ಇದ್ದಕ್ಕಿದ್ದಂತೆ ಕುಸಿಯುತ್ತಿದೆ ರಾಯಚೂರಿನ ಸರ್ಕಾರಿ ಶಾಲೆಯ ಮೇಲ್ಛಾವಣಿ; ದೇವರ ದಯೆ ವಿದ್ಯಾರ್ಥಿಗಳು ಪಾರು

ಇದ್ದಕ್ಕಿದ್ದಂತೆ ಕುಸಿಯುತ್ತಿದೆ ರಾಯಚೂರಿನ ಸರ್ಕಾರಿ ಶಾಲೆಯ ಮೇಲ್ಛಾವಣಿ; ದೇವರ ದಯೆ ವಿದ್ಯಾರ್ಥಿಗಳು ಪಾರು

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 28, 2022 | 4:40 PM

ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದ ಸರ್ಕಾರಿ ಶಾಲೆಯೊಂದರ ಮೇಲ್ಛಾವಣಿ ಕುಸಿದು ಬೀಳುವ ಪರಿಸ್ಥಿಯಲ್ಲಿದೆ. ಯಾವಾಗ ಕುಸಿದು ಬೀಳುತ್ತೋ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಯಚೂರು:  ತಾಲೂಕಿನ ಜೇಗರಕಲ್ ಗ್ರಾಮದ ಸರ್ಕಾರಿ ಶಾಲೆಯೊಂದರ ಮೇಲ್ಛಾವಣಿ ಕುಸಿದು ಬೀಳುವ ಪರಿಸ್ಥಿಯಲ್ಲಿದೆ.  ಯಾವಾಗ ಕುಸಿದು ಬೀಳುತ್ತೋ ಅನ್ನೋ ಆತಂಕ ದಲ್ಲಿ ವಿದ್ಯಾರ್ಥಿಗಳು ದಿನ ದೂಡುವಂತಾಗಿದೆ. 2011-2012ರಲ್ಲಿ ನಿರ್ಮಾಣವಾಗಿದ್ದ ಸರ್ಕಾರಿ ಶಾಲೆ ಇದಾಗಿದೆ. 10 ವರ್ಷಕ್ಕೆ ಶಾಲೆ ಕಟ್ಟಡ ಕುಸಿದುಬೀಳುವ ಹಂತಕ್ಕೆ ಬಂದು ತಲುಪಿದ್ದು, ಕಟ್ಟಡ ಕುಸಿಯುತ್ತಿರುವುದಕ್ಕೆ ಕಳಪೆ ಕಾಮಗಾರಿಯೇ ಕಾರಣವೆಂದು ಆರೋಪಿಸಲಾಗುತ್ತಿದೆ. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಈಗಾಗಲೇ 2-3 ಬಾರೀ ಮೇಲ್ಛಾವಣಿ ಕುಸಿದುಬಿದ್ದಿದೆ. ರಜೆ ಇದ್ದಾಗ ಒಮ್ಮೆ ಮೇಲ್ಛಾವಣಿ ಕುಸಿದಿದ್ದು, ಮತ್ತೊಮ್ಮೆ ತರಗತಿ ನಡೆಯುವಾಗಲೇ ಕುಸಿದುಬಿದ್ದಿತ್ತು. ನಿತ್ಯ ಮಕ್ಕಳು ಊಟ ಮಾಡುವ ಸ್ಥಳದಲ್ಲೇ ಕಟ್ಟಡ ಕುಸಿಯುತ್ತಿದ್ದು, ಅದೃಷ್ಟವಶಾತ್ ಯಾವುದೇ ವಿದ್ಯಾರ್ಥಿಗಳಿಗೆ ಪ್ರಾಣಹಾನಿಯಾಗಿಲ್ಲ. ಕಟ್ಟಡ ಕುಸಿತ ಭೀತಿಯಿಂದಾಗಿ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದ್ದು, ಕೂಡಲೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ.

ಇದನ್ನೂ ಓದಿ;

‘ಓಂ ಸಿನಿಮಾ ಟೈಮ್​ನಲ್ಲಿ ನನಗೆ ಬೈಯ್ಯುತ್ತಿದ್ರು’; ಆ ದಿನಗಳನ್ನು ಮೆಲುಕು ಹಾಕಿದ ನಟಿ ಪ್ರೇಮಾ