ವಿಶ್ವಪ್ರಸಿದ್ಧ ಮೈಸೂರು ಪಾಕನ್ನು ಪ್ರಧಾನಿ ಮೋದಿಯವರಿಗೆ ತಿನ್ನಿಸಿ ಅದರ ಇತಿಹಾಸ ತಿಳಿಸುವ ಆಸೆ ಅದನ್ನು ಕಂಡುಹಿಡಿದ ಕುಟುಂಬಕ್ಕಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 18, 2022 | 2:52 PM

ಅಂಗಡಿ ನಡೆಸುತ್ತಿರುವ ಶಿವಾನಂದ ಅವರು ಮೈಸೂರಿನ ಪರಂಪರೆ ಮತ್ತು ಸಂಸ್ಕೃತಿಯಾಗಿ ಗುರುತಿಸಿಕೊಂಡಿರುವ ಮೈಸೂರು ಪಾಕನ್ನು ಪ್ರಧಾನಿ ಅವರಿಗೆ ತಿನ್ನಿಸಿ ಅವರಿಗೆ ಅದರ ಇತಿಹಾಸದ ಬಗ್ಗೆ ಹೇಳುವ ಉತ್ಕಟ ಆಸೆ ಇಟ್ಟುಕೊಂಡಿದ್ದಾರೆ.

ಮೈಸೂರಿನ ವಿಶ್ವಾವಿಖ್ಯಾತ ಸ್ವೀಟ್ ಮೈಸೂರು ಪಾಕ್ (Mysore Pak) ಯಾರಿಗೆ ಭಾರತದಲ್ಲಿ ಯಾರಿಗೆ ಗೊತ್ತಿಲ್ಲ? ಅಂತರರಾಷ್ಟ್ರೀಯ ಯೋಗ ದಿನ ಅಂಗವಾಗಿ ಜೂನ್ 21 ರಂದು ಮೈಸೂರಿಗೆ ಆಗಮಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ (PM Narendra Modi) ಮೈಸೂರು ಪಾಕ್ ಸವಿದಿರಬಹುದು. ಆದರೆ ಪ್ರಧಾನಿಗಳಿಗೆ ಅದರ ಇತಿಹಾಸದ ಬಗ್ಗೆ ಪ್ರಾಯಶಃ ಗೊತ್ತಿರಲಿಕ್ಕಿಲ್ಲ. ಹಾಗಾಗೇ, ಮೈಸೂರು ಪಾಕ್ ಅನ್ನು ಕಂಡುಹಿಡಿದ ಮತ್ತು ಮೈಸೂರು ಒಡೆಯರ್ ಸಂಸ್ಥಾನದ ಅರಸೊತ್ತಿಗೆಯ ದಿನಗಳಲ್ಲಿ ಅರಮನೆಯಲ್ಲಿ ಬಾಣಸಿಗರಾಗಿದ್ದ ಕಾಕಾಸುರ ಮಾದಪ್ಪನವರ (Kakasura Madappa) ವಂಶಾವಳಿಯ ನಾಲ್ಕನೇ ತಲೆಮಾರಿನವರು ಮೈಸೂರಿನ ಗುರು ಸ್ವೀಟ್ಸ್ (Gurui Sweets) ಅಂಗಡಿಯಲ್ಲಿ ಈಗಲೂ ಉತ್ಕೃಷ್ಟ ಗುಣಮಟ್ಟದ ಮೈಸೂರು ಪಾಕನ್ನು ತಯಾರಿಸಿ ಮಾರುತ್ತಿದ್ದಾರೆ.

ಅಂಗಡಿ ನಡೆಸುತ್ತಿರುವ ಶಿವಾನಂದ ಅವರು ಮೈಸೂರಿನ ಪರಂಪರೆ ಮತ್ತು ಸಂಸ್ಕೃತಿಯಾಗಿ ಗುರುತಿಸಿಕೊಂಡಿರುವ ಮೈಸೂರು ಪಾಕನ್ನು ಪ್ರಧಾನಿ ಅವರಿಗೆ ತಿನ್ನಿಸಿ ಅವರಿಗೆ ಅದರ ಇತಿಹಾಸದ ಬಗ್ಗೆ ಹೇಳುವ ಉತ್ಕಟ ಆಸೆ ಇಟ್ಟುಕೊಂಡಿದ್ದಾರೆ. ಆ ಅವಕಾಶನ್ನು ಮೈಸೂರು ಜಿಲ್ಲಾಡಳಿತ ಮಾಡಿಕೊಡಬೇಕೆಂದು ಅವರು ವಿನಂತಿಸಿಕೊಳ್ಳುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.