Loading video

Video: ಕರಡಿಗಳ ಜತೆಗೆ ಕಾಡೆಲ್ಲಾ ಅಲೆದಾಡಿದ ಶ್ವಾನ, ಡ್ರೋನ್​​​​ ದೃಶ್ಯ ಕಂಡು ಮಾಲೀಕ ಅಚ್ಚರಿ

|

Updated on: Apr 11, 2024 | 3:08 PM

ರಷ್ಯಾದಲ್ಲಿ ಶ್ವಾನವೊಂದು ಕಮ್ಚಟ್ಕಾ ಕಾಡಿನ ಕರಡಿಗಳ ಜತೆಗೆ ಸುತ್ತಾಡಿದೆ. ಇದನ್ನು ಕಂಡು ನಾಯಿಯ ಮಾಲೀಕ ಅಚ್ಚರಿಗೊಂಡಿದ್ದಾರೆ. ಹಸ್ಕಿ ಎಂಬ ಶ್ವಾನ ತಪ್ಪಿಸಿಕೊಂಡು ಹೋಗಿ ಕಾಡಿಗೆ ಸೇರಿದೆ. ಇದನ್ನು ಹುಡುಕಲು ಮಾಲೀಕ ಡ್ರೋನ್​​​ ಉಪಯೋಗಿಸಿದ್ದಾರೆ. ಆತನಿಗೆ ಈ ಡ್ರೋನ್​​​ನಲ್ಲಿ ಕಂಡು ದೃಶ್ಯ ಅಚ್ಚರಿಗೊಳಿಸಿದೆ, ಹಸ್ಕಿ ಕಾಡು ಪ್ರಾಣಿ ಕರಡಿ ಜತೆಗೆ ಆಟವಾಡುವುದನ್ನು ಹಾಗೂ ಓಡಾಡುವುದನ್ನು ನೋಡಿದ್ದಾರೆ. ಇದೀಗ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

ಪ್ರಾಣಿಗಳು ತುಂಬಾ ಮುಗ್ಧ ಮನಸ್ಸಿನ ಜೀವಿಗಳು, ಅವುಗಳು ನಾವು ಏನು? ಮಾಡುತ್ತಿದ್ದೇವೆ ಎಂಬುದನ್ನು ಕೂಡ ಅರ್ಥ ಮಾಡಿಕೊಳ್ಳುವುದಿಲ್ಲ. ಪ್ರೀತಿ ತೋರಿಸಿದರೆ ಪ್ರೀತಿಸುತ್ತದೆ. ದ್ವೇಷಿಸಿದರೆ ದ್ವೇಷ ಮಾಡುತ್ತದೆ. ಒಟ್ಟಾರೆ ಪ್ರಾಣಿಗಳು ಮಕ್ಕಳಂತೆ, ಒಂದು ಪ್ರಾಣಿ ಇನ್ನೊಂದು ಪ್ರಾಣಿಯ ಜತೆಗೆ ಇರುವುದು ಅಪರೂಪ, ಆದರೆ ರಷ್ಯಾದಲ್ಲಿ ಶ್ವಾನವೊಂದು ಕಮ್ಚಟ್ಕಾ ಕಾಡಿನ ಕರಡಿಗಳ ಜತೆಗೆ ಸುತ್ತಾಡಿದೆ. ಇದನ್ನು ಕಂಡು ನಾಯಿಯ ಮಾಲೀಕ ಅಚ್ಚರಿಗೊಂಡಿದ್ದಾರೆ. ಹಸ್ಕಿ ಎಂಬ ಶ್ವಾನ ತಪ್ಪಿಸಿಕೊಂಡು ಹೋಗಿ ಕಾಡಿಗೆ ಸೇರಿದೆ. ಇದನ್ನು ಹುಡುಕಲು ಮಾಲೀಕ ಡ್ರೋನ್​​​ ಉಪಯೋಗಿಸಿದ್ದಾರೆ. ಆತನಿಗೆ ಈ ಡ್ರೋನ್​​​ನಲ್ಲಿ ಕಂಡು ದೃಶ್ಯ ಅಚ್ಚರಿಗೊಳಿಸಿದೆ, ಹಸ್ಕಿ ಕಾಡು ಪ್ರಾಣಿ ಕರಡಿ ಜತೆಗೆ ಆಟವಾಡುವುದನ್ನು ಹಾಗೂ ಓಡಾಡುವುದನ್ನು ನೋಡಿದ್ದಾರೆ. ಇದೀಗ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್​​ ಮೀಡಿಯಾ ಬಳಕೆದಾರರೂ ಕಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರ ಆ ಕಾಡಿನಲ್ಲಿರುವ ಶ್ವಾನವನ್ನು ಮತ್ತೆ ಮರಳಿ ಹೇಗೆ ಪಡೆದರು. ಇನ್ನೊಬ್ಬ ಬಳಕೆದಾರ ಈ ವಿಡಿಯೋ ತುಂಬಾ ಮುದ್ದಾಗಿದೆ. ಶ್ವಾನಕ್ಕೆ ಕರಡಿ ಪ್ರೀತಿ ನೀಡಿದೆ ಎಂದರೆ ಆ ಕರಡಿಯ ಮನಸ್ಸು ತಾಯಿಯದ್ದು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ