ದಲಿತರು ಎಂಬ ಕಾರಣಕ್ಕೆ ನೋ ಹೇರ್ ಕಟ್, ಅಸ್ಪೃಶ್ಯತೆ ಪ್ರಶ್ನಿಸಿ ಸಲೂನ್ ಮಾಲೀಕನ ವಿರುದ್ಧ ಆಕ್ರೋಶ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಣಿವೆ ಕೊಪ್ಪಲಿನಲ್ಲಿ ದಲಿತರಿಗೆ ಹೇರ್ ಕಟ್ ಮಾಡುವುದಕ್ಕೆ ನಿರಾಕರಿಸಲಾಗಿದೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಣಿವೆ ಕೊಪ್ಪಲಿನಲ್ಲಿ ದಲಿತರಿಗೆ ಹೇರ್ ಕಟ್ ಮಾಡುವುದಕ್ಕೆ ನಿರಾಕರಿಸಲಾಗಿದೆ. ಗ್ರಾಮದ ಮುಖಂಡರು ಒಪ್ಪಲ್ಲವೆಂದು ನೆಪವೊಡ್ಡಿ ದಲಿತರಿಗೆ ಹೇರ್ ಕಟ್ ಮಾಡಲು ಕ್ಷೌರ ಅಂಗಡಿಯಾತ ಒಪ್ಪದ ಘಟನೆ ನಡೆದಿದೆ.
ಸ್ವಾತಂತ್ರ್ಯ ಬಂದು 75 ವರ್ಷವಾದರೂ ಅಸ್ಪೃಶ್ಯತೆ ಹೀಗಿಲ್ಲ. ಸಾಮಾನರಾಗಿ ಬಾಳಬೇಕೆಂದು ಸಂವಿಧಾನದಲ್ಲೇ ಹೇಳಲಾಗಿದೆ. ನೀನು ಜಾತಿ ನಿಂದನೆ ಮಾಡುತ್ತಿದ್ದೀಯಾ ಎಂದು ಇಂದಿಗೂ ಬಹಿರಂಗ ಅಸ್ಪೃಶ್ಯತೆ ಆಚರಣೆ ಬಗೆಗೆ ಪ್ರಶ್ನಿಸಿ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದಾರೆ. ಈ ವೇಳೆ ಯಜಮಾನರ ತೀರ್ಮಾನ ನಾನೇನು ಮಾಡಲಿ ಎಂದು ಅಂಗಡಿಯಾತ ಸುಮ್ಮನಾಗಿದ್ದಾನೆ.
Published on: Oct 29, 2021 10:58 AM
Latest Videos