ಇಲ್ಲಿರುವ ಗಡ್ಡಣ್ಣನವರ್ ಮತ್ತು ಮೀಸೆಯಪ್ಪನವರ್ ಪೈಕಿ ಯಾರೊಬ್ಬರೂ ವೀರಪ್ಪನ್ ಸಂಬಂಧಿಕರಲ್ಲ!
ಮುಖದ ಮೇಲೆ ಜಾಸ್ತಿ ಕೂದಲು ಅಂದರೆ ಮೀಸೆ ಮತ್ತು ಗಡ್ಡದ ರೂಪದಲ್ಲಿ ಬೆಳೆಸುವುದರ ಜೊತೆಗೆ ಅವುಗಳನ್ನು ಚೆನ್ನಾಗಿ ಹುರಿಮಾಡಿರಬೇಕು. ಮೀಸೆ ಪೊಗದಸ್ತಾಗಿರಬೇಕು ಮತ್ತು ಗಡ್ಡ ಉದ್ದ ಹಾಗೂ ದಟ್ಟವಾಗಿರಬೇಕು. ಗಡ್ಡ-ಮೀಸೆಯ ಬಣ್ಣದ ಬಗ್ಗೆ ಯಾವುದೇ ನಿರ್ಬಂಧಗಳಿಲ್ಲ.
ಗಡ್ಡ ಮೀಸೆ ಬೆಳಿಸಿದವರಿಗೂ ಒಂದು ವಿಶ್ವ ಚಾಂಪಿಯನ್ ಶಿಪ್ ನಡೆಯುವ ಸಂಗತಿ ನಿಮಗೆ ಗೊತ್ತುಂಟಾ? ಹೌದು, ಮಾರಾಯ್ರೇ, ಮೀಸೆ ಮತ್ತು ಗಡ್ಡ ಒಟ್ಟಿಗೆ ಬೆಳೆಸುವವರಿಗೆ ಸ್ಫರ್ಧೆ ಏರ್ಪಡಿಸಲಾಗುತ್ತದೆ. ಕಳೆದ ಶನಿವಾರ ಆಂದರೆ ಅಕ್ಟೋಬರ್ 23 ರಂದು ಅದು ಜರ್ಮನಿಯಲ್ಲಿ ನಡೆಯಿತು. ಮುಖದ ಮೇಲೆ ಜಾಸ್ತಿ ಕೂದಲು ಅಂದರೆ ಮೀಸೆ ಮತ್ತು ಗಡ್ಡದ ರೂಪದಲ್ಲಿ ಬೆಳೆಸುವುದರ ಜೊತೆಗೆ ಅವುಗಳನ್ನು ಚೆನ್ನಾಗಿ ಹುರಿಮಾಡಿರಬೇಕು. ಮೀಸೆ ಪೊಗದಸ್ತಾಗಿರಬೇಕು ಮತ್ತು ಗಡ್ಡ ಉದ್ದ ಹಾಗೂ ದಟ್ಟವಾಗಿರಬೇಕು. ಗಡ್ಡ-ಮೀಸೆಯ ಬಣ್ಣದ ಬಗ್ಗೆ ಯಾವುದೇ ನಿರ್ಬಂಧಗಳಿಲ್ಲ. ದಾಡಿ ಬೆಳೆಸುವುದಕ್ಕೆ ನಿಂಗೇನಯ್ಯ ಧಾಡಿ ಅಂತ ಯೌವನಕ್ಕೆ ಕಾಲಿಟ್ಟಾಗ ತಮ್ಮ ತಾತಂದಿರ ಕೈಲಿ ಬೈಸಿಕೊಂಡಿರಬಹುದಾದ ಸುಮಾರು 100 ಗಡ್ಡ-ಮೀಸೆ ಬೆಳೆಸಿದರು ಶನಿವಾರ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ನೆದರ್ಲ್ಯಾಂಡ್ಸ್, ಇಟಲಿ, ಸ್ವಿಜರ್ಲ್ಯಾಂಡ್, ಆಸ್ಟ್ರಿಯ ಮತ್ತು ಇಸ್ರೇಲ್ ದೇಶಗಳಿಂದ ಗಡ್ಡಣ್ಣನವರ್ ಮತ್ತು ಮೀಸೆಯಪ್ಪನವರ್ ಜರ್ಮನಿಯ ಪುಲ್ ಮ್ಯಾನ್ ನಗರದ ಥೀಮ್ ಪಾರ್ಕ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಸ್ಪರ್ಧಿಗಳ ಮೀಸೆ ಮತ್ತು ಗಡ್ಡಗಳಲ್ಲಿ ಅನೇಕ ವೆರೈಟಿಗಳು ಮಾರಾಯ್ರೇ. ಒಬ್ಬನ ಗಡ್ಡ ಪಕ್ಷಿಗಳ ಗೂಡಿನಂತೆ ಕಂಡರೆ ಮತ್ತೊಬ್ಬನದು ಹುರಿ ಮಾಡಿದ ಹಗ್ಗದಂತೆ. ಒಬ್ಬ ಹಿರಿಯರು ಗಡ್ಡವನ್ನು ಇಬ್ಭಾಗ ಮಾಡಿ ಎರಡೂ ಭಾಗಗಳಲ್ಲಿ ಅದನ್ನು ಕಟ್ಟುಗಳಾಗಿ ವಿಂಗಡಸಿ ಮೇಲ್ಭಾಗದೆಡೆ ಹುರಿಮಾಡಿದ್ದಾರೆ. ಇನ್ನೊಬ್ಬ ಗಡ್ಡಧಾರಿ ಆಕ್ಟೋಪಸ್ ನಿಂದ ಪ್ರೇರಿತರಾದಂತಿದೆ. ಏಡಿಯಂತೆ ಕಾಣುವ ಹಾಗೆಯೂ ಒಬ್ಬರು ಗಡ್ಡವನ್ನು ಹುರಿಮಾಡಿಕೊಂಡಿದ್ದಾರೆ
ಕೆಲವರ ಹೆಸರು ನಮಗೆ ಸಿಕ್ಕಿವೆ, ನಿಮಗೂ ಅವುಗಳನ್ನು ತಿಳಿಸಿಬಿಡುತ್ತೇವೆ. ಜರ್ಮನಿಯ ಕ್ರಿಶ್ಚಿಯನ್ ಫೀಟ್, ಆಸ್ಟ್ರಿಯಾದ ನಾರ್ಬರ್ಟ್ ಡೋಫ್ ಮತ್ತು ಆಸ್ಟ್ರಿಯದವರೇ ಆಗಿರುವ ಫ್ರಿಟ್ಜ್ ಸೆಂಡ್ಹೋಫರ್.
ಗಡ್ಡ- ಮೀಸೆ ಬೆಳಸಿ ಅವುಗಳನ್ನು ಹುರಿಮಾಡುವುದೇ ಈ ಜನರ ಕಾಯಕವಾಗಿರಬಹುದು ಅನಿಸುತ್ತದೆ!
ಇದನ್ನೂ ಓದಿ: ‘ಭಜರಂಗಿ 2’ಗೆ ಗೆಲುವು ಸಿಗಲಿ ಎಂದು ಫ್ಯಾನ್ಸ್ ಹರಕೆ; ವಿಡಿಯೋ ಕಾಲ್ ಮಾಡಿ ಮಾತನಾಡಿದ ಶಿವರಾಜ್ಕುಮಾರ್