಡ ಖ್ಯಾತಿ ತಂದುಕೊಟ್ಟಿದ್ದ ಮಿಷನ್ ಎಜುಕೇಶನ್ ಪ್ರಾಜೆಕ್ಟ್‌ ವಾಪಸ್ ತೆಗೆದುಕೊಂಡಿದ್ದಾನೆ. ಜಗತಿಯನ್ನು ಕಾಲೇಜಿನಿಂದ ಕಿತ್ತು ಹಾಕುವ ಉದ್ದೇಶದಿಂದ ರಿಷಿ ಕಾಲೇಜಿನ ದೊಡ್ಡ ಪ್ರಾಜೆಕ್ಟ್​ ಹಿಂಪಡೆದಿದ್ದಾನೆ. ಪ್ರಾಜೆಕ್ಟ್ ಕ್ಯಾನ್ಸಲ್ ಮಾಡಲಾಗಿದೆ ಎಂದು ಜಗತಿಗೆ ಪತ್ರದ ಮೂಲಕ ರಿಷಿ ಮಾಹಿತಿ ನೀಡಿದ. ಪತ್ರ ನೋಡಿ ಶಾಕ್ ಆದ ಜಗತಿ ಕಾಲೇಜಿನಿಂದ ದಿಢೀರ್ ಹೊರಟಳು. ಜಗತಿಗೆ ಏನಾಯಿತು ಎಂದು ವಸುಧರಾ ಕೂಗುತ್ತಾ ಹಿಂದೆಯೇ ಓಡಿದಳು. ಆದರೆ ಜಗತಿ ಯಾವುದೇ ಪ್ರತಿಕ್ರಿಯೆ ನೀಡದೇ ಕಾರು ಹತ್ತಿ ಹೊರಟಳು. ಏನಾಯಿತು ಎಂದು ಜಗತಿ ಚೇಂಬರ್‌ಗೆ ವಸು ಓಡಿದಳು. ಟೇಬಲ್ ಮೇಲಿದ್ದ ಪತ್ರ ನೋಡಿ ವಸು ಕೂಡ ಶಾಕ್ ಆದಳು. ಪತ್ರ ಹಿಡಿದು ರಿಷಿ ಬಳಿ ಬಂದ ವಸು ಏನಿದು, ಯಾಕೆ ಹೀಗೆ ಮಾಡಿದ್ರಿ ಅಂತ ರೇಗಿದಳು. ಆದರೂ ರಿಷಿ ತಾನು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಂಡ, ಅಲ್ಲದೇ ಈ ವಿಷಯದಲ್ಲಿ ಹೆಚ್ಚು ತಲೆಹಾಕಬೇಡ ಎಂದು ವಸುಗೆ ಎಚ್ಚರಿಕೆ ಕೂಡ ನೀಡಿದ.

ಜಗತಿ ಮೇಡಮ್ ಎಲ್ಲೋದ್ರೊ, ಹೇಗಿದ್ದಾರೊ ಅಂತ ಗಾಬರಿಯಲ್ಲೇ ವಸುಧರಾ ಮನೆಗೆ ಓಡಿ ಬಂದಳು. ಆದರೆ ಜಗತಿ ಆರಾಮಾಗಿಯೇ ಕಾಫಿ ಕುಡಿಯುತ್ತಾ ಕುಳಿತಿದ್ದನ್ನು ನೋಡಿ ವಸು ಅಚ್ಚರಿ ಪಟ್ಟಳು. ವಸು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆಯೇ ಊಟಕ್ಕೆ ಏನು ಮಾಡಲಿ, ಮೆನು ಏನು ಅಂತ ಜಗತಿ ಕೇಳಿದಳು. ಅಲ್ಲದೇ ಮಹೇಂದ್ರನಿಗೂ ಫೋನ್ ಮಾಡಿ ಊಟಕ್ಕೆ ಬರುವಂತೆ ಹೇಳಿದಳು. ಮಹೇಂದ್ರ ಅಚ್ಚರಿಯಲ್ಲೇ ಜಗತಿ ಮನೆಗೆ ಓಡಿ ಬಂದ. ಜಗತಿಯ ಮುಂದಿನ ನಿರ್ಧಾರ ಏನು ಎಂದು ಆತನಿಗೆ ಚಿಂತೆಯಾಯಿತು.

ಜಗತಿ ತನ್ನ ಮುಂದಿನ ನಿರ್ಧಾರದ ಬಗ್ಗೆ ಪತಿ ಮತ್ತು ವಸುಗೆ ವಿವರಿಸಿದಳು. ಜಗತಿ ಪ್ಲಾನ್ ಇಬ್ಬರಿಗೂ ಕಷ್ಟ ಎನಿಸಿದ್ರೂ ಒಪ್ಪಿಕೊಂಡರು. ಬಳಿಕ ವಸು ತನ್ನ ರೆಸ್ಟೋರೆಂಟ್ ಕೆಲಸಕ್ಕೆ ಹೊರಟಳು. ಆಗಲೇ ರಿಷಿ ರೆಸ್ಟೋರೆಂಟ್‌ಗೆ ಬಂದು ಕುಳಿತಿದ್ದ. ವಸುಧರಾಗೆ ಕೋಪ ಬಂದಿರುತ್ತೆ ಅಂತ ರಿಷಿ ಭಾವಿಸಿದ್ದ. ಆದರೆ ವಸು ಮಾಮೂಲಿಗಿಂತ ಹೆಚ್ಚು ಸಂತೋಷವಾಗಿಯೇ ಇದ್ದಳು. ವಸು ನಡವಳಿಕೆ ರಿಷಿಗೆ ಅಚ್ಚರಿ ಮೂಡಿಸಿತು.

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ಮನೆಗೆ ಬಂದ ರಿಷಿ ತನ್ನ ತಂದೆಯನ್ನು ಮಾತನಾಡಿಸಲು ಓಡಿ ಹೋದ. ಆದರೆ ಮನೆಯಲ್ಲಿ ಕಾಲೇಜಿನ ವಿಚಾರ ಬೇಡ ಎಂದು ಮಹೇಂದ್ರ ಹೇಳಿದ. ತಂದೆಯ ಮಾತಿನಿಂದ ಬೇಸರಗೊಂಡ ರಿಷಿ ತನ್ನ ಪಾಡಿಗೆ ಹೊರಟ. ವಸುಧರಾ ಯಾಕೆ ಸಂತೋಷವಾಗಿದ್ದಳು, ಪಾರ್ಟಿ ಕೊಡಿಸಿದ್ದೇಕೆ ಎನ್ನುವ ಚಿಂತೆಯಲ್ಲೇ ಇದ್ದ ರಿಷಿ. ಕುತೂಹಲ ತಾಳಲಾರದೆ ರಿಷಿ ವಸುಗೆ ಮೆಸೇಜ್ ಮಾಡಿ ಕೇಳಿದ. ಆದರೆ ವಸು ಯಾಕೆಂದು ಹೇಳದೆ ಫೋನ್ ಸ್ವಿಚ್ ಆಫ್ ಮಾಡಿ ಮಲಗಿದಳು.

ಬೆಳಗ್ಗೆ ಕಾಲೇಜಿಗೆ ಬಂದ ಮಹೇಂದ್ರ ರಿಷಿಗೆ ಬುದ್ದಿವಾದ ಹೇಳಿದ. ಎಲ್ಲರಿಂದ ದೂರ ಆಗುತ್ತಿದ್ದೀಯಾ, ನೀನು ತೆಗೆದುಕೊಂಡ ನಿರ್ಧಾರ ಸರಿ ಇಲ್ಲ ಅಂತ ಕಿವಿ ಮಾತು ಹೇಳಿದ. ಆದರೆ ರಿಷಿ ತನ್ನ ತಂದೆಯ ಮಾತು ಕೇಳಲು ತಯಾರಿರಲಿಲ್ಲ. ಜಗತಿ ಹೆಸರು ಕೇಳಿದ್ರೆ ಉರಿದು ಬೀಳುತ್ತಿದ್ದ. ಜಗತಿ ವಿಚಾರದಲ್ಲಿ ರಿಷಿ ನಿಲುವು ಬದಲಾಯಿಸಲ್ಲ ಎಂದು ಮಹೇಂದ್ರ ಕಾಲೇಜಿನ ಬೋರ್ಡ್ ಆಫ್ ಡೈರೆಕ್ಟರ್ ಹುದ್ದಿಗೆ ರಾಜಿನಾಮೆ ನೀಡಿದ. ತಂದೆಯ ನಿರ್ಧಾರ ರಿಷಿಗೆ ಶಾಕ್ ನೀಡಿತು. ತಂದೆಗಾಗಿ ತಾಯಿ ಜಗತಿಯನ್ನು ಕಾಲೇಜಿನಲ್ಲೇ ಉಳಿಸಿಕೊಳ್ಳುತ್ತಾನಾ ರಿಷಿ? ಮಹೇಂದ್ರನ ಮುಂದಿನ ನಿರ್ಧಾರವೇನು ಎಂದು ತಿಳಿಯಲು ಮುಂದಿನ ಸಂಚಿಕೆವರೆಗೂ ಕಾಯಲೇಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:25 pm, Tue, 1 November 22