AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ಖ್ಯಾತ ನಟನ ಮುಂದೆ ಅಳಲು ತೋಡಿಕೊಂಡ ರಶ್ಮಿಕಾ ಮಂದಣ್ಣ..!

Rashmika Mandanna: ಅನಿಮಲ್ ಚಿತ್ರದ ಬಗ್ಗೆ ಹೇಳುವುದಾದರೆ, ಈ ಸಿನಿಮಾವನ್ನು ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಇದನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್ ಕಂಪೆನಿ ನಿರ್ಮಿಸಿದೆ.

Rashmika Mandanna: ಖ್ಯಾತ ನಟನ ಮುಂದೆ ಅಳಲು ತೋಡಿಕೊಂಡ ರಶ್ಮಿಕಾ ಮಂದಣ್ಣ..!
Rashmika Mandanna
TV9 Web
| Edited By: |

Updated on: Oct 08, 2022 | 10:54 AM

Share

ಸ್ಯಾಂಡಲ್​ವುಡ್ ಸಾನ್ವಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್​ ಅಂಗಳಕ್ಕೆ ಹಾರಿರುವುದು ಗೊತ್ತೇ ಇದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಕೊಡಗಿನ ಬೆಡಗಿ ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ ಎನ್ನಬಹುದು. ಇದೀಗ ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಜೊತೆಗೂ ಬಣ್ಣ ಹಚ್ಚಿದ್ದಾರೆ. ಗುಡ್​ ಬೈ (Goodbye) ಹೆಸರಿನ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಕನ್ನಡ ನಟಿಗೆ ಮತ್ತೊಂದು ಹಿಂದಿ ಸಿನಿಮಾ ಕೂಡ ಸಿಕ್ಕಿದೆ. ಅದರಂತೆ ಇದೀಗ ರಣಬೀರ್ ಕಪೂರ್ ಅಭಿನಯದ ಅನಿಮಲ್ (Animal) ಹೆಸರಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚುತ್ತಿದ್ದಾರೆ.

ಆದರೆ ನಟಿಗೆ ಈ ಸೆಟ್​ನಲ್ಲಿನ ಉಪಹಾರಗಳು ಮಾತ್ರ ಇಷ್ಟವಾಗುತ್ತಿರಲಿಲ್ವಂತೆ. ಈ ಬಗ್ಗೆ ನಟ ರಣಬೀರ್ ಜೊತೆ ರಶ್ಮಿಕಾ ಅಳಲು ತೋಡಿಕೊಂಡಿದ್ದಾರೆ. ಆದರೆ ಮರುದಿನ ಖುದ್ದು ರಣಬೀರ್ ಕಪೂರ್ ರುಚಿಕರವಾದ ಅಡುಗೆಗಳನ್ನು ತರಿಸಿ ರಶ್ಮಿಕಾ ಮುಂದೆ ಇಟ್ಟಿದ್ದರು. ಈ ವಿಭಿನ್ನ ಬ್ರೇಕ್​ ಫಾಸ್ಟ್​ಗಳನ್ನು ನೋಡಿ ನಾನು ಕಣ್ಣೀರು ಹಾಕಿದ್ದೆ ಎಂದು ರಶ್ಮಿಕಾ ಮಂದಣ್ಣ ಅವರೇ ಹೇಳಿದ್ದಾರೆ.

ನಾನು ಅನಿಮಲ್ ಚಿತ್ರೀಕರಣದಲ್ಲಿದ್ದಾಗ, ನನ್ನ ಬ್ರೇಕ್‌ಫಾಸ್ಟ್ ತುಂಬಾ ಬೋರಿಂಗ್ ಎಂದು ದೂರು ನೀಡುತ್ತಿದ್ದೆ. ಮರುದಿನ ನನ್ನ ಸಹ ನಟ ರಣಬೀರ್ ಕಪೂರ್ ನನಗೆ ಅತ್ಯುತ್ತಮ ಉಪಹಾರವನ್ನು ತಂದರು. ಅಲ್ಲದೆ ಅವರ ಬಾಣಸಿಗರಿಗೆ ಹೇಳಿ ನನಗಾಗಿ ಅಡುಗೆಗಳನ್ನು ಮಾಡಿಸಿದರು. ಅಂತಹ ರುಚಿಕರವಾದ ಆಹಾರಗಳನ್ನು ಸೇವಿಸುತ್ತಿದ್ದರೆ, ಅವರು ನನ್ನ ಮೇಲೆ ಇರಿಸಿದ ಕಾಳಜಿ ನೆನೆದು ನಾನು ಕಣ್ಣೀರು ಹಾಕುತ್ತಿದ್ದೆ ಎಂದು ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ
Image
Anna Rajan: ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿದ ಸಿಬ್ಬಂದಿ..!
Image
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Image
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Image
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

ಇನ್ನು ಅನಿಮಲ್ ಚಿತ್ರದ ಬಗ್ಗೆ ಹೇಳುವುದಾದರೆ, ಈ ಸಿನಿಮಾವನ್ನು ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಇದನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್ ನಿರ್ಮಿಸಿದೆ. ಹಾಗೆಯೇ ಈ ಚಿತ್ರದಲ್ಲಿ ರಶ್ಮಿಕಾ-ರಣಬೀರ್ ಜೊತೆ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ.

ಇದಲ್ಲದೆ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಹೆಸರಿನ ಮತ್ತೊಂದು ಬಾಲಿವುಡ್​ ಚಿತ್ರದಲ್ಲೂ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ: ದಿ ರೂಲ್ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇನ್ನು ಜೂನಿಯರ್ ಎನ್​ಟಿಆರ್​ ಅವರ ಮುಂದಿನ ಚಿತ್ರಕ್ಕೂ ರಶ್ಮಿಕಾ ಮಂದಣ್ಣ ನಾಯಕಿ ಎಂಬ ಟಾಕುಗಳು ಟಾಲಿವುಡ್​ನಲ್ಲಿದೆ. ಒಟ್ಟಿನಲ್ಲಿ ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ರಶ್ಮಿಕಾ ಮಂದಣ್ಣ ನಂಬರ್ 1 ನಟಿಯಾಗುವತ್ತ ಹೆಜ್ಜೆಯನ್ನಿಟ್ಟಿದ್ದಾರೆ.