ಶ್ರಾವಣ ಮಾಸದಲ್ಲೂ ಬೆಲೆ ಹೆಚ್ಚಿಸಿಕೊಂಡ ಈರುಳ್ಳಿ! ಬೆಲೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರದಿಂದ ಪ್ಲ್ಯಾನ್

|

Updated on: Aug 21, 2023 | 1:18 PM

onion price: ಮಡಿವಂತಿಕೆಯ, ಅಡುಗೆ ವ್ಯಂಜನಗಳಿಗೆ ಈರುಳ್ಳಿ ವರ್ಜ್ಯ ಎನ್ನುವ ಶ್ರಾವಣ ಮಾಸದಲ್ಲೂ ಈರುಳ್ಳಿ ತನ್ನ ಬೆಲೆಯನ್ನು ಬೆಲೆ ಹೆಚ್ಚಿಸಿಕೊಂಡಿದೆ! ಟೊಮ್ಯಾಟೋ ಬಳಿಕ ಈಗ ಈರುಳ್ಳಿ ಬೆಲೆ ಏರಿಕೆ ಸರದಿಯಾಗಿದೆ. ಈ ತಿಂಗಳಾಂತ್ಯಕ್ಕೆ ಈರುಳ್ಳಿ ದುಬಾರಿಯಾಗಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಕೆಜಿಗೆ ₹ 50 ಆಗುವ ಸಾಧ್ಯತೆಯಿದೆ. ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರದಿಂದ ಪ್ಲ್ಯಾನ್ ರೆಡಿಯಾಗಿದ್ದು, ಈರುಳ್ಳಿ ರಫ್ತು ಸುಂಕ ಹೆಚ್ಚಳ ಬೆನ್ನಲ್ಲೇ ಸಬ್ಸಿಡಿ ದರ ಫಿಕ್ಸ್ ಮಾಡಿದೆ

ಮಡಿವಂತಿಕೆಯ, ಅಡುಗೆ ವ್ಯಂಜನಗಳಿಗೆ ಈರುಳ್ಳಿ ವರ್ಜ್ಯ ಎನ್ನುವ ಶ್ರಾವಣ ಮಾಸದಲ್ಲೂ (Shravana Masa)  ಈರುಳ್ಳಿ ತನ್ನ ಬೆಲೆಯನ್ನು ಬೆಲೆ ಹೆಚ್ಚಿಸಿಕೊಂಡಿದೆ! ಟೊಮ್ಯಾಟೋ ಬಳಿಕ ಈಗ ಈರುಳ್ಳಿ ಬೆಲೆ (onion price) ಏರಿಕೆ ಸರದಿಯಾಗಿದೆ. ಈ ತಿಂಗಳಾಂತ್ಯಕ್ಕೆ ಈರುಳ್ಳಿ ದುಬಾರಿಯಾಗಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಕೆಜಿಗೆ ₹ 50 ಆಗುವ ಸಾಧ್ಯತೆಯಿದೆ. ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರದಿಂದ ಪ್ಲ್ಯಾನ್ ರೆಡಿಯಾಗಿದ್ದು, ಈರುಳ್ಳಿ ರಫ್ತು ಸುಂಕ ಹೆಚ್ಚಳ ಬೆನ್ನಲ್ಲೇ ಸಬ್ಸಿಡಿ ದರ ಫಿಕ್ಸ್ ಮಾಡಿದೆ. ಇಂದಿನಿಂದ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟವಾಗಲಿದೆ. ದೆಹಲಿಯಲ್ಲಿ ಈರುಳ್ಳಿ 25 ರೂಪಾಯಿ ಸಬ್ಸಿಡಿ ದರದಲ್ಲಿ ಮಾರಾಟವಾಗಲಿದೆ. ಎನ್​ಸಿಸಿಎಫ್ ಮೂಲಕ ಸಬ್ಸಿಡಿ ದರದಲ್ಲಿ ಈ ಈರುಳ್ಳಿ ಮಾರಾಟವಾಗಲಿದೆ.

ಒಂದು ತಿಂಗಳ ಹಿಂದೆ ಬೆಲೆಯನ್ನು ಗಗನಕ್ಕೇರಿ ರೈತರ ಬಾಳು ಹಸನಾಗಿಸಿದ್ದ ಟೊಮೆಟೊ (tomato price) ಸದ್ಯ ಪಾತಾಳಕ್ಕೆ ಕುಸಿದಿದೆ. ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ‌ ಮತ್ತಷ್ಟು ಕುಸಿದಿದೆ. ಹದಿನೈದು ಕೆಜಿ ಬಾಕ್ಸ್ ಟೊಮೆಟೊ ಕೇವಲ 200- 400 ರೂಪಾಯಿಗೆ ಹರಾಜಾಗುತ್ತಿದೆ. ಒಂದು ಕೆಜಿ ಟೊಮೆಟೊ 15- 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ