ಬೆಳಗಾವಿ ವಿಭಜನೆ: ಬೈಲಹೊಂಗಲ ನಿವಾಸಿಗಳ ಆಗ್ರಹದ ಬಳಿಕ ಅಥಣಿಯನ್ನು ಜಿಲ್ಲಾ ಕೇಂದ್ರವಾಗಿಸಬೇಕೆಂಬ ಒತ್ತಾಯ
ಇವತ್ತು ಅಥಣಿಯ ಜನ ಆಥಣಿಯನ್ನು ಜಿಲ್ಲಾಕೇಂದ್ರ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಕಾಗವಾಡ ಶಾಸಕ ರಾಜು ಕಾಗೆ ಮಾತಾಡಿ ಬಹಳ ವರ್ಷಗಳಿಂದ ಅಥಣಿಗೆ ಜಿಲ್ಲಾಕೇಂದ್ರದ ಸ್ಥಾನಮಾನ ನೀಡಬೇಕೆನ್ನುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಹೇಳಿದರು.
ಬೆಳಗಾವಿ: ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬೆಳಗಾವಿಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರಗಳಾಗಿ ಮಾಡುವ ಬಗ್ಗೆ ಇತ್ತೀಚಿಗೆ ಮಾತಾಡಿದ್ದು ವಿವಾದವನ್ನು ಹುಟ್ಟುಹಾಕಿದೆ. ಚಿಕ್ಕೋಡಿ ಮತ್ತು ಗೋಕಾಕ ಹೊರತಾದ ತಾಲ್ಲೂಕುಗಳ ನಿವಾಸಿ ಹಾಗೂ ಜನ ಪ್ರತಿನಿಧಿಗಳು ಸಹ ತಮ್ಮ ತಾಲ್ಲೂಕಿಗೂ ಜಿಲ್ಲಾ ಕೇಂದ್ರ ಸ್ಥಾನಮಾನ ಬೇಕು ಅಂತ ವರಾತ ತೆಗೆದಿದ್ದಾರೆ. ಶನಿವಾರದಂದು ಬೈಲಹೊಂಗಲದ ನಿವಾಸಿಗಳು ತಮ್ಮ ತಾಲೂಕನ್ನು ಜಿಲ್ಲಾಕೇಂದ್ರ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿ ಆ ಪ್ರಯತ್ನದಲ್ಲಿ ರಕ್ತಪಾತವಾದರೆ ಅದಕ್ಕೆ ಸರ್ಕಾರವೇ ಹೊಣೆ ಅಂತ ಎಚ್ಚರಿಸಿದ್ದರು. ಇವತ್ತು ಅಥಣಿಯ (Athani) ಜನ ಆಥಣಿಯನ್ನು ಜಿಲ್ಲಾಕೇಂದ್ರ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಕಾಗವಾಡ ಶಾಸಕ ರಾಜು ಕಾಗೆ (Raju Kage) ಮಾತಾಡಿ ಬಹಳ ವರ್ಷಗಳಿಂದ ಅಥಣಿಗೆ ಜಿಲ್ಲಾಕೇಂದ್ರದ ಸ್ಥಾನಮಾನ ನೀಡಬೇಕೆನ್ನುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ