‘ವರಾಹ ರೂಪಂ..’ ಹಾಡಿನ ವಿವಾದ: ಹೊಂಬಾಳೆ ಫಿಲ್ಮ್ಸ್​ ಎದುರು ತಮ್ಮ ಬೇಡಿಕೆಗಳನ್ನು ಮುಂದಿಟ್ಟ ತೈಕ್ಕುಡಂ ಬ್ರಿಡ್ಜ್

‘ತೈಕ್ಕುಡಂ ಬ್ರಿಡ್ಜ್​​’ ಹಣಕ್ಕಾಗಿ ಇಷ್ಟೆಲ್ಲ ಮಾಡುತ್ತಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದರು. ಆದರೆ, ಆ ರೀತಿ ಇಲ್ಲ ಎಂಬುದು ತೈಕ್ಕುಡಂ ಬ್ರಿಡ್ಜ್​ನ ಸ್ಪಷ್ಟನೆ.

‘ವರಾಹ ರೂಪಂ..’ ಹಾಡಿನ ವಿವಾದ: ಹೊಂಬಾಳೆ ಫಿಲ್ಮ್ಸ್​ ಎದುರು ತಮ್ಮ ಬೇಡಿಕೆಗಳನ್ನು ಮುಂದಿಟ್ಟ ತೈಕ್ಕುಡಂ ಬ್ರಿಡ್ಜ್
ಹೊಂಬಾಳೆ ಫಿಲ್ಮ್ಸ್​ ಎದುರು ತಮ್ಮ ಬೇಡಿಕೆಗಳನ್ನು ಮುಂದಿಟ್ಟ ತೈಕ್ಕುಡಂ ಬ್ರಿಡ್ಜ್
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 31, 2022 | 3:15 PM

‘ಕಾಂತಾರ’  (Kantara Movie) ಚಿತ್ರದ ‘ವರಾಹ ರೂಪಂ..’ ಹಾಡು ವಿವಾದದ ಕೇಂದ್ರ ಬಿಂದು ಆಗಿದೆ. ‘ತೈಕ್ಕುಡಂ ಬ್ರಿಡ್ಜ್​​’ ಬ್ಯಾಂಡ್​ನ ‘ನವರಸಂ..’ ಹಾಡಿನ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ‘ತೈಕ್ಕುಡಂ ಬ್ರಿಡ್ಜ್​​’ (Thaikkudam Bridge) ಕೇಸ್ ಕೂಡ ದಾಖಲು ಮಾಡಿತ್ತು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯ ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿದೆ. ಈ ವಿವಾದದ ಬಗ್ಗೆ ‘ತೈಕ್ಕುಡಂ ಬ್ರಿಡ್ಜ್​​’ ಬ್ಯಾಂಡ್​ನ ವಿಯಾನ್ ಫರ್ನಾಂಡಿಸ್ ಪ್ರತಿಕ್ರಿಯೆ ನೀಡಿದ್ದಾರೆ.

‘ತೈಕ್ಕುಡಂ ಬ್ರಿಡ್ಜ್​​’ ಹಣಕ್ಕಾಗಿ ಇಷ್ಟೆಲ್ಲ ಮಾಡುತ್ತಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದರು. ಆದರೆ, ಆ ರೀತಿ ಇಲ್ಲ ಎನ್ನುತ್ತಾರೆ ವಿಯಾನ್. ‘ಕೋರ್ಟ್​ನ ಆದೇಶದ ಪ್ರತಿ ಕೈ ಸೇರಿದ ನಂತರದಲ್ಲಿ ಕಾಂತಾರ ತಂಡದವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ತುಂಬಾನೇ ಮುಖ್ಯ. ನಮಗೆ ಕ್ರೆಡಿಟ್ ಕೊಟ್ಟರೆ ಈ ಹಾಡನ್ನು ಅವರು ಪ್ಲೇ ಮಾಡಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ವಿಯಾನ್ ಹೇಳಿದ್ದಾರೆ. ಈ ಮೂಲಕ ತಮ್ಮ ಬೇಡಿಕೆ ಏನು ಎಂಬುದನ್ನು ತಿಳಿಸಿದ್ದಾರೆ.

‘ದೊಡ್ಡ ನಿರ್ಮಾಣ ಸಂಸ್ಥೆ ವಿರುದ್ಧ ಸ್ವತಂತ್ರ ಬ್ಯಾಂಡ್​ ಹೋರಾಡುತ್ತಿರುವುದು ಇದೇ ಮೊದಲು. ತಮ್ಮಲ್ಲಿರುವ ಹಣ, ಅಧಿಕಾರದಿಂದ ಪಾರಾಗಬಹುದು ಎಂದು ಅವರು ಭಾವಿಸಿರಬಹುದು. ಸಂಗೀತ ಲೋಕಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಏನೇ ಆದರೂ ನಮಗೆ ಖುಷಿಯಿದೆ. ನಾವು ಸುಮ್ಮನೆ ಕೂತಿಲ್ಲ, ದಿಟ್ಟ ಹೆಜ್ಜೆ ತೆಗೆದುಕೊಂಡೆವು ಎಂಬ ತೃಪ್ತಿ ನಮ್ಮಲ್ಲಿರುತ್ತದೆ’ ಎಂದಿದ್ದಾರೆ ಅವರು.

‘ಕೆಲವು ಹಾಡುಗಳ ಮಧ್ಯೆ ಹೋಲಿಕೆ ಇರುತ್ತದೆ. ಅದು ಸಾಮಾನ್ಯ. ಹೀಗಾಗಿ, ಆರಂಭದಲ್ಲಿ ಈ ವಿಚಾರದಲ್ಲಿ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಕಮೆಂಟ್​ಗಳು, ಮೆಸೇಜ್​ಗಳು, ದೂರವಾಣಿ ಕರೆಗಳು ನಿಲ್ಲಲೇ ಇಲ್ಲ. ಹೀಗಾಗಿ ಕೇಸ್ ಹಾಕಿದೆವು. ಯೂಟ್ಯೂಬ್ ಚಾನೆಲ್​​ನಲ್ಲಿ ‘ವರಾಹ ರೂಪಂ..’ ಹಾಡಿಗೆ ಬಂದ ಅನೇಕ ಕಮೆಂಟ್​ಗಳನ್ನು ಡಿಲೀಟ್ ಮಾಡಲಾಗಿದೆ’ ಎಂಬ ಆರೋಪವನ್ನು ಅವರು ಮಾಡಿದ್ದಾರೆ.

ಇದನ್ನೂ ಓದಿ: ‘ರಾಮ್​ ಸೇತು’ ಎದುರು ಹೆಚ್ಚಾಯ್ತು ‘ಕಾಂತಾರ’ ಶೋಗಳ ಸಂಖ್ಯೆ; ಮತ್ತೆ ಎಡವಿದ ಅಕ್ಷಯ್ ಕುಮಾರ್

‘ಕಾಂತಾರ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಬಿ. ಅಜನೀಶ್ ಲೋಕನಾಥ್ ಅವರು ನಮ್ಮ ಬ್ಯಾಂಡ್​ನ ಸ್ಥಾಪಕರಲ್ಲೊಬ್ಬರಾದ ಗೋವಿಂದ್ ವಸಂತ್ ಅವರನ್ನು ಸಂಪರ್ಕಿಸಿದ್ದರು. ನಮ್ಮ ಮ್ಯಾನೇಜ್​ಮೆಂಟ್ ಅವರು ಕಾಂತಾರ ತಂಡಕ್ಕೆ ಎಚ್ಚರಿಕೆ ನೀಡಿದೆ. ಈ ಚಿತ್ರ ರಿಲೀಸ್​ಗೂ ಮೊದಲು ಅವರು ನಮ್ಮ ಜತೆ ಮಾತನಾಡಿ, ಹಾಡಿನಲ್ಲಿ ನಮ್ಮ ಬ್ಯಾಂಡ್​ನ ಉಲ್ಲೇಖ ಮಾಡಿದ್ದರೆ ಸಾಕಿತ್ತು. ನಾವು ಕೇಸ್ ಹಾಕುತ್ತಿರಲಿಲ್ಲ’ ಎಂದಿದ್ದಾರೆ ವಿಯಾನ್.

Published On - 3:06 pm, Mon, 31 October 22