ಬಾಲಿವುಡ್​ನಲ್ಲಿ ನಡೆಯಲಿಲ್ಲ ರಶ್ಮಿಕಾ ಮಂದಣ್ಣ ಹವಾ? ಕೋಟಿ ಮುಟ್ಟಲೇ ಇಲ್ಲ ‘ಗುಡ್​ಬೈ’ ಕಲೆಕ್ಷನ್

ರಶ್ಮಿಕಾ ಮಂದಣ್ಣ ಹಾಗೂ ಅಮಿತಾಭ್ ಬಚ್ಚನ್ ನಟನೆಯ ‘ಗುಡ್​ಬೈ’ ಸಿನಿಮಾ ಅಕ್ಟೋಬರ್ 7ರಂದು ತೆರೆಗೆ ಬಂತು. ಈ ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು.

ಬಾಲಿವುಡ್​ನಲ್ಲಿ ನಡೆಯಲಿಲ್ಲ ರಶ್ಮಿಕಾ ಮಂದಣ್ಣ ಹವಾ? ಕೋಟಿ ಮುಟ್ಟಲೇ ಇಲ್ಲ ‘ಗುಡ್​ಬೈ’ ಕಲೆಕ್ಷನ್
ಅಮಿತಾಭ್-ರಶ್ಮಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 08, 2022 | 8:10 PM

ರಶ್ಮಿಕಾ ಮಂದಣ್ಣ (Rashmika Mandanna) ಅವರು ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹವಾ ಮಾಡಿದ್ದರು. ಅವರ ಅನೇಕ ಚಿತ್ರಗಳು ಕೋಟಿಕೋಟಿ ಕಲೆಕ್ಷನ್ ಮಾಡಿದೆ. ‘ಪುಷ್ಪ’ ಸಿನಿಮಾ (Pushpa Movie) ಹಿಂದಿಗೆ ಡಬ್ ಆಗಿ ತೆರೆಗೆ ಬಂತು. ಈ ಚಿತ್ರ ಹಿಂದಿಯಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಇದರಿಂದ ಬಾಲಿವುಡ್​ ಬೆಲ್ಟ್​ನಲ್ಲಿ ರಶ್ಮಿಕಾ ಮಂದಣ್ಣ ಹವಾ ಹೆಚ್ಚಿತು. ಅದೇ ನಂಬಿಕೆಯಲ್ಲಿ ಬಾಲಿವುಡ್ ನಿರ್ಮಾಪಕರು ರಶ್ಮಿಕಾರ ಕಾಲ್​ಶೀಟ್ ಪಡೆಯಲು ಮುಂದೆ ಬಂದರು. ಆದರೆ, ರಶ್ಮಿಕಾ ಮೊದಲ ಚಿತ್ರದಲ್ಲೇ ಮುಗ್ಗರಿಸಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ಅಮಿತಾಭ್ ಬಚ್ಚನ್ ನಟನೆಯ ‘ಗುಡ್​ಬೈ’ ಸಿನಿಮಾ ಅಕ್ಟೋಬರ್ 7ರಂದು ತೆರೆಗೆ ಬಂತು. ಈ ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಕೂಡ ತಂದೆ ಪಾತ್ರದಲ್ಲಿ ಕಾಣಿಸಿಕೊಂಡರೆ ರಶ್ಮಿಕಾ ಮಗಳ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಟ್ರೇಲರ್ ಮೆಚ್ಚುಗೆ ಪಡೆದುಕೊಂಡಿತ್ತು. ಫ್ಯಾಮಿಲಿ ಆಡಿಯನ್ಸ್ ಈ ಸಿನಿಮಾವನ್ನು ಇಷ್ಟಪಡಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಚಿತ್ರಕ್ಕೆ ಹೇಳಿಕೊಳ್ಳುವಂತಹ ಮೆಚ್ಚುಗೆ ಸಿಕ್ಕಿಲ್ಲ. ಈ ಸಿನಿಮಾ ಮೊದಲ ದಿನ ಕೇವಲ 90 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.

ಹೌದು, ‘ಗುಡ್​ಬೈ’ ಸಿನಿಮಾ ಮೊದಲ ದಿನ ಕೋಟಿ ರೂಪಾಯಿಗೂ ಕಡಿಮೆ ಕಲೆಕ್ಷನ್ ಮಾಡಿದೆ. ಇಂದು (ಅಕ್ಟೋಬರ್ 8) ಹಾಗೂ ನಾಳೆ (ಅಕ್ಟೋಬರ್ 9) ವೀಕೆಂಡ್. ಈ ಸಂದರ್ಭದಲ್ಲಿ ಚಿತ್ರದ ಕಲೆಕ್ಷನ್ ಹೆಚ್ಚಿದರೆ ಮುಂದಿನ ವಾರಕ್ಕೆ ಸಿನಿಮಾಗೆ ಹೈಪ್ ಸಿಗಬಹುದು. ವೀಕೆಂಡ್​ನಲ್ಲೂ ಸಿನಿಮಾ ಡಲ್ ಹೊಡೆದರೆ ಚಿತ್ರಕ್ಕೆ ಸಮಸ್ಯೆ ಆಗಬಹುದು.

ಇದನ್ನೂ ಓದಿ
Image
Rashmika Mandanna: ಖ್ಯಾತ ನಟನ ಮುಂದೆ ಅಳಲು ತೋಡಿಕೊಂಡ ರಶ್ಮಿಕಾ ಮಂದಣ್ಣ..!
Image
ಕೆಲವೇ ನಿಮಿಷಗಳ ಗ್ಯಾಪ್​ನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ದೇವರಕೊಂಡ-ರಶ್ಮಿಕಾ; ಹೊರಟಿದ್ದೆಲ್ಲಿಗೆ?
Image
Goodbye Twitter Review: ರಶ್ಮಿಕಾ ಮೊದಲ ಹಿಂದಿ ಚಿತ್ರ ‘ಗುಡ್​ಬೈ’ ಹೇಗಿದೆ? ಜನರು ತಿಳಿಸಿದ ಟ್ವಿಟರ್ ವಿಮರ್ಶೆ ಇಲ್ಲಿದೆ ಓದಿ..
Image
ಹೇಗಿದ್ದಾರೆ ರಶ್ಮಿಕಾ ಮಂದಣ್ಣ ತಂಗಿ?; ಫೋಟೋ ಹಂಚಿಕೊಂಡ ಕೊಡಗಿನ ಹುಡುಗಿ

ರಶ್ಮಿಕಾ ಮಂದಣ್ಣ ಅವರು ‘ಗುಡ್​ಬೈ’ ಸಿನಿಮಾ ರಿಲೀಸ್ ಆದ ದಿನವೇ ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿ ಮಾಡುವುದಿಲ್ಲ ಎನ್ನುವ ಸೂಚನೆ ಅವರಿಗೆ ಮೊದಲೇ ಸಿಕ್ಕಿತ್ತು ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ. ಉತ್ತರ ಭಾರತದಲ್ಲಿ ಪ್ರಚಾರ ಮಾಡಿದಷ್ಟು, ದಕ್ಷಿಣ ಭಾರತದಲ್ಲಿ ಈ ಸಿನಿಮಾಗೆ ರಶ್ಮಿಕಾ ಪ್ರಚಾರ ನೀಡಿಲ್ಲ. ಈ ಕಾರಣದಿಂದಲೂ ಸಿನಿಮಾದ ಕಲೆಕ್ಷನ್ ಅಷ್ಟಾಗಿ ಏರಿಕೆ ಕಂಡಿಲ್ಲ ಎನ್ನಲಾಗುತ್ತಿದೆ. ಇಂದು ಹಾಗೂ ನಾಳೆಯ ಕಲೆಕ್ಷನ್ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್