ಕಳೆದಿದ್ದ ಹದಿಹರೆಯದ ಮಗ ಬೆಂಗಳೂರಲ್ಲಿ ಸಿಕ್ಕಾಗ ಉತ್ತರದ ಭಾರತದ ಅವನಮ್ಮ ತಬ್ಬಿ ಮುದ್ದಾಡಿದ್ದು ನಮ್ಮನ್ನು ಭಾವುಕರನ್ನಾಗಿಸುತ್ತದೆ!
ಅವನಮ್ಮ ಮಗನನ್ನು ಕಂಡು ತಬ್ಬಿ ಮುದ್ದಾಡಿದ ದೃಶ್ಯ ಹೃದಯಸ್ಪರ್ಶಿಯಾಗಿದೆ ಮಾರಾಯ್ರೇ. ಅದು ನಮ್ಮೆಲ್ಲರನ್ನು ಭಾವುಕರಾಗಿಸುತ್ತದೆ.
Bengaluru: ಈ ಹದಿಹರೆಯದ ಬಾಲಕ (teenager) ಸುಹಾಸ್ ಅದ್ಯಾವ ಕಾರಣಕ್ಕೆ ಉತ್ತರ ಭಾರತದ ಯಾವುದೋ ಒಂದೂರಿನಿಂದ ಬೆಂಗಳೂರಿಗೆ ಬಂದನೋ? ಅಲ್ಲಿ ಇಲ್ಲಿ ಸುತ್ತುತ್ತ ಬಿಟಿಎಮ್ ಲೇಔಟ್ ನಲ್ಲಿ (BTM Layout) ಹಸಿವು, ನಿದ್ರೆಯಿಲ್ಲದೆ ಕಂಗಾಲಾಗಿದ್ದ ಅವನನ್ನು ಅದೇ ಏರಿಯಾದ ಕೆಲ ಯುವಕರು ನೋಡಿ ಊಟ ಬಟ್ಟೆ ಕೊಟ್ಟು ಉಪಚರಿಸಿದ್ದಾರೆ. ಆಮೇಲೆ ಫೇಸ್ಬುಕ್ ನಲ್ಲಿ (Facebook) ಅವನ ಅಣ್ಣನನ್ನು ಹುಡುಕಿ ವಿಷಯ ತಿಳಿಸಿದ್ದಾರೆ. ಬಡ ಕುಟುಂಬದವರಾದ ಅವನ ತಂದೆ ತಾಯಿಗಳಿಗೆ ದುಡ್ಡು ಹೊಂದಿಸಿಕೊಂಡು ಬೆಂಗಳೂರಿಗೆ ಬರಲು ಸುಮಾರು ಎರಡು ವಾರ ಹಿಡಿದಿದೆಯಂತೆ. ಅಲ್ಲಿಯವರೆಗೆ ಸ್ಥಳೀಯ ಯುವಕರೇ ಬಾಲಕನಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.
ಅವನಮ್ಮ ಮಗನನ್ನು ಕಂಡು ತಬ್ಬಿ ಮುದ್ದಾಡಿದ ದೃಶ್ಯ ಹೃದಯಸ್ಪರ್ಶಿಯಾಗಿದೆ ಮಾರಾಯ್ರೇ. ಅದು ನಮ್ಮೆಲ್ಲರನ್ನು ಭಾವುಕರಾಗಿಸುತ್ತದೆ. ಬಿಟಿಎಮ್ ಲೇಔಟ್ ನ ರಾಜಣ್ಣ, ಶ್ರೀಧರ್ ಮೊದಲಾದವರು ಸುಹಾಸ್ ವಿಷಯದಲ್ಲಿ ತೋರಿದ, ಪ್ರೀತಿ, ಮಾನವೀಯತೆ ಮತ್ತು ಅಂತಃಕರಣ ವಿವರಿಸಲು ಪದಗಳಿಲ್ಲ. ದೇವರು ಅವರಿಗೆ ಒಳ್ಳೇದು ಮಾತ್ರ ಮಾಡಲಿ.
ಇದನ್ನೂ ಓದಿ: Rishabh Pant: ತಾನು ಔಟಾದಾಗ ಎದುರಾಳಿ ಆಟಗಾರರ ಜೊತೆ ಸಂಭ್ರಮಿಸಿದ ರಿಷಭ್ ಪಂತ್: ವೈರಲ್ ವಿಡಿಯೋ