ಪುನೀತ್ ಆರೋಗ್ಯದ ಸ್ಥಿತಿ ಗಂಭೀರ; ಅಳುತ್ತಲೇ ಆಸ್ಪತ್ರೆಗೆ ಬಂದ ಶಿವರಾಜ್ಕುಮಾರ್
ಪುನೀತ್ ರಾಜ್ಕುಮಾರ್ ಆರೋಗ್ಯವನ್ನು ಸಮಸ್ಥಿತಿಗೆ ತರೋಕೆ ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಆಸ್ಪತ್ರೆಗೆ ಸೆಲೆಬ್ರಿಟಿಗಳ ದಂಡೇ ನೆರೆದಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಪುನೀತ್ ರಾಜ್ಕುಮಾರ್ ಆರೋಗ್ಯವನ್ನು ಸಮಸ್ಥಿತಿಗೆ ತರೋಕೆ ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಆಸ್ಪತ್ರೆಗೆ ಸೆಲೆಬ್ರಿಟಿಗಳ ದಂಡೇ ನೆರೆದಿದೆ.
ಶುಕ್ರವಾರ ಬೆಳಗ್ಗೆ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯ ಪುನೀತ್ ರಾಜ್ಕುಮಾರ್ ಅವರು ‘ಜೇಮ್ಸ್’ ಸಿನಿಮಾದ ಕೆಲಸಗಳತ್ತ ಗಮನ ಹರಿಸುತ್ತಿದ್ದಾರೆ. ಆ ಚಿತ್ರಕ್ಕೆ ಚೇತನ್ಕುಮಾರ್ ನಿರ್ದೇಶಕ. ಅಲ್ಲದೇ, ಪವನ್ಕುಮಾರ್ ನಿರ್ದೇಶನದ ‘ದ್ವಿತ್ವ’ ಚಿತ್ರದಲ್ಲೂ ಅಪ್ಪು ನಟಿಸುತ್ತಿದ್ದಾರೆ. ಆದರೆ ಈಗ ಅನಾರೋಗ್ಯ ಉಂಟಾಗಿರುವುದರಿಂದ ಈ ಸಿನಿಮಾಗಳ ಕೆಲಸಗಳಿಗೆ ಬ್ರೇಕ್ ಬೀಳುವುದು ಅನಿವಾರ್ಯ. ಪೂರ್ತಿ ಚೇತರಿಸಿಕೊಂಡ ಬಳಿಕವಷ್ಟೇ ಅವರು ಚಿತ್ರೀಕರಣಕ್ಕೆ ಮರಳಬೇಕಿದೆ.
ಇದನ್ನೂ ಓದಿ: ‘ಸಲಗ’ಕ್ಕೆ ಪುನೀತ್ ರಾಜ್ಕುಮಾರ್; ಪ್ರೀ-ರಿಲೀಸ್ ಇವೆಂಟ್ಗೆ ಅಪ್ಪು ಅತಿಥಿ
Puneeth Rajkumar: ಪುನೀತ್ ರಾಜ್ಕುಮಾರ್ ಆರೋಗ್ಯದಲ್ಲಿ ಏರುಪೇರು; ವಿಕ್ರಂ ಆಸ್ಪತ್ರೆಗೆ ದಾಖಲು
Published on: Oct 29, 2021 01:10 PM
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ

