ಸೆರೆ ಸಿಕ್ಕಿರುವ ದಿವ್ಯಾ ಹಾಗರಗಿ ಅವರ ವಿಚಾರಣೆ ನಡೆಸಿ ಹಗರಣದಲ್ಲಿ ಭಾಗಿಯಾಗಿರುವವರನ್ನು ಜೈಲಿಗೆ ಹಾಕುತ್ತೇವೆ: ಆರಗ ಜ್ಞಾನೇಂದ್ರ

ಸಂಪೂರ್ಣ ವಿಚಾರಣೆ ನಡೆಸಿ ಹಗರಣದಲ್ಲಿ ಇನ್ನೂ ಯಾರು ಭಾಗಿಯಾಗಿದ್ದಾರೆ ಅವರನ್ನೆಲ್ಲ ಬಂಧಿಸಲಾಗುವುದು ಮತ್ತು ತಪ್ಪಿತಸ್ಥರು ಯಾವ ಪಕ್ಷದವರೇ ಆಗಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಜ್ಞಾನೇಂದ್ರ ಹೇಳಿದರು.

ಸೆರೆ ಸಿಕ್ಕಿರುವ ದಿವ್ಯಾ ಹಾಗರಗಿ ಅವರ ವಿಚಾರಣೆ ನಡೆಸಿ ಹಗರಣದಲ್ಲಿ ಭಾಗಿಯಾಗಿರುವವರನ್ನು ಜೈಲಿಗೆ ಹಾಕುತ್ತೇವೆ: ಆರಗ ಜ್ಞಾನೇಂದ್ರ
| Edited By: Arun Kumar Belly

Updated on: Apr 29, 2022 | 5:25 PM

ಪಿಎಸ್ಐ ನೇಮಕಾತಿ ಹಗರಣದಲ್ಲಿ (PSI Recruitment Scam) ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ದಿವ್ಯಾ ಹಾಗರಗಿ (Divya Hagargi) ಅವರನ್ನು ಕಳೆದ ರಾತ್ರಿ ಪುಣೆಯಲ್ಲಿ (Pune) ಬಂಧಿಸಿ ರಾಜ್ಯಕ್ಕೆ ಕರೆತರಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಬೆಂಗಳೂರಲ್ಲಿ ಶುಕ್ರವಾರ ಹೇಳಿದರು. ಅವರ ಸಂಪೂರ್ಣ ವಿಚಾರಣೆ ನಡೆಸಿ ಹಗರಣದಲ್ಲಿ ಇನ್ನೂ ಯಾರು ಭಾಗಿಯಾಗಿದ್ದಾರೆ ಅವರನ್ನೆಲ್ಲ ಬಂಧಿಸಲಾಗುವುದು ಮತ್ತು ತಪ್ಪಿತಸ್ಥರು ಯಾವ ಪಕ್ಷದವರೇ ಆಗಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಜ್ಞಾನೇಂದ್ರ ಹೇಳಿದರು. ಹರಣದಿಂದಾಗಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಬಹಳ ಸಂಕಟವಾಗುತ್ತದೆ, ಅವರ ನೋವು ತಮಗೆ ಅರ್ಥವಾಗುತ್ತದೆ ಎಂದು ಹೇಳಿದ ಸಚಿವರು ಪಿಎಸ್ಐ ಲಿಖಿತ ಪರೀಕ್ಷೆಗಳನ್ನು ಮತ್ತೊಮ್ಮೆ ನಡೆಸದೆ ವಿಧಿಯಿಲ್ಲ ಎಂದರು. ಆರೋಪಿಗಳು ಬ್ಲೂ ಟೂಥ್ ಮೊದಲಾದ ಡಿವೈಸ್ ಮತ್ತು ಇತರ ಆಧುನಿಕ ತಂತ್ರಜ್ಞಾನ ಬಳಸಿ ಫ್ರಾಡ್ ಮಾಡುತ್ತಿದ್ದಾರೆ, ಇಂಥವರಿಗೆಲ್ಲ ತಕ್ಕ ಪಾಠ ಕಲಿಸಬೇಕು ಅಂತ ಸಚಿವರು ಹೇಳಿದರು.

ಸರ್ಕಾರದ ಪ್ರಕರಣದ ಆಳದವರೆಗೆ ಹೋಗುವುದು ನಿಶ್ಚಿತ, ಇದರಲ್ಲಿ ಭಾಗಿಯಾಗಿರುವವರೆಲ್ಲ ಜೈಲಿನಿಂದ ಹೊರಬರದ ಹಾಗೆ ಕ್ರಿಮಿನಲ್ ಕಾಯ್ದೆಗಳನ್ನು ವಿಧಿಸಲಾಗುವುದು ಎಂದು ಅವರು ಹೇಳಿದರು.

ಸಿಐಡಿ ಅಧಿಕಾರಿಗಳು ಬಹಳ ಅದ್ಭುತವಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವನ್ನು ಶ್ಲಾಘಿಸಲೇಬೇಕು, ಅವರ ಕಾರ್ಯವಿಧಾನ ಮತ್ತು ಪೊಲೀಸರ ಕಾರ್ಯವಿಧಾನದ ನಡುವೆ ವ್ಯತ್ಯಾಸವಿರುತ್ತದೆ. ಪೊಲೀಸರು ಶಂಕಿತರನ್ನು ಬಂಧಿಸಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾರೆ ಅದರೆ ಸಿಐಡಿ ಸಾಕ್ಷ್ಯ ಸಂಗ್ರಹಿಸಿ ಅದರ ಆಧಾರದ ಮೇಲೆ ಅರೋಪಿಗಳನ್ನು ಬಂಧಿಸುತ್ತಾರೆ ಎಂದು ಸಚಿವರು ಹೇಳಿದರು.

ತಮ್ಮಲ್ಲಿರುವ ಸಾಕ್ಷ್ಯಗಳನ್ನು ತಂದು ತೋರಿಸುವಂತೆ ಸಿಓಡಿ ಅಧಿಕಾರಿಗಳು ಕಾಂಗ್ರೆಸ್ ಶಾಸಕರಿಗೆ ಹೇಳಿದರೂ ಅವರು ಹಿಂಜರಿಯುತ್ತಿರುವುದು ಸೋಜಿಗ ಹುಟ್ಟಿಸುತ್ತದೆ ಎಂದ ಸಚಿವರು 2016 ರ ನೇಮಕಾತಿಗೆ ಸಂಬಂಧಿಸಿದಂತೆ ದಾಖಲಾಗಿರುವ ದೂರನ್ನು ಸಹ ತನಿಖೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:   PSI Recruitment Scam: ಸಿಐಡಿಯಿಂದ ತಪ್ಪಿಸಿಕೊಳ್ಳಲು ದೇಗುಲಗಳಿಗೆ ಸುತ್ತಾಡುತ್ತಿದ್ದ ದಿವ್ಯಾ ಭಾರೀ ಶ್ರೀಮಂತೆಯೂ ಹೌದು

Follow us
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ