TV9 Digital Live: ಹಿಂದಿ ಹೇರಿಕೆಯ ಬಗೆಗಿನ ಚರ್ಚೆ ಮತ್ತೆ ಶುರುವಾಗಿದೆ, ಈ ಕುರಿತು ಇಂದಿನ ಟಿವಿ9 ಡಿಜಿಟಲ್ ಲೈವ್ನಲ್ಲಿ ಚರ್ಚೆ
ಹಿಂದಿ ಭಾಷೆ ಬಗ್ಗೆ ಕನ್ನಡ ನಟ ಸುದೀಪ್ ಹೇಳಿದ ಮಾತು ಅದಕ್ಕೆ ಬಹುಭಾಷಾ ನಟ, ಅಜಯ್ ದೇವಗನ್ ನೀಡಿದ ಪ್ರತಿಕ್ರಿಯೆ ಆಧರಿಸಿ, ಹಿಂದಿ ಹೇರಿಕೆಯ ಬಗೆಗಿನ ಚರ್ಚೆ ಮತ್ತೆ ಶುರುವಾಗಿದೆ.
ಹಿಂದಿ ಭಾಷೆ ಬಗ್ಗೆ ಕನ್ನಡ ನಟ ಸುದೀಪ್ ಹೇಳಿದ ಮಾತು ಅದಕ್ಕೆ ಬಹುಭಾಷಾ ನಟ, ಅಜಯ್ ದೇವಗನ್ ನೀಡಿದ ಪ್ರತಿಕ್ರಿಯೆ ಆಧರಿಸಿ, ಹಿಂದಿ ಹೇರಿಕೆಯ ಬಗೆಗಿನ ಚರ್ಚೆ ಮತ್ತೆ ಶುರುವಾಗಿದೆ. ಈ ಬಗ್ಗೆ ಸಿನಿಮಾ ವಲಯ ಮಾತ್ರವಲ್ಲದೇ ರಾಜಕೀಯದಲ್ಲೂ ದೊಡ್ಡ ಚರ್ಚೆಗಳು ನಡೆಯುತ್ತಿದೆ ಈ ಭಾಷಾ ವಿವಾದದ ಕುರಿತು ಈ ಹಿಂದೆ ಕೆಲವು ಕೋರ್ಟ್ ಜಡ್ಜ್ಮೆಂಟ್ ಗಳು ಬಂದಿವೆ ಅವು ಏನನ್ನು ಹೇಳುತ್ತವೆ? ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಭಾಷೆಯನ್ನು ಗುರುತಿಸುವ ಬಗ್ಗೆ ಹೇಳಲಾಗಿದೆ. ಅದು ಏನನ್ನು ಹೇಳುತ್ತದೆ?
ಈ ಹಿಂದೆ ಗೃಹಸಚಿವ ಅಮಿತ್ ಶಾ ಹಿಂದೆ ಭಾಷೆಯಲ್ಲಿ ಎಲ್ಲ ರಾಜ್ಯಗಳು ವ್ಯವಹಾರ ನಡೆಸಬೇಕು ಎಂದು ಹೇಳಿಕೆ ನೀಡಿದ್ದರು. ‘ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳುವ ಮೂಲಕ ಅವರು ಅನೇಕರಿಂದ ತೀವ್ರ ವಿರೋಧವನ್ನು ಅಜಯ್ ದೇವಗನ್ ಎದುರಿಸುತ್ತಿದ್ದಾರೆ. ಕಿಚ್ಚ ಸುದೀಪ್, ರಮ್ಯಾ, ಸಿದ್ಧರಾಮಯ್ಯ ಸೇರಿದಂತೆ ಅನೇಕರು ಅಜಯ್ ದೇವಗನ್ ಮಾತನ್ನು ಖಂಡಿಸಿದರು. ಈ ಕುರಿತು ಇಂದಿನ ಡಿಜಿಟಲ್ ಲೈವ್ನಲ್ಲಿ ಚರ್ಚೆ ನಡೆಸಿಕೊಡಲಿದ್ದಾರೆ. ರ ಈ ಚರ್ಚೆಗೆ ನಿಮಗೆ ಸ್ವಾಗತ