ಕೊತ್ವಾಲ ರಾಮಚಂದ್ರನ ಗರಡಿಯಿಂದ ಬಂದ ಶಿವಕುಮಾರ್ ಸ್ಟ್ರೀಟ್ ಫೈಟರ್ ಆಗದೆ ಮತ್ತೇನಾಗಲು ಸಾಧ್ಯ? ಹೆಚ್ ಡಿ ಕುಮಾರಸ್ವಾಮಿ
ತನ್ನ ಅಫಿಡವಿಟ್ ನಲ್ಲಿ ಘೋಷಿಸಿದ ಆಸ್ತಿ ವಿವರ ನೋಡಿ ಅದ್ಯಾವನೋ ಅಲೂಗಡ್ಡೆ ಮಾರಿ ಕುಮಾರಸ್ವಾಮಿ ಇಷ್ಟು ಆಸ್ತಿ ಗಳಿಸಿದರೇ ಅನ್ನುತ್ತಾನೆ, ಅವನು ಬಂದು ಬಿಡದಿಯಲ್ಲಿರುವ ತನ್ನ ತೋಟವನ್ನು ನೋಡಲಿ, ತಾನೊಬ್ಬ ರೈತನ ಮಗ, ಕಷ್ಟಪಟ್ಟು ಸಂಪಾದನೆ ಮಾಡಿದ್ದೇನೆಯೇ ಹೊರತು ಬೇರೆಯವರ ಹಾಗೆ ಸರ್ಕಾರಿ ಭೂಮಿಗಳಿಗೆ ಬೇಲಿ ಹಾಕಿ ಸಂಪಾದನೆ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಹಾಸನ: ಅರಕೂಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಪರ ಮತಯಾಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತೊಮ್ಮೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು. ಶಿವಕುಮಾರ್ ಪದೇಪದೆ ತಾನೊಬ್ಬ ಸ್ಟ್ರೀಟ್ ಫೈಟರ್ ಅಂತಿರುತ್ತಾರೆ. ಅದರಲ್ಲೇನೂ ಸಂದೇಹವೇ ಬೇಡ, ಕುಖ್ಯಾತ ರೌಡಿ ಕೊತ್ವಾಲ ರಾಮಚಂದ್ರನ ಗರಡಿಯಲ್ಲಿ ಬೆಳೆದವರು ಸ್ಟ್ರೀಟ್ ಫೈಟರ್ ಅಗದೆ ಮತ್ತೇನಾಗುತ್ತಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು. ತನ್ನ ಅಫಿಡವಿಟ್ ನಲ್ಲಿ ಘೋಷಿಸಿದ ಆಸ್ತಿ ವಿವರ ನೋಡಿ ಅದ್ಯಾವನೋ ಅಲೂಗಡ್ಡೆ ಮಾರಿ ಕುಮಾರಸ್ವಾಮಿ ಇಷ್ಟು ಆಸ್ತಿ ಗಳಿಸಿದರೇ ಅನ್ನುತ್ತಾನೆ, ಅವನು ಬಂದು ಬಿಡದಿಯಲ್ಲಿರುವ ತನ್ನ ತೋಟವನ್ನು ನೋಡಲಿ, ತಾನೊಬ್ಬ ರೈತನ ಮಗ, ಕಷ್ಟಪಟ್ಟು ಸಂಪಾದನೆ ಮಾಡಿದ್ದೇನೆಯೇ ಹೊರತು ಬೇರೆಯವರ ಹಾಗೆ ಸರ್ಕಾರಿ ಭೂಮಿಗಳಿಗೆ ಬೇಲಿ ಹಾಕಿ ಸಂಪಾದನೆ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಶ್ರೀಗಳ ಫೋನ್ ಟ್ಯಾಪ್ ಮಾಡಿದ ಅರೋಪವನ್ನು ಅಲ್ಲಗಳೆದ ಕುಮಾರಸ್ವಾಮಿ ಅದರ ಅವಶ್ಯಕತೆಯಾದರೂ ಏನಿತ್ತು. ಹಾಗೆ ಮಾಡೋದೇ ಆಗಿದ್ದರೆ ನನ್ನ ಸರ್ಕಾರ ಉರುಳದಂತೆ ಎಚ್ಚರವಹಿಸುತ್ತಿದ್ದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ, ಡಿಕೆ ನೋಟು ಡಾಕ್ಟ್ರಿಗೆ ವೋಟು ನಮ್ಮ ಸ್ಟ್ರಾಟಿಜಿ ಅಗಿದೆ: ಹೆಚ್ ಡಿ ಕುಮಾರಸ್ವಾಮಿ