AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜವಾಯ್ತು ವರದಿ: ಮಾಲ್ಡೀವ್ಸ್​​ನಿಂದ ಸೆಲ್ಫಿ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ; ಜತೆಗಿದ್ದಾರೆ ವಿಜಯ್ ದೇವರಕೊಂಡ?

ಅಕ್ಟೋಬರ್ 7ರಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಕೆಲವೇ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣ ಪ್ರವೇಶ ಮಾಡಿದ್ದರು. ಇದು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆ ಆಗಿತ್ತು.

ನಿಜವಾಯ್ತು ವರದಿ: ಮಾಲ್ಡೀವ್ಸ್​​ನಿಂದ ಸೆಲ್ಫಿ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ; ಜತೆಗಿದ್ದಾರೆ ವಿಜಯ್ ದೇವರಕೊಂಡ?
ವಿಜಯ್- ರಶ್ಮಿಕಾ
TV9 Web
| Edited By: |

Updated on: Oct 08, 2022 | 3:58 PM

Share

ವಿಜಯ್ ದೇವರಕೊಂಡ (Vijay Devarakonda) ಹಾಗೂ ರಶ್ಮಿಕಾ ಮಂದಣ್ಣ ಅವರು ರಿಲೇಶನ್​ಶಿಪ್ ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇವರ ಮಧ್ಯೆ ಪ್ರೀತಿ ಹುಟ್ಟಿ ಅದು ಕೊನೆಯಾಗಿದೆ ಎಂದು ಈ ಮೊದಲು ವರದಿ ಆಗಿತ್ತು. ಆದರೆ, ಇವರ ಸಂಬಂಧ ಮತ್ತೆ ಸರಿ ಹಾದಿಗೆ ಬಂದಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ರಶ್ಮಿಕಾ (Rashmika Mandanna) ಹಾಗೂ ವಿಜಯ್ ದೇವರಕೊಂಡ ರಜೆಯ ಮಜ ಕಳೆಯಲು ಮಾಲ್ಡೀವ್ಸ್​ಗೆ ತೆರಳಲಿದ್ದಾರೆ ಎನ್ನಲಾಗಿತ್ತು. ಅದು ನಿಜವಾಗಿದೆ. ರಶ್ಮಿಕಾ ಮಾಲ್ಡೀವ್ಸ್​ನಿಂದ ಫೋಟೋ ಪೋಸ್ಟ್ ಮಾಡಿದ್ದಾರೆ. ಕೊಡಗಿನ ಹುಡುಗಿ ಜತೆ ವಿಜಯ್ ದೇವರಕೊಂಡ ಕೂಡ ಇದ್ದಾರೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಒಟ್ಟಾಗಿ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ನಟನೆಯ ಮೊದಲ ಸಿನಿಮಾ ‘ಗೀತ ಗೋವಿಂದಂ’ ಸೂಪರ್ ಹಿಟ್ ಆಯಿತು. ಆ ಬಳಿಕ ರಿಲೀಸ್ ಆದ ‘ಡಿಯರ್ ಕಾಮ್ರೇಡ್’ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತು. ‘ಗೀತ ಗೋವಿಂದಂ’ ಚಿತ್ರದ ಶೂಟಿಂಗ್ ವೇಳೆ ಇಬ್ಬರಿಗೂ ಲವ್ ಆಗಿತ್ತು ಎನ್ನಲಾಗಿದೆ. ಆ ಬಳಿಕ ಬ್ರೇಕಪ್ ಸುದ್ದಿ ಹೊರ ಬಿದ್ದಿತ್ತು. ಸದ್ಯ ಇಬ್ಬರೂ ಹಾಯಾಗಿ ಮಾಲ್ಡೀವ್ಸ್​ನಲ್ಲಿ ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ.

ಅಕ್ಟೋಬರ್ 7ರಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಕೆಲವೇ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣ ಪ್ರವೇಶ ಮಾಡಿದ್ದರು. ಇದು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಈ ಜೋಡಿ ವೆಕೇಶನ್​ಗಾಗಿ ಮಾಲ್ಡೀವ್ಸ್ ತೆರಳಲಿದ್ದಾರೆ ಎನ್ನಲಾಗಿತ್ತು. ಈಗ ಆ ವಿಚಾರ ನಿಜವಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
Rashmika Mandanna: ಖ್ಯಾತ ನಟನ ಮುಂದೆ ಅಳಲು ತೋಡಿಕೊಂಡ ರಶ್ಮಿಕಾ ಮಂದಣ್ಣ..!
Image
ಕೆಲವೇ ನಿಮಿಷಗಳ ಗ್ಯಾಪ್​ನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ದೇವರಕೊಂಡ-ರಶ್ಮಿಕಾ; ಹೊರಟಿದ್ದೆಲ್ಲಿಗೆ?
Image
Goodbye Twitter Review: ರಶ್ಮಿಕಾ ಮೊದಲ ಹಿಂದಿ ಚಿತ್ರ ‘ಗುಡ್​ಬೈ’ ಹೇಗಿದೆ? ಜನರು ತಿಳಿಸಿದ ಟ್ವಿಟರ್ ವಿಮರ್ಶೆ ಇಲ್ಲಿದೆ ಓದಿ..
Image
ಹೇಗಿದ್ದಾರೆ ರಶ್ಮಿಕಾ ಮಂದಣ್ಣ ತಂಗಿ?; ಫೋಟೋ ಹಂಚಿಕೊಂಡ ಕೊಡಗಿನ ಹುಡುಗಿ

ರಶ್ಮಿಕಾ ಹಂಚಿಕೊಂಡ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನೀವೊಬ್ಬರೇ ಇಲ್ಲ ಎನ್ನುವ ವಿಚಾರ ನನಗೆ ಗೊತ್ತು’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾನೆ. ಸದ್ಯದ ಮಟ್ಟಿಗಂತೂ ರಶ್ಮಿಕಾ ಸಖತ್ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ‘ದೇವರಕೊಂಡ ಜತೆ ಲಿಪ್​ ಲಾಕ್​ ಮಾಡಿ ಟ್ರೋಲ್​ ಆದಾಗ ಹಗಲು-ರಾತ್ರಿ ಕಣ್ಣೀರು ಸುರಿಸಿದ್ದೆ’: ರಶ್ಮಿಕಾ

ಸಿನಿಮಾ ವಿಚಾರಕ್ಕೆ ಬರೋದಾದರೆ ರಶ್ಮಿಕಾ ಮಂದಣ್ಣ ನಟನೆಯ ‘ಗುಡ್​ಬೈ’ ಚಿತ್ರ ಅಕ್ಟೋಬರ್ 7ರಂದು ರಿಲೀಸ್ ಆಯಿತು. ಈ ಚಿತ್ರ ಸಾಧಾರಣ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಬಗ್ಗೆ ರಶ್ಮಿಕಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆಗಸ್ಟ್ ತಿಂಗಳಲ್ಲಿ ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಗೆಲ್ಲಲಿಲ್ಲ.