Baby Shamili: ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಬೇಬಿ ಶಾಮಿಲಿ ಈಗ ಹೇಗಿದ್ದಾರೆ ನೋಡಿ…
Children's Day 2022: 1990ರಲ್ಲಿ‘ಅಂಜಲಿ’ ಚಿತ್ರದ ಪಾತ್ರಕ್ಕಾಗಿ ಶಾಮಿಲಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ಇದಲ್ಲದೆ, ಬಾಲ ನಟಿಯಾಗಿ ಅವರು ಕೇರಳ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
Updated on:Nov 15, 2022 | 10:54 AM

ಬೇಬಿ ಶಾಮಿಲಿ ಅವರು ಬಾಲನಟಿಯಾಗಿ ಈ ಮೊದಲು ಗುರುತಿಸಿಕೊಂಡಿದ್ದರು. 90ರ ದಶಕದಲ್ಲಿ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದರು.

1990ರಲ್ಲಿ ‘ಅಂಜಲಿ’ ಚಿತ್ರದ ಪಾತ್ರಕ್ಕಾಗಿ ಶಾಮಿಲಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ಇದಲ್ಲದೆ, ಬಾಲ ನಟಿಯಾಗಿ ಅವರು ಕೇರಳ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

‘ಮತ್ತೆ ಹಾಡಿತು ಕೋಗಿಲೆ’ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು. ನಂತರ ಹಲವು ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದರು.

ಶಾಮಿಲಿಗೆ ಬಾಲ ನಟಿಯಾಗಿ ಸಿಕ್ಕಷ್ಟು ಜನಪ್ರಿಯತೆ ನಟಿಯಾಗಿ ಸಿಕ್ಕಿಲ್ಲ. ಕೆಲವೇ ಕೆಲವು ಚಿತ್ರಗಳಲ್ಲಿ ಅವರು ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

ಬೇಬಿ ಶಾಮಿಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಾರೆ. 2018ರಲ್ಲಿ ತೆರೆಗೆ ಬಂದ ‘ಅಮ್ಮಮ್ಮಗಾರಿಲು’ ಅವರ ಕೊನೆಯ ಸಿನಿಮಾ. ಆ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಶಾಮಿಲಿಗೆ 35 ವರ್ಷ ವಯಸ್ಸು. ಅವರು ಇನ್ನೂ ಮದುವೆ ಆಗಿಲ್ಲ.
Published On - 4:50 pm, Mon, 14 November 22




