‘ಆಚಾರ್ಯ’ ಚಿತ್ರಕ್ಕೆ ಅದ್ದೂರಿ ಸ್ವಾಗತ ನೀಡಿದ ಫ್ಯಾನ್ಸ್​; ಇಲ್ಲಿದೆ ವಿಡಿಯೋ

ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ರಾಮ್ ಚರಣ್ ಹಾಗೂ ಚಿರಂಜೀವಿ ಅವರ ದೊಡ್ಡದೊಡ್ಡ ಕಟೌಟ್​ಗಳನ್ನು ನಿಲ್ಲಿಸಿ ಅದಕ್ಕೆ ಹೂವಿನ ಹಾರ ಹಾಕಲಾಗಿದೆ. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಫ್ಯಾನ್ಸ್​.

TV9kannada Web Team

| Edited By: Rajesh Duggumane

Apr 29, 2022 | 2:18 PM

ರಾಮ್ ಚರಣ್ ಹಾಗೂ ಚಿರಂಜೀವಿ (Chiranjeevi) ಒಟ್ಟಾಗಿ ತೆರೆಹಂಚಿಕೊಂಡಿರುವ ‘ಆಚಾರ್ಯ’ ಸಿನಿಮಾ (Achrya Movie) ಇಂದು (ಏಪ್ರಿಲ್ 29) ತೆರೆಗೆ ಬಂದಿದೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ನೋಡಿದ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಹೊಸತನವಿಲ್ಲ ಎನ್ನುವ ಮಾತು ಪ್ರೇಕ್ಷಕರ ವಲಯದಿಂದ ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ರಾಮ್​ ಚರಣ್ (Ram Charan) ಹಾಗೂ ಚಿರಂಜೀವಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹೀಗಾಗಿ, ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ರಾಮ್ ಚರಣ್ ಹಾಗೂ ಚಿರಂಜೀವಿ ಅವರ ದೊಡ್ಡದೊಡ್ಡ ಕಟೌಟ್​ಗಳನ್ನು ನಿಲ್ಲಿಸಿ ಅದಕ್ಕೆ ಹೂವಿನ ಹಾರ ಹಾಕಲಾಗಿದೆ. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಫ್ಯಾನ್ಸ್​. ಕೆಲವು ಕಡೆಗಳಲ್ಲಿ ಸಿನಿಮಾ ನೋಡಲು ಬಂದ ಫ್ಯಾನ್ಸ್​ಗೆ ರೈಸ್​ಬಾತ್ ಕೂಡ ನೀಡಲಾಗಿದೆ.

ಇದನ್ನೂ ಓದಿ: Acharya: ರಾಮ್​ ಚರಣ್-ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ವಿವರ 

Acharya Movie Review: ಹಳಿ ತಪ್ಪಿದ ‘ಆಚಾರ್ಯ’ನ ಪಾಠ 

 

Follow us on

Click on your DTH Provider to Add TV9 Kannada