ಅಬ್ಬಬ್ಬಾ! ಬಾಲಕಿ ಶೂ ಒಳಗೆ ನಾಗರಹಾವು; ವಿಡಿಯೋ ಇದೆ
ಹಾವು ಇದೆ ಅಂತ ಗೊತ್ತಾದರೆ ಸಾಕು ತಿರುಗಿ ನೋಡದೆ ಓಡುತ್ತೇವೆ. ಕಾರಣ ಹಾವಿನ ಬಗ್ಗೆ ಇರುವ ಭಯ. ಸದ್ಯ ಮಳೆ ಸುರಿಯುತ್ತಿದ್ದರಿಂದ ಹಾವುಗಳು ಸಹಜವಾಗಿ ಜನ ವಾಸಿಸುವ ಸ್ಥಳಗಳತ್ತ ಕಾಣಿಸಿಕೊಳ್ಳುತ್ತವೆ.
ಮೈಸೂರು: ಹಾವು (Snake) ಎಂದರೆ ಒಂದು ಕ್ಷಣ ಎದೆ ಜಲ್ ಅನ್ನುತ್ತೆ. ಕೈ ಕಾಲುಗಳು ನಡುಗುತ್ತವೆ. ಹಾವು ಇದೆ ಅಂತ ಗೊತ್ತಾದರೆ ಸಾಕು ತಿರುಗಿ ನೋಡದೆ ಓಡುತ್ತೇವೆ. ಕಾರಣ ಹಾವಿನ ಬಗ್ಗೆ ಇರುವ ಭಯ. ಸದ್ಯ ಮಳೆ ಸುರಿಯುತ್ತಿದ್ದರಿಂದ ಹಾವುಗಳು ಸಹಜವಾಗಿ ಜನ ವಾಸಿಸುವ ಸ್ಥಳಗಳತ್ತ ಕಾಣಿಸಿಕೊಳ್ಳುತ್ತವೆ. ಮನೆ (Home) ಹೊರಗೆ ಇರುವ ಶೂಗಳಲ್ಲಿ ಹಾವುಗಳು ಬೆಚ್ಚಗೆ ಮಲಗಿರುತ್ತವೆ. ಹೀಗಾಗಿ ಶೂ ಹಾಕುವ ಮೊದಲು ಎಚ್ಚರಿಕೆಯಿಂದಿರಬೇಕು. ಇನ್ನು ಮೈಸೂರಿನ ಹೆಬ್ಬಾಳ್ ಎರಡನೇ ಹಂತದಲ್ಲಿ ಇಂದು (ಜೂನ್ 22) ಬಾಲಕಿ ಶೂ ಒಳಗೆ ಹಾವು ಅಡಗಿ ಕುಳಿತಿತ್ತು. ಶಾಲೆಗೆ ತೆರಳಲು ಶೂ ತೆಗೆದುಕೊಳ್ಳಲು ಹೋದಾಗ ಹಾವು ಕಾಣಿಸಿಕೊಂಡಿದೆ. ನಾಗರಹಾವನ್ನು ಸಂರಕ್ಷಿಸಿ ಸ್ನೇಕ್ ಶ್ಯಾಮ್ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 22, 2022 10:44 AM